ದೇಮಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಮಹೇಶ್ ಜಿ ಆಯ್ಕೆ

ಸಂತೇಮರಹಳ್ಳಿ : ಚಾಮರಾಜನಗರ ತಾಲ್ಲೋಕಿನ ದೇಮಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಜಿ ಜಯಶಾಲಿಯಾಗಿದ್ದಾರೆ.

ಇಂದಿನ ಅಧ್ಯಕ್ಷ ಪುನೀತ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಜಿ ನಾಮಪತ್ರ ಸಲ್ಲಿಸಿದರು.

ನಂತರದ ಚುನಾವಣೆ ಪ್ರಕ್ರಿಯೆಯಲ್ಲಿ ಮಹೇಶ್ ಜಿ 10 ಮತಗಳು ಹಾಗೂ ಪ್ರತಿ ಸ್ಪರ್ಧೆ ಕಮರವಾಡಿ ಮಹೇಶ್ ರವರಿಗೆ 6 ಮತಗಳು ಲಭಿಸಿದವು,

ನೂತನ ಅಧ್ಯಕ್ಷರಾಗಿ ಮಹೇಶ್ ಜಿ. ಆಯ್ಕೆಯಾದರು ನಂತರ ಮಾತನಾಡಿ ನಮ್ಮ ಗ್ರಾ ಪಂಚಾಯಿತಿಗೆ ಒಳಪಡುವ 7 ಗ್ರಾಮದ ಎಲ್ಲಾ ಸದಸ್ಯರು ಹಾಗೂ ಸಹಕರಿಸಿದ ಎಲ್ಲಾ ಕಾಂಗ್ರೇಸ್ ಪಕ್ಷದ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು

ಈ ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಮೂಲ ಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಜಮ್ಮ , ಸದಸ್ಯರಾದ ಡಿ ಕೆ ಶಿವಕುಮಾರ್ , ಸುಮಿತ್ರಾ, ಬಸವಣ್ಣ, ಪುನೀತ್, ನೀಲಾಂಬಿಕೆ, ಜಯಲಕ್ಷ್ಮಿ, ಭಾಗ್ಯಮ್ಮ , ಪುನೀತ್,ಲತಾ ನಾಗಾರ್ಜುನ ಹಾಗೂ ಚುನಾವಣೆ ಅಧಿಕಾರಿ (ಭೂ ಮತ್ತು ಗಣಿ ವಿಜ್ಞಾನ ಇಲಾಖೆ ) ಪುಷ್ಪಾ, ಚಾಮುಲ್ ನಿರ್ದೇಶಕ ರೇವಣ್ಣ, ಮುಖಂಡರಾದ ಡಿ ಎನ್ ಮಾದಪ್ಪ, ಡಿ ಪಿ ಶಿವಕುಮಾರ್, ನಟರಾಜ್ ಬಿ ಸಿ, ಶಿವನಾಗಣ್ಣ, ಸಿದ್ದನಾಯಕ್, ಎಲ್ ಐ ಸಿ ನಟರಾಜ್, ನಂಜುಂಡಪ್ಪ, ಬಿ ಸಿ ಮಹೇಶ್ ಮತ್ತಿತರರು ಇದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ