ಗೋಡೆ ಕುಸಿತದಿಂದ ಮೃತ ಪಟ್ಟ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಎ ಆರ್ ಕೃಷ್ಣಮೂರ್ತಿ
ಚಾಮರಾಜನಗರ:ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಬಾಗಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗೋಡೆ ಕುಸಿದು ಮೃತಪಟ್ಟಿದ್ದ ಚಂದ್ರನಾಯಕ ಅವರ ಧರ್ಮಪತ್ನಿ ಶ್ರೀಮತಿ ಕಾವೇರಿ ಅವರಿಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಆರ್. ಕೃಷ್ಣಮೂರ್ತಿ ರವರು ಪ್ರಕೃತಿ ವಿಕೋಪ ಅನುದಾನದಡಿ ಇಂದು 6 ಲಕ್ಷದ 20 ಸಾವಿರ ರೂಪಾಯಿಗಳ ಚೆಕ್ ಅನ್ನು ವಿತರಿಸಿದರು.
ಈ ವೇಳೆ ಶಾಸಕರು ಮಾತನಾಡಿ ನೊಂದ ಕುಟುಂಬಕ್ಕೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಫಟನೆ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈಗಾಗಲೇ ಚಂದ್ರನಾಯಕ ಅವರ ಪತ್ನಿ ಖಾತೆಗೆ ಪರಿಹಾರದ ಹಣವನ್ನು ಆನ್‌ಲೈನ್ ಮೂಲಕ ಜಮಾ ಮಾಡಲಾಗಿತ್ತು. ಅದರ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ. ಬರುವ ಪರಿಹಾರದ ಹಣವನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಎಚ್‌ವಿ. ಚಂದ್ರು ರವರು‚ ಚಾಮುಲ್ ನಾಮನಿರ್ದೇಶಿತ ಸದಸ್ಯರಾದ ಕಮರವಾಡಿ ರೇವಣ್ಣ ರವರು‚ ಬ್ಲಾಕ್ ಅಧ್ಯಕ್ಷರಾದ ತೋಟೇಶ್ ರವರು‚ ಪಕ್ಷದ ಮುಖಂಡರಾದ ಕಂದಳ್ಳಿ ನಂಜುಂಡಸ್ವಾಮಿ ತಹಶೀಲ್ದಾರ್ ಗಿರಿಜಾ . ಕಂದಾಯ ಪರಿವೀಕ್ಷಕ ಸತೀಶ್ ಹಾಗೂ ಹಲವು ಮುಖಂಡರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ