ಗಂಧದ ಮರ ಕದಿಯುತ್ತಿದ್ದ ಕಳ್ಳರ ಬಂಧನ
ತುರುವೇಕೆರೆ: ತಾಲ್ಲೂಕಿನ ವಾಸಿಯಾದ ರವಿಕುಮಾರ್ ಬಿ ಎಸ್ ಬಿನ್ ಸಿದ್ದೇಗೌಡ ಎಂಬುವರ ಜಮೀನಿನಲ್ಲಿದ್ದ ಸುಮಾರು ಮೂರು ಸಾವಿರ ರೂ ಬೆಲೆ ಬಾಳುವ ಗಂಧದ ಮರಗಳ ಕಳ್ಳತನವಾಗಿದ್ದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಆಕ್ಟ್ ಕಲಂ 303(2) ಪ್ರಕಾರ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬೆನ್ನೆತ್ತಿದ ಪೊಲೀಸರು ಕೊನೆಗೂ ಗಂಧದ ಮರ ಕಳ್ಳರನ್ನು ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಗಂಧದ ಮರ ಕಳ್ಳತನ ಮಾಡುವವರ ಬಂಧನಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕುಣಿಗಲ್ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ಓಂ ಪ್ರಕಾಶ್ ರವರ ಮಾರ್ಗಸೂಚನೆ ಮೇರೆಗೆ ತುರುವೇಕೆರೆ ಸಿ ಪಿ ಐ ಲೋಹಿತ್, ಪಿಎಸ್ಐ ಮೂರ್ತಿ ಟಿ. ಪಿಎಸ್ಐ ಮೂರ್ತಿ ಕೆ ವಿ. ಹಾಗೂ ಸಿಬ್ಬಂದಿಗಳಾದ ರಾಜಕುಮಾರ ವಗ್ಗೇರಿ, ನವೀನ್ ಕುಮಾರ್ ಡಿವಿ, ಒಳಗೊಂಡಂತೆ ಅಪರಾಧ ಪತ್ತೆ ತಂಡವನ್ನು ರಚಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಗಂಧದ ಮರ ಕಳ್ಳರಾದ ತುರುವೇಕೆರೆ ತಾಲೂಕಿನ A
ಹೊಸಹಳ್ಳಿ ಗ್ರಾಮದ ಹನುಮಂತಯ್ಯ ಬಿನ್ ಸಿದ್ದಯ್ಯ (50) ,ಹೇಮಂತ್ ಬಿನ್ ಲೇಟ್ ತಿಮ್ಮಯ್ಯ (40) ಹಾಗೂ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿ ಚಾಕೇನಹಳ್ಳಿ ಗ್ರಾಮದ ಮಂಜುನಾಥ ಬಿನ್ ಲೇಟ್ ಕಾಳಶೆಟ್ಟಿ(41) ಮತ್ತು ಶಿರಾ ತಾಲೂಕಿನ ಶಿರಾ ಟೌನ್ ಮೇಗಳಪೇಟೆ ವಾಸಿ ಚಾದ್ರಿ ರುಹುಲ್ಲ ಬಿನ್ ಲೇಟ್ ಚಾದ್ರಿ ಬಸೀರ್ ಸಾಬ್ (57) ವರ್ಷ ದ ನಾಲ್ಕು ಜನರನ್ನು ಮಾಲು ಸಮೇತ ವಶ ಪಡಿಸಿಕೊಂಡಿದ್ದು, ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ರವರು ಪ್ರಶಂಸಿದ್ದಾರೆ.
ವರದಿ: ಮಂಜು ಗುರುಗದಹಳ್ಳಿ





