ಹಳ್ಳಿಕಾರ್ ತಳಿ ಬಗ್ಗೆ ಅಪಪ್ರಚಾರ… ವರ್ತೂರ್ ಸಂತೋಷ್ ವಿರುದ್ಧ ಅಂಬರೀಷ್ ಆಕ್ರೋಶ
ದೊಡ್ಡಬಳ್ಳಾಪುರ:ರಾಜ್ಯದಲ್ಲಿ ಹಳ್ಳಿಕಾರ್ ತಳಿ ಹಸುಗಳನ್ನು ಕುರಿತಂತೆ ಅಪಪ್ರಚಾರ ಮಾಡಲಾಗುತ್ತಿದೆ, ಯಾವುದೇ ಅಧಿಕೃತ ಆಧಾರಗಳಿಲ್ಲದೆ ಸುಳಿಗಳ ಹೆಸರಿನಲ್ಲಿ ಹಳ್ಳಿಕರ್ ತಳಿಗಳನ್ನು ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಳ್ಳಿ ರೈತ ಅಂಬರೀಶ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು .
ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ಸ್ಪರ್ದಿ ವರ್ತುರ್ ಸಂತೋಷ್ ರವರು ಹಳ್ಳಿಕಾರ್ ಹಸುಗಳನ್ನು ಕುರಿತಂತೆ ಕೆಲ ಸುಳಿಗಳ ಬಗ್ಗೆ ಮಾತನಾಡಿದ್ದಾರೆ, ಈ ವಿಡಿಯೋಗಳಿಂದ ಹಳ್ಳಿಕಾರ್ ತಳಿ ಹಸುಗಳನ್ನು ಖರೀದಿ ಮಾಡುವ ಹಾಗೂ ಮಾರಾಟ ಮಾಡುವ ರೈತರಿಗೆ ನಷ್ಟ ಉಂಟಾಗುತ್ತದೆ. ಹಳ್ಳಿ ರೈತರಿಗೆ ನ್ಯಾಯ ದೊರಕಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಗ್ ಬಾಸ್ ಸ್ಪರ್ಧಿ ವರ್ತುರ್ ಸಂತೋಷ್ ಅವರನ್ನು ಬೆಂಬಲಿಸಿ ಪ್ರಶಾಂತ್ ಸಾಂಬರಗಿ ಹಾಗೂ ಪುನೀತ್ ಕೆರೆಹಳ್ಳಿ ಮಾತನಾಡಿದ್ದಾರೆ. ನಿಜವಾದ ರೈತಪರ ನಿಲುವಲು ಅವರು ತೆಗೆದುಕೊಳ್ಳಬೇಕಿದೆ. ಈ ರೀತಿ ಹಳ್ಳಿಕಾರ್ ತಳಿ ಹಸುಗಳ ಬಗ್ಗೆ ಅಪಪ್ರಚಾರ ಸಲ್ಲದು, ವರ್ತೂರ್ ಸಂತೋಷ್ ರವರನ್ನು ಗೋ ರಕ್ಷಕ ಎಂದು ಬಿಂಬಿಸಿರುವ ಪ್ರಶಾಂತ್ ಸಾಂಬರಗಿ ಹಾಗೂ ಪುನೀತ್ ಕೆರೆಹಳ್ಳಿ ಈ ಕೂಡಲೇ ಹಳ್ಳಿ ರೈತರ ಪರ ಧ್ವನಿ ಆಗಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಳ್ಳಿಕಾರ್ ತಳಿಗಳನ್ನು ಕುರಿತ ಅಪಪ್ರಚಾರದ ವಿಡಿಯೋಗಳನ್ನು ಡಿಲೀಟ್ ಮಾಡಿಸುವ ಕೆಲಸ ಆಗಬೇಕಿದೆ ಎಂದರು.
ಈ ಕುರಿತು ಸಂಬಂದಿಸಿದ ಇಲಾಖೆಗೂ ದೂರು ನೀಡಿದ್ದು , ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ಹಳ್ಳಿ ರೈತ ಅಂಬರೀಷ್ ತಿಳಿಸಿದರು.
Post Views: 119