ಮಳೆಗಾಗಿ ಇಬ್ಬರು ಯುವಕರ ಮದುವೆ ಮಾಡಿ ಪ್ರಾರ್ಥನೆ
ದೊಡ್ಡಬಳ್ಳಾಪುರ: ಮಳೆಗಾಗಿ ಇಬ್ಬರ ಯುವಕರ ಮದುವೆ ಮಾಡಿ ಪ್ರಾರ್ಥನೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೋಕಿನ ಪಚ್ಚಾರಲಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೈಕೊಟ್ಟ ಮಳೆಯಿಂದಾಗಿ ಬಿತ್ತಿದ ಬೆಳೆಗಳು ಒಣಗುತಿದೆ ಹಾಗಾಗಿ ಯುವಕರ ಮದುವೆ ಮಾಡಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಈ ರೀತಿ ಮದುವೆ ಮಾಡಲಾಗಿದೆ,ಒಬ್ಬ ಯುವಕನಿಗೆ ಯುವತಿಯ ರೀತಿ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ ಹುಡುಗನಿಗೆ ಪೇಟ ಬಾಸಿಂಗ ಕಟ್ಟಿ ಗ್ರಾಮಸ್ತರೆಲ್ಲಾ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ.
ವರದಿ:ಶಿವರಾಜ್ ನೇಸರ