ಬಮೂಲ್ ಚುನಾವಣೆಗೆ ದೇವನಹಳ್ಳಿ ಕ್ಷೇತ್ರದಿಂದ ಸಾವಕನಹಳ್ಳಿ ಡೈರಿ ಅದ್ಯಕ್ಷ ಎಸ್.ಪಿ ಮುನಿರಾಜ್ ಅವರನ್ನು ಬುಧವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ
ದೇವನಹಳ್ಳಿ ಗ್ರಾಮಾಂತರ : ತಾಲ್ಲೂಕಿನ ಕತ್ತಿಮಾರಮ್ಮ ದೇವಸ್ಥಾನದಲ್ಲಿ ಬಮೂಲು ಚುನಾವಣೆ ಹಿನ್ನೆಲೆಯಲ್ಲಿ ಆಹಾರ ಪೂರೈಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್.ಮುನಿಯಪ್ಪ ಅವರ ಅದ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಮೂಲು ಅಭ್ಯರ್ಥಿ ಆಯ್ಕೆ ಸಂಬಂಧ ಕರೆಯಲಾಗಿದ್ದ ತಾಲ್ಲೂಕಿನ ಡೈರಿ ಅದ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ದೇವನಹಳ್ಳಿ ಕ್ಷೇತ್ರದಿಂದ ಬಮೂಲ್ ಚುನಾವಣೆಗೆ ಎಸ್.ಪಿ ಮುನಿರಾಜು ಅವರನ್ನು ಅಭ್ಯರ್ಥಿ ಆಗಿ ಆಯ್ಕೆ ಮಾಡುತಿದ್ದೇವೆ. ರೈತರಿಗೆ ಡೈರಿಯ ಎಲ್ಲ ಅದ್ಯಕ್ಷರು ಸಹಕಾರ ನೀಡಬೇಕು.
ಹಿಂದಿನ ಸರ್ಕಾರಗಳು ಡೈರಿಗಳ ಅಭಿವೃದ್ದಿ ಕಡೆಗಣಿಸಿದ್ದರು, ನಮ್ಮ ಸರ್ಕಾರ ಜಾರಿಗೆ ಬಂದ ನಂತರ ಹಾಲು ಉತ್ಪಾಧಕ ರೈತರಿಗೆ ಪ್ರತಿ ಲೀಟರಿನ ಮೇಲೆ ೪ ರೂ ಹೆಚ್ಚಳ ಮಾಡಿ ರೈತರಿಗೆ ಅನುಕೂಲವಾಗಿದೆ. ಎಸ್.ಪಿ ಮುನಿರಾಜು ಅವರು ಮತದಾರರ ಬಳಿ ತೆರಳಿ ಮತಯಾಚಿಸಬೇಕು. ಈ ಭಾಗದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಚುನಾವಣೆ ಎದುರಿಸಬೇಕೆಂದರು.
ದೇವನಹಳ್ಳಿ ಬಮೂಲ್ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುನಿರಾಜು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಕೆಎಚ್.ಮುನಿಯಪ್ಪ ಅವರು ಹಾಗೂ ತಾಲ್ಲೂಕು ಮುಖಂಡರ ಸಹಕಾರದಿಂದ ಮತ್ತೊಮ್ಮೆ ದೇವನಹಳ್ಳಿ ಬಮೂಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದೆ ಮಾಡಲು ಅವಕಾಶಸಿಕ್ಕಿದೆ. ಕಳೆದ ಬಾರಿ ೯ ಮತಗಳ ಅಂತರದಲ್ಲಿ ಪರಾಭವಗೊಂಡಿದೆ. ನಮ್ಮ ಪಕ್ಷದಿಂದ ಅನೇಕರು ನಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಡೈರಿಗಳಲ್ಲಿ ಅದ್ಯಕ್ಷರಾಗಿದ್ದಾರೆ, ಅವರ ಪ್ರೀತಿ, ವಿಶ್ವಾಸಗಳಿಸಿ, ಗ್ರಾಮೀಣ ಭಾಗದ ಹೈನುಗಾರಿಕೆಯ ಪ್ರಗತಿಗೆ ಶ್ರಮಿಸಲು ನನಗೆ ಮತಧಾನ ಮಾಡುವಂತೆ ಕೋರುವುದಲ್ಲದೆ. ಡೈರಿಗಳ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಲ್ಲೂಕಿನಲ್ಲಿ ೧೬೩ ಮತದಾರರು ಇದ್ದಾರೆ. ಬೆಂಗಳೂರಿನ ಪಕ್ಕದ ತಾಲ್ಲೂಕಿನ ಕ್ಷೇತ್ರಕ್ಕೆ ೨೦ ಮತದಾರರು ಸೇರ್ಪಣೆ ಆಗಿವೆ. ಈ ಬಾರಿ ಉತ್ತಮ ವಾತವರಣವಿದೆ. ಈ ಬಾರಿಯಾದರು ನನ್ನ ಮೇಲೆ ಅನುಕಂಪತೊರಿ ಗೆದ್ದು ಬರಲು ಎಲ್ಲ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಪ್ರಸನ್ನಕುಮಾರ್, ರಾಮಚಂದ್ರಪ್ಪ, ಬಿದಲೂರು ಗ್ರಾಮ ಪಂಚಾಯಿತಿ ಅದ್ಯಕ್ಷ ನಾಗರಾಜು, ಮುಖಂಡರಾದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾದ್ಯಕ್ಷ ಚನ್ನಹಳ್ಳಿ ರಾಜಣ್ಣ, ತಾಲ್ಲೂಕು ಅದ್ಯಕ್ಷ ಜಗನ್ನಾಥ್, ಮುಖಂಡರಾದ ಚಿನ್ನಪ್ಪ, ದೊಡ್ಡತತ್ತಮಂಗಲ ರಮೇಶ್, ಮಾಜಿ ಡೈರಿ ಅದ್ಯಕ್ಷ ಸುರೇಶ್, ಜಾಳಿಗೆ ಮುರಳಿ, ಡೆವಿಡ್ ನಾರಾಯಣಸ್ವಾಮಿ, ಬೀಮೇಶ್, ದೇವರಾಜು, ಯಲಿಯೂರು ಮುನಿರಾಜು ಸೇರಿದಂತೆ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.