ಕಾಡನೂರು ಗ್ರಾಮದಲ್ಲೊಂದು ಪವಾಡ!ಕಣ್ಬಿಟ್ಟ ಮಹೇಶ್ವರಂ ದೇವರ ವಿಗ್ರಹ ಪವಾಡವೆಂದ ಗ್ರಾಮಸ್ಥರು

ದೊಡ್ಡಬಳ್ಳಾಪುರ : ಕಾಡನೂರು ಗ್ರಾಮದ ಮಹೇಶ್ವರಂ ದೇವಸ್ಥಾನದಲ್ಲಿನ ಮಹೇಶ್ವರಂ ವಿಗ್ರಹ ಕಣ್ಬಿಟ್ಟಿದ್ದು, ದೇವರ ಪವಾಡವೆಂದು ಜನರು ದೇವರ ದರ್ಶನ ಪಡೆಯುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾಮದಲ್ಲಿ ಇಂದು ಸಂಜೆ ಘಟನೆ ನಡೆದಿದ್ದು, ಇಂದು ದೇವಸ್ಥಾನದಲ್ಲಿ ಗುರುಪೂಜೆ ಕಾರ್ಯಕ್ರಮ ಇದ್ದು, ಭಕ್ತರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,

ಪೂಜೆಯ ನಂತರ ಮಹೇಶ್ವರಂ ವಿಗ್ರಹದಲ್ಲಿ ಮನುಷ್ಯನ ರೀತಿ ಕಣ್ಬಿಟ್ಟಿರುವ ರೀತಿಯಲ್ಲಿ ಭಕ್ತರಿಗೆ ತಿಳಿಯುತ್ತದೆ, ಇದು ಮಹೇಶ್ವರಂ ದೇವಿಯ ಪವಾಡ ಎಂದು ಭಕ್ತರು ಭಾವಿಸಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ದೇವಿಯ ಪವಾಡ ನೋಡಲು ಬರುತ್ತಿದ್ದಾರೆ.