--ಜಾಹೀರಾತು--

*_ನೂತನ ಪಂಪ್‌ಸೆಟ್ ನೀತಿಗೆ ರೈತರ ವಿರೋಧ.

On: December 18, 2025 7:25 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ನೂತನ ಪಂಪ್‌ಸೆಟ್ ನೀತಿಗೆ ರೈತರ ವಿರೋಧ.

ಕೃಷ್ಣರಾಜಪೇಟೆ:ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಅಕ್ರಮ-ಸಕ್ರಮ ವಿದ್ಯುತ್ ಪಂಪ್‌ಸೆಟ್ ನೀತಿ ರದ್ದುಪಡಿಸಿ ಹಳೆಯ ನೀತಿಯನ್ನೇ ಮುಂದುವ ರಿಸಬೇಕು ಎಂದು ತಾಲೂಕು ರೈತಸಂಘದ ಕಾರ್ಯಕರ್ತರು ಆಗ್ರಹಿಸಿದರು._

_ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಇಲಾಖೆ ವತಿಯಿಂದ ಆಯೋಜಿಸಿದ್ದ ತ್ರೈಮಾಸಿಕ ಜನಸಂಪರ್ಕ ಸಭೆಯಲ್ಲಿ ರೈತರು ಈ ಒತ್ತಾಯ ಮಾಡಿದರು._

_ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಈ ಹಿಂದಿನ ಸರಕಾರ ಅಕ್ರಮ ವಿದ್ಯುತ್ ಸಂಪರ್ಕಗಳ ಸಕ್ರಮಕ್ಕೆ ಪ್ರತಿ ಪಂಪ್ ಸೆಟ್‌ ಗೆ 14 ಸಾವಿರ ರೂ. ನಿಗದಿಪಡಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರಕಾರ ಅದನ್ನು 25 ಸಾವಿರ ರೂ.ಗಳಿಗೆ ಏರಿಸಿ ಸುಲಿಗೆ ಮಾಡುತ್ತಿದೆ. ಯಾವುದೇ ಬೆಳೆಗಳ ಬೆಲೆ ಹೆಚ್ಚಾಗಿಲ್ಲ. ಆದರೆ, ಸರಕಾರ ವಿದ್ಯುತ್ ಬೆಲೆ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ನಮಗೆ ರಾಜ್ಯ ಸರಕಾರದ ಯಾವುದೇ ಬಿಟ್ಟಿ ಭಾಗ್ಯಗಳ ಅಗತ್ಯ ವಿಲ್ಲ, ಬದಲಾಗಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿ, ನಿತ್ಯ ಗುಣಮಟ್ಟದ ವಿದ್ಯುತ್ ಪೂರೈಸಲಿ” ಎಂದು ಆಗ್ರಹಿಸಿದರು._

_ನಿತ್ಯ ರಾತ್ರಿ 8.45ರಿಂದ 11.45 ಮತ್ತು ಬೆಳಗಿನ ಜಾವ 4.45ರಿಂದ 8.45ರವರೆಗೆ ಕೃಷಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ತಾಲೂಕಿ ನಾದ್ಯಂತ ಚಿರತೆಗಳ ಹಾವಳಿ ಇರುವುದರಿಂದ ರೈತರು ಜೀವ ಭಯದಲ್ಲಿ ಹೊಲ, ಗದ್ದೆಗಳಿಗೆ ಹೋಗಿ ನೀರು ಹಾಯಿಸಬೇಕಿದೆ. ರಾತ್ರಿ 11.45ಕ್ಕೆ ಮನೆಗೆ ಬರುವ ರೈತ ಮತ್ತೆ ಬೆಳಗಿನ ಜಾವ 4.45ರ ವೇಳೆಗೆ ಗದ್ದೆಗಳಿಗೆ ನೀರು ಹಾಯಿಸಲು ಹೋಗಬೇಕಾದ ಸ್ಥಿತಿಯಿದೆ. ಈ ಸಮಯವನ್ನು ಬದಲಿಸಿ ಹಗಲಿನ ವೇಳೆ ವಿದ್ಯುತ್ ನೀಡಲಿ” ಎಂದು ಆಗ್ರಹಿಸಿದರು.

ಸೆಸ್ಕ್ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾತನಾಡಿ, “ಅಕ್ರಮ ಸಕ್ರಮ ನೀತಿ ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು, ಈ ಕುರಿತು ರೈತರ ವಿರೋಧವನ್ನು ಮೇಲಧಿ ಕಾರಿಗಳ ಗಮನಕ್ಕೆ ತರಲಾಗುವುದು. ತಾಲೂಕಿನ ಕೃಷ್ಣಾಪುರ ದಲ್ಲಿರುವ ಅಲೆಮಾರಿ ಜನಾಂಗದವರು ನಿಯಮಾನುಸಾರ ನಿಗಮಕ್ಕೆ ನಿಗದಿತ ಹಣ ಪಾವತಿಸಿದರೆ ಅವರಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಅಲೆಮಾರಿ ಜನಾಂಗದ ಬೀದಿಗಳಿಗೆ ಅಗತ್ಯವಾದ ಬೀದಿ ದೀಪಗಳ ವ್ಯವಸ್ಥೆ ಯನ್ನು ಆಯಾ ಗ್ರಾಮ ಪಂಚಾಯಿತಿ ವತಿ ಯಿಂದ ಹಾಕಬೇಕು. ತಾಲೂಕಿನಲ್ಲಿ ಸುಮಾರು 1710 ತೋಟದ ಮನೆಗಳಿದ್ದು, ಇವುಗಳಿಗೆ ಕೃಷ್ಣರಾಜಪೇಟೆಯ ಸೆಸ್ಕ್ ಉಪ ವಿಭಾಗೀಯ ಕಚೇರಿಯಲ್ಲಿನ ತ್ರೈ ಮಾಸಿಕ ಜನಸಂಪರ್ಕ 3 ಸಭೆಯಲ್ಲಿ ರೈತರು ಮಾತನಾಡಿದರು._

_ಎನ್.ಜೆ.ವೈ ಯೋಜನೆಯಡಿ 5-6 ಮನೆಗಳಿಗೆ ಒಂದು ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲು ಯೋಜಿಸಿದ್ದು, ತೋಟದ ಮನೆ ವಾಸಿ ಗಳು ಸ್ವಂತ ಖರ್ಚಿನಲ್ಲಿ ಸ್ವಯಂ ಕಾಮಗಾರಿ ಯಡಿ ಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು” ಎಂದರು.

ರೈತ ಮುಖಂಡರಾದ ಕಾರಿಗನಹಳ್ಳಿ ಪುಟ್ಟೇಗೌಡ, ಮರುವನಹಳ್ಳಿ ಶಂಕರ್, ಮುದ್ದು ಕುಮಾರ್, ನಗರೂರು ಕುಮಾರ್, ಹೊನ್ನೇ ಗೌಡ, ಚೌಡೇನಹಳ್ಳಿ ಕೃಷ್ಣಗೌಡ, ಲಕ್ಷ್ಮೀಪುರ ನಾಗರಾಜು, ಹರಳಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕರ್ತೇನಹಳ್ಳಿ ಸುರೇಶ್, ಮುಖಂಡ ವಡಕಹಳ್ಳಿ ಮಂಜೇಗೌಡ ಮಾತನಾಡಿದರು.

_ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮಪ್ಪ, ವಿವಿಧ ವಿಭಾಗಗಳ ನಿರ್ವಹಣಾ ಎಂಜಿನಿಯರುಗಳಾದ ಫಾಸಿಲ್, ಕೆ.ಆರ್.ಹರೀಶ್, ಶಂಕರ್, ಶಿವಕುಮಾರ್, ಶಿವರಾಂ, ಸುನೀಲ್, ಶ್ರೀಕಾಂತ್, ಶುಭಾಂಕ್, ಶಿವಶಂಕರ ಮೂರ್ತಿ ಮತ್ತಿತರರು ಸಭೆಯಲ್ಲಿದ್ದರು._

*_ವರದಿ: ಸಾಯಿಕುಮಾರ್. ಎನ್‌. ಕೆ_*