ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಪಕ್ಷ ದಿಂದ ಇರಿಗೇನಳ್ಳಿ ಶ್ರೀನಿವಾಸ್ ಅಧಿಕೃತ ಅಭ್ಯರ್ಥಿ : ಮುನೇಗೌಡ

ದೇವನಹಳ್ಳಿ :ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕರ ಚುನಾವಣೆ 2025 ರ ಮೇ 25 ರಂದು ನಡೆಯು ಸಂಬಂಧ ಪತ್ರಿಕಾಗೋಷ್ಠಿಯಲ್ಲಿ
ಇರಿಗೇನಹಳ್ಳಿ ಶ್ರೀನಿವಾಸ್ ರವರನ್ನು ಪಕ್ಷದ ಅಭ್ಯರ್ಥಿಯಾಗಿ ಸರ್ವಾನುಮತ ದಿಂದ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಪಾಳ್ಯ ಮುನೇಗೌಡ ತಿಳಿಸಿರುತ್ತಾರೆ.

ಮಾಜಿ ಶಾಸಕ ನಿಸರ್ಗ ನಾಯಂಡಸ್ವಾಮಿ ಮಾತ ನಾಡಿ, ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಿದರು ಪಕ್ಷದ ನಿಷ್ಠೆಗೆ ಶಿಸ್ತು ಬದ್ಧವಾಗಿ ನಡೆದುಕೊಳ್ಳಬೇಕು ಗೊಂದಲಗಳು ಏನಿದ್ದರೂ  ಪಕ್ಷದ ಮುಖಂಡರ ಜೊತೆ ಚರ್ಚಿಸಬೇಕು. ಈ ಇಂದಿನ ಅವಧಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಬಮೂಲ್ ನಿರ್ದೇಶಕರಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇರಿಗೆನಹಳ್ಳಿ ಶ್ರೀನಿವಾಸ್ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ ಜೊತೆಗೆ ಸಹಕಾರ ಸಂಘಗಳಲ್ಲಿ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಿಗೆ ಉಳಿದ ತಾಲೂಕುಗಳಿಗಿಂತ ನಮ್ಮ ತಾಲೂಕಿನಲ್ಲಿ ಮಾದರಿಯಾಗುವಂತ ಕೆಲಸಗಳನ್ನು ಮಾಡಿದ್ದಾರೆ.

ಈ ಚುನಾವಣೆಯಲ್ಲಿ ಮತ್ತೊಮ್ಮೆ ನಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಮುಖಂಡರು ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು. ಆಗ ಮಾತ್ರ ಹ್ಯಾಟ್ರಿಕ್ ಗೆಲುವು ನಮ್ಮ ಪಕ್ಷಕ್ಕೆ ಸಾಧ್ಯ. ನಮ್ಮ ಪಕ್ಷದಲ್ಲಿ ನಾಲ್ಕು ಜನ ಆಕಾಂಕ್ಷಿಗಳಲ್ಲಿ ಮಾರೇಗೌಡ, ಪಟಾಲಪ್ಪ, ಹುರಳಗುರ್ಕಿ ಶ್ರೀನಿವಾಸ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಉಳಿದವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳನ್ನು ಪಕ್ಷ ಕಲ್ಪಿಸುವುದರಲ್ಲಿ ಸಂದೇಹವಿಲ್ಲ ಎಲ್ಲರೂ ಬೇಸರವನ್ನು ಬದಿಗಿಟ್ಟು ಅಧಿಕೃತವಾಗಿದೆ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರು ಘೋಷಣೆ ಮಾಡಿದ ಅಭ್ಯರ್ಥಿ ಪರವಾಗಿ ಕಾರ್ಯ ಪ್ರವೃತರಾಗಬೇಕೆಂದರು.

ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ಪಕ್ಷದ ಟಿಕೆಟ್ ಯಾರಿಗೆ ನೀಡಿದರು ಅವರ ಪರವಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಜೆಡಿಎಸ್ ಪಕ್ಷಕ್ಕೆ ಬಲ ತಂದುಕೊಡಲು ಚುನಾವಣೆ ಪ್ರತಿಷ್ಠೆಯಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಡೈರಿ ಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಹೆಚ್ಚಿನ ಆದ್ಯತೆ ನೀಡಿದ್ದೇನೆ. ನನ್ನ ಹಿಂದಿನ ಅಭಿವೃದ್ಧಿ ಕೆಲಸಗಳೇ ಈ ಚುನಾವಣೆಗೆ ದಿಕ್ಸೂಚಿಯಾಗಲಿದೆ ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ ಮತ ಅವರಿಂದ ಗೆಲುವಿನ ಆಶೀರ್ವಾದ ಪಡೆಯಲು ಬದ್ಧನಾಗಿರುವೆ ಎಂದು ತಿಳಿಸಿರುತ್ತಾರೆ.

ಈ ವೇಳೆ ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾದ ಬಿ.ಮುನೇಗೌಡ, ಶ್ರೀನಿವಾಸ್  ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಆರ್. ಮುನೇಗೌಡರು, ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ  ಜಿ.ಎ ರವೀಂದ್ರ, ಕಾರ್ಯದರ್ಶಿ ಶ್ರೀ ಮುನಿರಾಜ್, ಮುಖಂಡರಾದ ಹುರುಳಗುರ್ಕಿ ಶ್ರೀ ಶ್ರೀನಿವಾಸ್ ಮತ್ತು ಶ್ರೀ ಚನ್ನರಾಯಪಟ್ಟಣ ಮಾರೇಗೌಡರು ಉಪಸ್ಥಿತರಿದ್ದರು.