ಜಿಲ್ಲಾ ಬಿ.ಜೆ.ಪಿ ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮ.
ಕೊಳ್ಳೇಗಾಲ:ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಕಾರ್ಯಕ್ರಮವನ್ನು ಉದ್ಘಾಟಿಸಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ,ಬಿಜೆಪಿಯ ಯಾರೋ ಇಬ್ಬರೂ ನಾಯಕರು ತಲೆ ಕೆಟ್ಟು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದನ್ನೇ ಕಾಂಗ್ರೆಸ್‌ನವರು ಇನ್ನು ಕೂಡ ದೇಶದ ಜನತೆ ಮುಂದೆ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಯಾರೇ ಬಂದರು ಕೂಡ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯ ಇಲ್ಲಾ ನಮ್ಮ ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಟವಾದ ಸಂವಿಧಾನ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ಸಂವಿಧಾನದಡಿಯಲ್ಲೇಯೇ ಆಡಳಿತ ನಡೆಸಬೇಕು ಇದು ಅಂಬೇಡ್ಕರ್ ರವರು ಕೊಟ್ಟು ಕೊಡುಗೆ
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅನೇಕ ಅಪಮಾನ ನೋವುಗಳನ್ನು ಅನುಭವಿಸಿ ಪದವಿಗಳನ್ನು ಪಡೆದು ದೇಶದ ಶೋಷಿತರ, ಅಲ್ಪಸಂಖ್ಯಾತರ, ಹಿಂದುಳಿದವರ, ವಿಮೋಚನೆಗಾಗಿ ಹೋರಾಟವನ್ನು ಮಾಡಿ ಸಂವಿಧಾನವನ್ನು ಕೊಟ್ಟಿದ್ದಾರೆ ವಿಶ್ವದಲ್ಲಿಯೇ ಯಾರು ಅಂಬೇಡ್ಕರ್ ರವರಷ್ಟು ಓದಲು ಸಾಧ್ಯ ಇಲ್ಲಾ ಇಡಿ ವಿಶ್ವದಲ್ಲೇಯೇ ಅತೀ ಹೆಚ್ಚು ಪದವಿಗಳನ್ನು ಪಡೆದವರು ಎಂಬ ಕೀರ್ತಿ ಅಂಬೇಡ್ಕರ್ ರವರಿಗೆ ಇದೆ ಆದ್ದರಿಂದಲೆ ಅಂಬೇಡ್ಕರ್ ರವರನ್ನು ವಿಶ್ವ ನಾಯಕ ಎಂಬ ಪಟ್ಟವು ಇದೆ ಅಂದಿನ ಕಾಂಗ್ರೆಸ್ ನವರು ಮುಖ್ಯವಾಗಿ ಗಾಂಧೀಜಿ ಮತ್ತು ಅವರ ಪಾರಿವಾರ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದನ್ನು ಜನರು ಮರೆಯಬಾರದು, ಆದರೆ ಈಗ ಕಾಂಗ್ರೆಸ್ ನವರು ನಮ್ಮದು ಸಂವಿಧಾನ ಬದ್ದವಾದ ಸರ್ಕಾರ ಸಂವಿಧಾನ ರಕ್ಷಕರೂ ನಾವು ಎಂದು ಹೇಳಿಕೊಳ್ಳುತ್ತಾರೆ ಇವರು ಸಂವಿಧಾನಕ್ಕೆ ಗೌರವ ಕೊಡುವುದಾದರೆ ಎಸ್ಸಿ ಗಳಿಗೆ ಯಾಕೆ ಮುಖ್ಯಮಂತ್ರಿ ಮಾಡುತ್ತಿಲ್ಲ, ಹಿರಿಯ ನಾಯಕರು ಮಲ್ಲಿಕಾರ್ಜುನ ಖರ್ಗೆಯವರು ಇದ್ದಾರೆ, ಎಚ್ ಸಿ ಮಹದೇವಪ್ಪರವರು, ಜಿ. ಪರಮೇಶ್ವರ್ ರವರು ಇದ್ದಾರೆ ಅವರಲ್ಲಿ ಯಾರನ್ನಾದ್ರೂ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ ಯಾಕೆ ಅವರಿಗೆ ಅವಕಾಶ ಕೊಡುತ್ತಿಲ್ಲ,
ಕಾಂಗ್ರೆಸ್ ನವರು ನಾವು ಸಂವಿಧಾನದ ಪರ ಸಾಮಾಜಿಕ ನ್ಯಾಯದ ಪರ ಎಂದು ಹೇಳುತ್ತಾರೆ ಆದರೆ ಹಿರಿಯ ನಾಯಕರಾದ ಶ್ರೀನಿವಾಸ್ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಮಹದೇವಪ್ಪ, ಪರಮೇಶ್ವರ್ ರವರಿಗೆ ಅನ್ಯಾಯ ಮಾಡಿದ್ದಾರೆ
ಕಾಂಗ್ರೆಸ್ ನವರು ನಿಜವಾಗಿಯೂ ಸಂವಿಧಾನ ಪರವಾದ ಪಕ್ಷವೆ ಆಗಿದ್ದರೆ, ಅಂಬೇಡ್ಕರ್ ರವರಿಗೆ ಗೌರವ ಕೊಡುವುದರೆ ದಲಿತರನ್ನು ಮುಖ್ಯಮಂತ್ರಿ ಮಾಡಲಿ,
ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ . ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಸಿಕೊಂಡಿದೆ. 75 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿಸಿಕೊಂಡಿದೆ. ದೇಶದಲ್ಲಿ ಎಲ್ಲಿಯೂ ಕೂಡ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದು ಹೇಳಿದರು. ಬಿಜೆಪಿಯನ್ನು ಮೀಸಲಾತಿ ವಿರೋಧಿ ಪಕ್ಷ ಎಂದು ಹೇಳುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಎಸ್ಸಿಗೆ ಶೇ.15 ನಿಂದ ಶೇ.18ಗೆ, ಎಸ್ಟಿಗೆ 3 ರಿಂದ 7 ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ ಎಂದು ತಿಳಿಯಬೇಕು ಎಂದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದ ಜಮ್ಮು-ಕಾಶ್ಮೀರದ ಜನರಿಗೆ 370 ನೇ ವಿಧಿಯನ್ನು ರದ್ದುಗೊಳಿಸಿ, ದೇಶಾದ್ಯಂತ ಜನರಿಗೆ ಸಿಗುವ ಎಲ್ಲಾ ಮೂಲಭೂತ ಸೌಕರ್ಯ ಸಿಗುವಂತೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣವನ್ನು ಮುಂದುವರಿಸುತ್ತಾ ಬಂದಿದೆ ಎಂದರು
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷಗಳು ಕಳೆದಿದ್ದು ಈವರೆಗೂ ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ ದೇಶದಲ್ಲಿ 75 ವರ್ಷಗಳ ರಾಜ್ಯಭಾರ ನಡೆಸಿರುವ ಕಾಂಗ್ರೆಸ್ ಸಂವಿಧಾನದಲ್ಲಿ ಒಟ್ಟು 106 ತಿದ್ದುಪಡಿಗಳನ್ನು ಮಾಡಿದೆ ಎಂದರು.
ಇದಕ್ಕೂ ಮುನ್ನ ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್
ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಗಣ್ಯರು ಬಳಿಕ ಭ್ರಮರಾಂಬ ಕಲ್ಯಾಣಮಂಟಪದ ತನಕ ಬೈಕ್ ರ್ಯಾಲಿ ನಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರು ಸಿ. ಎಸ್. ನಿರಂಜನ್ ಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಉಪಾಧ್ಯಕ್ಷರು ಏನ್ ಮಹೇಶ್
ಮಾಜಿ ಶಾಸಕರಾದ ಎಸ್ ಬಾಲರಾಜ್, ಮಾಜಿ ವಿಧಾನ ಪರಿಷತ್ ಪ್ರೊ ಮಲ್ಲಿಕಾರ್ಜುನ ಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಕೊಡ ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷರು ಎಂ ರಾಮಚಂದ್ರ, ಡಾಕ್ಟರ್ ಬಾಬು, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಹನೂರು ಜನಧ್ವನಿ ವೆಂಕಟೇಶ್, ನೂರೊಂದಶೆಟ್ಟಿ, ಜಯ ಸುಂದರ, ಆರ್ ಸುಂದರ ಮೂರ್ತಿ, ಚಂದ್ರು, ಜಿಲ್ಲಾ ಉಪಾಧ್ಯಕ್ಷರು ಅರಕಲವಾಡಿ ನಾಗೇಂದ್ರ, ನಟರಾಜ್ ಗೌಡ, ರೇವಣ್ಣ, ಬೂದಿ ತಿಟ್ಟು ಶಿವಕುಮಾರ್,ಮಹೇಶ್, ಮಂಡಲ ಅಧ್ಯಕ್ಷರು ಗಳು ಚಿಂತು ಪರಮೇಶ್, ಅನಿಲ್, ವೃಷಬೇಂದ್ರೆ, ಸಾಹಿತಿ ಕೋಡಿ ಉಗನೇ ಮಂಜು, ಶ್ರೀ ಧರ್ ಎಸ್ಸಿ, ಮೋರ್ಚಾ ಮಂಡಲ್ ಸಿದ್ದಪ್ಪ ಮೋರ್ಚಾ ಅಧ್ಯಕ್ಷರು ಮಂಡಲ್ ಪದಾಧಿಕಾರಿಗಳು ಹಾಗೂ ಇನ್ನಿತರರು ಇದ್ದರು.





