MNC ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಕರವೇ : ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಅಗ್ರಹ

ದೊಡ್ಡಬಳ್ಳಾಪುರ:ಹೊರದೇಶಗಳಿಂದ ಕರ್ನಾಟಕಕ್ಕೆ ಬಂದು ವ್ಯಾಪಾರ ನಡೆಸುತ್ತಿರುವ ಹಲವಾರು ಎಂಎನ್‌ಸಿ ಕಂಪನಿಗಳಲ್ಲಿ ಅರ್ಹತೆ ಇದ್ದರೂ ಕನ್ನಡಿಗರನ್ನು ಕೇವಲ ಸಹಾಯಕರ ಹುದ್ದೆಗಳಿಗೆ ನೇಮಿಸಿಕೊಂಡು ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂಎನ್‌ಸಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಆಗ್ರಹಿಸಿದ್ದಾರೆ.

ಹಲವಾರು ಎಂಎನ್‌ಸಿ ಕಂಪನಿಗಳಲ್ಲಿ ಕನ್ನಡಿಗರು ನಿರಂತರವಾಗಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಆದರೆ ಈವರೆಗೂ ಅವರಿಗೆ ಕಂಪನಿಗಳು ಉತ್ತಮ ಸ್ಥಾನಮಾನ ನೀಡಿಲ್ಲ ಎಂಬುದು ವಿಪರ್ಯಾಸ..

ಅರ್ಹತೆ ಇಲ್ಲದೆ ಇದ್ದರೂ ಹೊರ ರಾಜ್ಯಗಳಿಂದ ಬಂದ ಎಷ್ಟೋ ಮಂದಿಗೆ ಉತ್ತಮ ಹುದ್ದೆ ನೀಡಿ ಕೈ ತುಂಬಾ ಸಂಬಳ ಕೊಡುವ ಕಾರ್ಖಾನೆಗಳು ಕನ್ನಡಿಗರಿಗೆ ಮಾತ್ರ ಕೈಗೆ ಚಿಪ್ಪು ನೀಡುತ್ತಿದೆ. ಈ ಧೋರಣೆ ಬದಲಾಗಬೇಕಿದೆ.