ಜಕ್ಕಲ ಮಡುಗು ನೀರನ್ನು ಎಲ್ಲಾ ಗ್ರಾಮಗಳಿಗೂ ಪೂರೈಸುವಂತೆ ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಅರ್ಕಾವತಿ ಹೋರಾಟ ಸಮಿತಿ

ದೊಡ್ಡಬಳ್ಳಾಪುರ:ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಅಂತರ್ಜಲ ನೀರು ಕಲುಷಿತಗೊಂಡಿದ್ದು, ಎರಡು ಗ್ರಾಮ ಪಂಚಾಯಿತಿಗಳ ಗ್ರಾಮಗಳಿಗೆ ಜಕ್ಕಲಮಡಗು ನೀರು ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ, ಆದರೆ ನಗರಸಭೆಯಿಂದ ಅಸಮರ್ಪಕ ನೀರು ಪೂರೈಕೆಯಾಗುತ್ತಿದ್ದು, ಎಲ್ಲಾ ಗ್ರಾಮಗಳಿಗೂ ಜಕ್ಕಲಮಡಗು ನೀರು ಪೂರೈಸುವಂತೆ ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ಪೌರಾಯುಕ್ತರಿಗೆ ಮನವಿ ಮಾಡಿದರು.

ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರಿನಿಂದಾಗಿ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳು ಕಲುಷಿತ ಗೊಂಡಿದೆ, ಜೊತೆಗೆ ಅಂತರ್ಜಲ ನೀರು ಕುಡಿಯುಲ ಯೋಗ್ಯವಾಗಿಲ್ಲ ಎಂಬ ವರದಿ ಸಹ ಬಂದಿದೆ, ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ನಡೆಸಿತ್ತು, ಜಿಲ್ಲಾ ಉಸ್ತುವರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು ಜಕ್ಕಲಮಡಗು ನೀರು ಪೂರೈಸುವಂತೆ ಹೇಳಿದ್ದು, ಟ್ಯಾಂಕರ್ ಮೂಲಕ ಎರಡು ಪಂಚಾಯಿತಿಗಳ ಎಲ್ಲಾ ಗ್ರಾಮಗಳಿಗೂ ಜಕ್ಕಲಮಡಗು ನೀರು ಪೂರೈಸುವಂತೆ ಆದೇಶಿಸಿದ್ದರು.

ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಿಂದ ಎರಡು ಪಂಚಾಯಿತಿಗಳಿಗೆ ಜಕ್ಕಲಮಡಗು ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಎರಡು ಗ್ರಾಮ ಪಂಚಾಯಿತಿ ಎಲ್ಲಾ ಗ್ರಾಮಗಳಿಗೂ ಸಮಪರ್ಕವಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ, ಎಲ್ಲಾ ಗ್ರಾಮಗಳಿಗೂ ಜಕ್ಕಲಮಡಗು ನೀರು ಪೂರೈಸುವಂತೆ ಅರ್ಕಾವತಿ ನದಿ ಹೋರಾಟ ಸಮಿತಿ ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಪೌರಾಯುಕ್ತರು ಜಿಲ್ಲಾಧಿಕಾರಿಗಳ ಆದೇಶದಂತೆ 10 ಟ್ಯಾಂಕರ್ ಗಳಿಂದ ಜಕ್ಕಲಮಡಗು ನೀರು ಪೂರೈಕೆ ಮಾಡಲಾಗುತ್ತಿದೆ, ಎಲ್ಲಾ ಗ್ರಾಮಗಳಿಗೂ ನೀರು ಸಮರ್ಪಕ ರೀತಿಯಲ್ಲಿ ಪೂರೈಕೆ ಮಾಡುವುದ್ದಾಗಿ ಹೇಳಿದರು.

ಈ ಸಂದರ್ಭದಲ್ಲಿ ಅರ್ಕಾವತಿ ಹೋರಾಟ ಸಮಿತಿ ಮುಖಂಡರು ಹಾಜರಿದ್ದರು.