ದೊಡ್ಡ ತುಮಕೂರು ವಿ. ಎಸ್. ಎಸ್. ಎನ್ ಚುನಾವಣೆ.. ಕಾಂಗ್ರೆಸ್ ಬಿ. ಜೆ. ಪಿ ಕಾರ್ಯಕರ್ತರ ಕಿತ್ತಾಟದಿಂದ ಎಣಿಕೆ ಸ್ಥಗಿತ
ದೊಡ್ಡಬಳ್ಳಾಪುರ: ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಇಂದು ನಿಗದಿ ಮಾಡಲಾಗಿತ್ತು. ಚುನಾವಣಾ ಫಲಿತಾಂಶಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ತೀವ್ರ ಗುದ್ದಾಟ ನಡೆಸುತ್ತಿದ್ದು,ಫಲಿತಾಂಶ ಹೊರ ಬಿಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರೆ. ಇಂದೇ ಫಲಿತಾಂಶ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿರು
ಈ ಹಿನ್ನೆಲೆ ದೊಡ್ಡಬಳ್ಳಾಪುರದ ದೊಡ್ಡತುಮಕೂರಿನ ವ್ಯವಸಾಯ ಸೇವಾ ಸಹಕಾರ ಸಂಘದ ಮುಂದೆ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸಪಟ್ಟರು.
ಫಲಿತಾಂಶ ಪ್ರಕಟಿಸುವಂತೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಪಟ್ಟು ಹಿಡಿದು
ಸಂಘದ ಕಚೇರಿ ಮುಂದೆ ಕುಳಿತು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು ಶಾಸಕರ ಧೋರಣೆಯನ್ನು ಖಂಡಿಸಿ ಡಿ.ಪಿ.ಎ ಅದ್ಯಕ್ಷರಾದ ಚುಂಚೇಗೌಡರು ಹಾಗು ಜೆ.ಡಿ.ಎಸ್ ನ ಹರೀಶ್ ಗೌಡರ ಬೆಂಬಲಿಗರು ಪ್ರತಿಭಟನೆ ನಡೆಸಲು ಮುಂದಾದರು
ಕೋರ್ಟ ಆದೇಶದಂತೆ ತೀರ್ಪು ಪ್ರಕಟಿಸದ ಚುನಾವಣಾ ಅಧಿಕಾರಿಗಳು. 181 ಮತಗಳಿಗೆ ಎಣಿಕೆ ಮಾಡುವಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯ ಮಾಡುತ್ತಿರುವುದು ಕಂಡುಬರುತ್ತದೆ ಅಂತಿಮವಾಗಿ ಯಾವುದೇ ನಿರ್ದಾರ ಪ್ರಕಟಿಸದೆ ಉಭಯ ಪಕ್ಷಗಳ ಒತ್ತಡ ಹೆಚ್ಚಾದ ಕಾರಣ ಚುನಾವಣಾ ಅಧಿಕಾರಿಗಳು ಮತ ಪೆಟ್ಟಿಗೆಯನ್ನು ಸೀಜ್ ಮಾಡಿ ಸ್ಟ್ರಾಂಗ್ ರೂಮ್ ಗೆ ವಾಪಸ್ ತಗೆದುಕೊಂಡು ಹೋದರು.