ಪದವೀಧರ ಕ್ಷೇತ್ರ ಚುನಾವಣೆ : ಕೆ ಆರ್ ಎಸ್ ಪಕ್ಷದಿಂದ ಜೀವನ್ ಸ್ಪರ್ಧೆ : ಮತ ನೀಡಿ ಬೆಂಬಲಿಸುವಂತೆ ಜಿಲ್ಲಾಧ್ಯಕ್ಷ ಶಿವಶಂಕರ್ ಮನವಿ
ದೊಡ್ಡಬಳ್ಳಾಪುರ: ಪದವೀಧರರ ಏಳಿಗೆಗಾಗಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಕೆ ಆರ್ ಎಸ್ ಪಕ್ಷದ ವತಿಯಿಂದ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಜೀವನ್ ಸ್ಪರ್ಧಿಸುತ್ತಿದ್ದಾರೆ ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಿಸಲು ಕೆಆರ್ ಎಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದ ಜಿಲ್ಲಾಧ್ಯಕ್ಷರಾದ ಶಿವಶಂಕರ್ ಪದವೀಧರರಲ್ಲಿ ಮನವಿ ಮಾಡಿದರು
ನಗರದ ಕೆ ಆರ್ ಎಸ್ ಪಕ್ಷದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನ ಉಳಿವಿಗಾಗಿ ಪ್ರಜಾಪ್ರಭುತ್ವದ ಅಡಿಯಲ್ಲಿ ಯಾವುದೇ ರೀತಿಯ ಆಮಿಷಗಳನ್ನು ಮತದಾರರಿಗೆ ನೀಡದೆ ಭ್ರಷ್ಟಾಚಾರ ರಹಿತ ಚುನಾವಣೆ ನಡೆಸುವುದು ನಮ್ಮ ಪಕ್ಷದ ಸಿದ್ದಂತವಾಗಿದೆ ಅಂತೆಯೇ ಈ ಬಾರಿಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಪದವೀಧರರು, ಯುವಕರು ಆದ ಜೀವನ್ ಸ್ಪರ್ಧಿಸುತ್ತಿದ್ದು . ಕ್ಷೇತ್ರದ ಪದವೀಧರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿದ್ದಾರೆ ಎಂದರು.
ಹಣ, ಹೆಂಡ ಸೇರಿದಂತೆ ಇತರೆ ಅಮಿಷಗಳನ್ನು ಮತದಾರರಿಗೆ ಒಡ್ಡುವ ಮೂಲಕ ಮತ ಪಡೆಯುವ ಹುನ್ನಾರ ನೆಡೆಯುತ್ತಿದೆ. ಆದರೆ ಕ್ಷೇತ್ರದ ಪದವೀಧರನ್ನು ಯಾಮಾರಿಸುವುದು ಅಷ್ಟು ಸುಲಭದ ಮಾತಲ್ಲ, ಅವರು ಪ್ರಜ್ಞಾವಂತರಾಗಿದ್ದು. ಈ ಬಾರಿ ತಮ್ಮ ಮತವನ್ನು ಕೆಆರ್‌ಎಸ್ ಪಕ್ಷಕ್ಕೆ ನೀಡುವ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕೆ ಆರ್ ಎಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಇಚ್ಚಿಸುವ ಆಕಾಂಕ್ಷಿಗಳು ಪಕ್ಷದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವಂತೆ ಮನವಿ ಮಾಡಿದರು.
ಸುದ್ದಿಗೊಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಜಿಲ್ಲಾ ಕಾರ್ಯದರ್ಶಿ ಮಾರುತಿ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.