--ಜಾಹೀರಾತು--

ಹಿರಿಯ ಉಪ ನೊಂದಣಾಧಿಕಾರಿ ನಾರಾಯಣಪ್ಪನವರ ಕರ್ತವ್ಯ ನಿಷ್ಠೆ ಮಾಧರಿಯಾಗಿದೆ -ಮುನಿವೀರಣ್ಣ

On: December 18, 2025 8:37 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಹಿರಿಯ ಉಪ ನೊಂದಣಾಧಿಕಾರಿ ನಾರಾಯಣಪ್ಪನವರ ಕರ್ತವ್ಯ ನಿಷ್ಠೆ ಮಾಧರಿಯಾಗಿದೆ -ಮುನಿವೀರಣ್ಣ

ಚಿಕ್ಕಬಳ್ಳಾಪುರ: ಹಿರಿಯ ಉಪ ನೊಂದಣಾಧಿಕಾರಿಗಳಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿರುವ ಶ್ರೀ ನಾರಾಯಣಪ್ಪ ಸರ್ ರವರನ್ನು ಇಂದು ಅವರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ತಿಗಳರ (ವನ್ನಿಕುಲ ಕ್ಷತ್ರಿಯ)ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ಜೆ ಆರ್ ಮುನಿವೀರಣ್ಣ, ಚಿಕ್ಕಬಳ್ಳಾಪುರದ SRS ದೇವರಾಜ್, ರಾಜ್ಯ ಸಂಘದ ನಿರ್ದೇಶಕರಾದ ಎನ್ ಕನಕರಾಜು, ಪತ್ರಕರ್ತರು ಹಾಗೂ ಜಿಲ್ಲಾ ಪತ್ರಬರಹ ಗಾರರಾದ ಎನ್ ಸಿ ಮುನಿವೆಂಕಟರಮಣ, ಬೂದಿಗೆರೆಯ ಕಂಡಕ್ಟರ್ G ನಾರಾಯಣಸ್ವಾಮಿ, ವಿಜಯಪುರ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಕೆ ವಿ ಮುನಿರಾಜು ಹಾಗೂ ಖಜಾಂಚಿ ತರಕಾರಿ ಆರ್ ರಮೇಶ್ ರವರು ಅಭಿನಂದಿಸಿ ಶುಭ ಕೋರಿದರು.
ಲಂಚ ಸ್ವೀಕರಿಸುವುದಿಲ್ಲ ಎಂಬುದಾಗಿ ಬೋರ್ಡ್ ಹಾಕಿ ಸಾರ್ವಜನಿಕರಿಗೆ ಸದಾ ಸ್ಪಂದಿಸಿ ಜನತೆಯ ಮೆಚ್ಚಿಗೆಗೆ ಪಾತ್ರರಾಗಿರುವ ನಮ್ಮ ಜನಾಂಗದ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಯನ್ನು ಅಭಿನಂದಿಸುವುದು ನಮ್ಮ ಹೆಮ್ಮೆಯ ವಿಚಾರ ವಾಗಿದೆ, ನಾರಾಯಣಪ್ಪ ನವರ ಕರ್ತವ್ಯ ನಿಷ್ಠೆ ಎಲ್ಲಾ ಅಧಿಕಾರಿಗಳಿಗೆ ಮಾಧರಿಯಾಗಿದೆ ಎಂದು ಕರ್ನಾಟಕ ರಾಜ್ಯ ತಿಗಳರ (ವನ್ನಿಕುಲ ಕ್ಷತ್ರಿಯ)ಸಂಘದ ಸಂಘಟನಾ ಕಾರ್ಯದರ್ಶಿ ಜೆ ಆರ್ ಮುನಿವೀರಣ್ಣ ಅಭಿಪ್ರಾಯ ಪಟ್ಟರು,
ಪತ್ರಕರ್ತರು ಹಾಗೂ ಜಿಲ್ಲಾ ಪತ್ರ ಬರಹಗಾರರಾದ ಎನ್ ಸಿ ಮುನಿವೆಂಕಟರಮಣ ಮಾತನಾಡಿ ನಾರಾಯಣಪ್ಪ ಸರ್ ಹಿರಿಯ ಉಪ ನೊಂದಣಾಧಿಕಾರಿಗಳಾಗಿ ಬಂದು ಕೆಲವೇ ದಿನದಲ್ಲಿ ಲಂಚ ಮುಕ್ತ ಕಛೇರಿಯಾಗಿ ಪರಿವರ್ತಿಸಿ ಜನತೆಗೆ ಸ್ಪಂದಿಸುತ್ತಿರುವುದು ಹೆಮ್ಮಯ ವಿಚಾರ ವಾಗಿದೆ ಎಂದು ತಿಳಿಸಿದರು.