*ಅಂಗನವಾಡಿ ಕೇಂದ್ರಗಳ ಸ್ಥಾಪನೆಯ ಮೂಲ ಉದ್ದೇಶ ಬಡ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದಾಗಿದೆ–ಕೆ.ಬಿ.ಗೀತಾ
ಬೆಂಗಳೂರು:ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ದಿನಾಂಕಃ 14.08.2024 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ, ಜಿಲ್ಲೆಯ ಕೆಲವು ಅಂಗನವಾಡಿ ಕೇಂದ್ರಗಳಿಗೆ ಆಕಸ್ಮಿಕ ಬೇಟಿ ನೀಡಿ ಪರಿಶೀಲನೆ ನೆಡೆಸಿ ವರದಿ ಸಲ್ಲಿಸಿರುವ ಕುರಿತು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಕೆ. ಬಿ. ಗೀತಾ ತಿಳಿಸಿದರು.
*ಒಟ್ಟು ಅಂಗನವಾಡಿಗಳು ಎಸ್ಟಿವೆ…??*
ಆನೇಕಲ್ ತಾಲ್ಲೂಕಿನಲ್ಲಿ ಒಟ್ಟು 467, ಹೊಸಕೋಟೆ ತಾಲ್ಲೂಕಿನಲ್ಲಿ ಒಟ್ಟು 247, ನೆಲಮಂಗಲ ತಾಲ್ಲೂಕಿನಲ್ಲಿ ಒಟ್ಟು 287, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಟ್ಟು 379 ಹಾಗೂ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 232 ಅಂಗನವಾಡಿ ಕೇಂದ್ರಗಳು ಹೀಗೆ ಜಿಲ್ಲೆಯಾದ್ಯಂತ ಒಟ್ಟು 1612 ಅಂಗನವಾಡಿ ಕೇಂದ್ರಗಳಿದೆ.
ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಆಗಸ್ಟ್ 14ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸದಸ್ಯ ಕಾರ್ಯದರ್ಶಿಯವರು ತಾಲ್ಲೂಕಿನ ಕಣಿವೆ ಪುರ, ಹೆಗ್ಗಡೆ ಹಳ್ಳಿ ಗ್ರಾಮ, ಅಚರಲ ಹಳ್ಳಿ ದಂಡ ದಾಸರಹಳ್ಳಿ, ಲಿಂಗನ ಹಳ್ಳಿ, ಕೋಣ ಘಟ್ಟ -2 ಮತ್ತು ಕೋಣ ಘಟ್ಟ -1 ಹೀಗೆ ಒಟ್ಟು 7 ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ, ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮೂಲ ಉದ್ದೇಶ ಬಡ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದಾಗಿರುತ್ತದೆ ಆದರೆ ಸ್ಥಳೀಯ ಅಂಗನವಾಡಿಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸರಿಪಡಿಸುವ ಅಗತ್ಯವಿದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
*ಸ್ಥಳೀಯ ಅಂಗನವಾಡಿಗಳಲ್ಲಿ ಏನೆಲ್ಲಾ ಸಮಸ್ಯೆಗಳಿವೆ*
*ಮಕ್ಕಳಿಗೆ ಅಪೌಷ್ಟಿಕ ಆಹಾರ ( ಅನ್ನ ಮತ್ತು ತಿಳಿ ಸಾರು ) ನೀಡಲಾಗುತ್ತಿದೆ.
*ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಅವದಿ ಮುಗಿದ ಪೌಷ್ಟಿಕ ಆಹಾರಗಳ ಪ್ಯಾಕೇಟ್‌ಗಳು, ಅವಧಿ ಮುಗಿದ ಹಾಲಿನ ಪೌಡರ್‌ಗಳ ಪ್ಯಾಕೇಟ್‌ಗಳು ಸಿಕ್ಕಿರುತ್ತವೆ.
*ಮಕ್ಕಳಿಗೆ ಪ್ರತೇಕವಾದ ಆಟದ ಮೈದಾನ ಇರುವುದಿಲ್ಲ.
*ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾದ ಆಟಿಕೆ ಸಾಮಾನುಗಳು ಕಂಡುಬಂದಿರುವುದಿಲ್ಲ.
*ಅಂಗನವಾಡಿ ಗಳಲ್ಲಿ ಮಕ್ಕಳಿಗೆ ಶೌಚಾಲಯದ ಕೋಣೆಗಳು ಇರುವುದಿಲ್ಲ *ಕೆಲವು ಕೇಂದ್ರಗಳಲ್ಲಿ ಸಹಾಯಕ ಸಿಬ್ಬಂದಿ ಇರಲಿಲ್ಲ.
*ಸುಮಾರು ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ಗೋಡೆಗಳ ಕೊರತೆ ಇದೆ.
*ಮಕ್ಕಳಿಗೆ ಸಮರ್ಪಕವಾದ ಬೆಳಕಿನ ವ್ಯವಸ್ಥೆ ಇಲ್ಲ,ಬೆಳಕಿನ ಅಭಾವ ಕಂಡುಬಂದಿರುತ್ತದೆ.
*ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಮತ್ತು ಕೆಲವು ಪಂಚಾಯಿತಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಅಂಗನವಾಡಿಗಳ ವಾಸ್ತವ ಸ್ಥಿತಿ ಕುರಿತಂತೆ ಪ್ರಾಧಿಕಾರದಿಂದ ಮಾನ್ಯ ರಾಜ್ಯ ಪ್ರಾಧಿಕಾರಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸಲಾಗುತ್ತಿದೆ. ಈ ಅಂಗನವಾಡಿ ಕೇಂದ್ರಗಳಿಗೆ ತಕ್ಷಣ ಜಿಲ್ಲಾ ಆಡಳಿತವು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕೊರತೆ ಇರುವ ಎಲ್ಲಾ ಸೌಲಭ್ಯ ಗಳನ್ನು ತಕ್ಷಣ ಒದಗಿಸುವಂತೆ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಮತ್ತು ಕಾರ್ಯದರ್ಶಿಗಳಾದ ಬೋಲಾ ಪಂಡಿತ್ ಸೇರಿದಂತೆ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.