ಪಂಚಾಯ್ತಿಗಳ ಮೇಲೆ ಲೋಕಾಯುಕ್ತರ ದಾಳಿ

ದೊಡ್ಡಬಳ್ಳಾಪುರ: ದೊಡ್ಡತುಮಕೂರು ಹಾಗು ಮಜರಾ ಹೊಸಹಳ್ಳಿ ಸೇರಿದಂತೆ  ವಿವಿದ ಗ್ರಾಮ ಪಂಚಾಯಿತಿಗಳಿಗೆ ಉಪಲೋಕಾಯುಕ್ತ ಬಿ ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಗ್ರಾಮ ಪಂಚಾಯಿತಿ ದುರಾಡಳಿತ ಹಾಗು ಅವ್ಯವಹಾರ ನಡೆಯುತ್ತಿದೆ ಎಂಬ ಸಾರ್ವಜನಿಕರ,ದೂರಿನ ಮೇರೆಗೆ ಉಪಲೋಕಾಯುಕ್ತ. ಬಿ ವೀರಪ್ಪ  ಖುದ್ದು ಗ್ರಾಮ ಪಂಚಾಯಿತಿಗಳಿಗೆ ಬೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು.
 ನಂತರ ಒಂದು ಪಂಚಾಯಿತಿಯಲ್ಲಿ ಪರಿಶೀಲನೆ ನಡೆಸಿ ಮತ್ತೂಂದು ಪಂಚಾಯಿತಿಗೆ ತೆರಳುವ ವೇಳೆ ಮಾರ್ಗ ಮದ್ಯದಲ್ಲಿ ಶಾಲಾ ವಾಹನ ನಿಲ್ಲಿಸಿ ಶಾಲಾ ಮಕ್ಕಳ ಜೊತೆ ಕೆಲಕಾಲ ಸಂವಾದ ನಡೆಸಿ ನಾನು ಉಪಲೋಕಾಯುಕ್ತ ಬಿ. ವೀರಪ್ಪ ಎಂದು ಪರಿಚಯ ಮಾಡಿಕೊಂಡು ಶಾಲಾ ಮಕ್ಕಳ ಪರಿಚಯ ಮಾಡಿಕೊಂಡು ಮಕ್ಕಳಿಗೆ ಚನ್ನಾಗಿ ವಿದ್ಯಾಭ್ಯಾಸ ಮಾಡಿ ತಂದೆ ತಾಯಿ ಊರು ತಾಲ್ಲೂಕು ರಾಜ್ಯ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು , ದೇಶದ ಮಹಾನಿಯರ ಸಾಲಿನಲ್ಲಿ ಸುಭಾಷ್ ಚಂದ್ರ ಭೋಸ್ ಮಹಾತ್ಮ ಗಾಂಧಿ ಡಾ.ಬಿ.ಆರ್ ಅಂಬೇಡ್ಕರ್, ಭಗತಸಿಂಗ್ ,ಸಂಗೊಳ್ಳಿ ರಾಯಣ್ಣ ನಂತಹ ಮಾರ್ಗವನ್ನ ನೀವು ಅನುಸರಿಸಿ ಅನ್ಯಾಯ ಭ್ರಷ್ಠಾಚಾರ ಅಪರಾಧಗಳಿಂದ ದೂರ ಇರುವಂತೆ ಸೂಚನೆ ನೀಡಿದರು .
 ಯಾವುದೆ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ನಮಗೆ ದೂರು ನೀಡುವಂತೆ ತಮ್ಮ ಮೊಬೈಲ್ ನಂಬರ್ ನೀಡಿದರು.
ನಂತರ ಮಾಧ್ಯಮಗಳೂಂದಿಗೆ ಮಾತನಾಡಿ ದೊಡ್ಡ ತುಮಕೂರು ಗ್ರಾಮ ಪಂಚಾಯತಿಯಲ್ಲಿ ಕನ್ಸ್ಟೆಕ್ಷನ್ ಗೆ ಸಂಬಂದ ಪಟ್ಟ ಲೆಟರ್ ಹೆಡ್ ಗಳು ಖಾಲಿ ಖಾಲಿಯಾಗಿವೆ ಅನುಗ್ರಹ ಕೆಮಿಕಲ್ ಕಾರ್ಖಾನೆ ಯಿಂದ ಮಳೆಗಾಲದಲ್ಲಿ ರೈತರಿಗೆ ಬಾರಿ ತೊಂದರೆ ಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ ಎಂದು
ಚುನಾವಣೆ ಸಂದರ್ಭದಲ್ಲಿ ಹಣ ಪಡೆದು ಮತ  ಮಾರಿಕೊಂಡರೆ ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ಹುಟ್ಟಿಕೊಳ್ಳುತ್ತಾರೆ .ಅದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಈ ನಿಟ್ಟಿನಲ್ಲಿ ನಾವೆಲ್ಲರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಅಗಸ್ಟ್ 3 ರಂದು ದೊಡ್ಡಬಳ್ಳಾಪುರ ತಾಲ್ಲೂಕು ಕಛೇರಿ ಶಾಲಾ ಮಕ್ಕಳ ಹಾಸ್ಟಲ್ ಗಳು ಸಾರ್ವಜನಿಕ ಅಸ್ಪತ್ರೆ ಬೇಟಿ ನೀಡಿ ಪರಿಶೀಲನೆ ನಡೆಸಲಾದ ಸಮಯದಲ್ಲಿ  ಆಸ್ಪತ್ರೆಯಲ್ಲಿರುವ ಶೌಚಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದು ಹಾಗು ಹಾಸ್ಟಲ್ ಮಕ್ಕಳಿಗೆ ಬಿಸಿನೀರು ವ್ಯವಸ್ಥೆ ಇಲ್ಲದಿರುವುದು  ಕಂಡು ಬಂದಿತ್ತು ಅದ್ದರಿಂದ ಅವುಗಳ ಮೇಲೆ ದೂರು ದಾಖಲಿಸಿದ್ದೇವೆ ಮತ್ತು ಇಪ್ಪತ್ತು ದಿನಗಳ ಒಳಗೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು