ವಾಯು ಮಾಲಿನ್ಯ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು: ಗಾಯತ್ರಿ

ಚಾಮರಾಜನಗರ: ಪರಿಸರದಲ್ಲಾಗುವ ವಾಯುಮಾಲಿನ್ಯ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಅವರು ತಿಳಿಸಿದರು.
ನಗರದ ಆರ್ ಟಿ ಒ ಕಚೇರಿಯಲ್ಲಿ ಸಾರಿಗೆ ಇಲಾಖೆ ವತಿಯಿಂದ ನಡೆದ ವಾಯುಮಾಲಿನ್ಯ ನಿಯಂತ್ರಣ ಮಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ವಾಹನಗಳಿಂದ ಬಿಡುಗಡೆಯಾಗುವ ಹೊಗೆಯಿಂದ ಹೆಚ್ಚಾಗುತ್ತಿದೆ ಅದರಿಂದ ಜೀವಿಗಳ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಆದ್ದರಿಂದ ಅದನ್ನ ತಡೆಗಟ್ಟಲು ಇಲಾಖೆ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸ ಎಂದು ಪ್ರತಿವರ್ಷ ಆಚರಣೆ ಮಾಡಿ ಜಾಗೃತಿ ಮೂಡಿಸಲಾಗುತ್ತದೆ.ಇಂತಹ ಕಾರ್ಯಕ್ರಮಗಳ ಜಾಗೃತಿಯಿಂದ ಪರಿಸರದಲ್ಲಾಗುವ ಮಾಲಿನ್ಯ ತಡೆಗಟ್ಟಿ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಅಲ್ಲದೆ ವಾಹನ ಸವಾರರು ವಾಹನಗಳ ದಾಖಲೆ ಇಟ್ಟುಕೊಂಡು ವಾಹನಗಳನ್ನು ಓಡಿಸಬೇಕು ಅಪಘಾತವಾದಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕ ನಾಗೇಂದ್ರ ಎ ಎಸ್, ಅಧಿಕ್ಷಕ ದೀಪ, ಕಮರ್ ಶೆಟ್ಟಿ, ಸಂತೋಷ್, ಪವಿತ್ರ ಇದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ