ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ದೊಡ್ಡಬಳ್ಳಾಪುರದ ಮುಸ್ಲಿಂ ಸಮುದಾಯ

ದೊಡ್ಡಬಳ್ಳಾಪುರ ; ಮುಂಗಾರು ಪ್ರಾರಂಭವಾಗಿ ತಿಂಗಳು ಕಳೆದಿದ್ದರೂ ತಾಲೂಕಿನಲ್ಲಿ ಮಳೆ ಬಾರದೇ ಇರುವುದರಿಂದ ನಗರದ ಹೊಸ ಈದ್ದಾ ಮೈದಾನದಲ್ಲಿ ಮುಸ್ಲಿಮರು ಮಳೆಗಾಗಿ ಪ್ರಾರ್ಥಿಸಿ ಸಾಮೂಹಿಕ ನಮಾಜ್ ಸಲ್ಲಿಸಿದರು,

ಮುಸ್ಲಿಂ ಯೂತ್‌ ಅಸೋಸಿಯೇಷನ್ ನೇತೃತ್ವದಲ್ಲಿ ಈ ಸಾಮೂಹಿಕ ಪ್ತಾರ್ಥನೆ ನಡೆಯಿತು.

ವಿಶೇಷ ನಮಾಜ್ ಕುರಿತು ಮಾಹಿತಿ ನೀಡಿದ ಮುಸ್ಲಿಂ ಸಮುದಾಯದ ಮುಖಂಡರು, ಮಳೆಗಾಲ ಆರಂಭವಾಗಿ ತಿಂಗಳು ಮುಗಿಯುತ್ತಿದ್ದರೂ ತಾಲೂಕಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಕೆರೆ, ಹಳ್ಳ, ಕೊಳ್ಳಗಳು ಬತ್ತಿ ಹೋಗಿದ್ದು, ಜಾನುವಾರುಗಳಿಗೆ ನೀರು, ಮೇವು ದೊರಕುತ್ತಿಲ್ಲ. ಆದ್ದರಿಂದ ಜೀವ ಸಂಕುಲದ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ‌ ದೇವರ ಕೃಪೆಯಿಂದ ಆದಷ್ಟೂ ಬೇಗ ಮಳೆ ಬಂದು ಕೆರೆ-ಕುಂಟೆಗಳು ತುಂಬಿ ಜನ-ಜಾನುವಾರುಗಳಿಗೆ ಒಳ್ಳೆಯದಾಗಲಿ ಎಂದು ಅಲ್ಲಾಹ್‌ನ ಬಳಿ ಬೇಡಿಕೊಂಡಿದ್ದೇವೆ ಎಂದರು.