ಪರಿಶಿಷ್ಟ ಜಾತಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಸರ್ಕಾರ ಕಠಿಣ ಕಾನೂನು ತೀರಿಸಬೇಕು–ಶಂಕರಪ್ಪ
ದೇವನಹಳ್ಳಿ :- ಜನ ಜಾತಿ ಗಣತಿಯ ಸಮೀಕ್ಷೆಯಲ್ಲಿ ಮಾದಿಗ ಮತ್ತು ಅದರ ಸಂಬಂಧಿತ ಸಮುದಾಯಗಳ ಜನಸಂಖ್ಯೆಯು ಕಳೆದ ಸಮೀಕ್ಷೆಗಿಂತ ಹೆಚ್ಚು ಜನಸಂಖ್ಯೆ ಹೊರಬರುವ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದು ನ್ಯಾ. ಎ.ಜೆ. ಸದಾಶಿವ ಜನಸಂಖ್ಯೆ ಆಧಾರದ ಮೇಲೆ ಶೇ 6 ಕ್ಕಿಂತ ಇಂದಿನ ಜನಸಂಖ್ಯೆ ಆಧಾರದ ಮೇಲೆ ನ್ಯಾಯಮೂರ್ತಿ ನಾಗಮೋನ್ ದಾಸ್ ಅವರ ಭಾರತೀಯನು ಸರ್ಕಾರಕ್ಕೆ ಸಲ್ಲಿಸಲು ಇನ್ನು ಎರಡು ತಿಂಗಳು ಕಾಲಾವಕಾಶ ಪಡೆದಿದ್ದು ಈ ವರದಿಯನ್ನು ಸರ್ಕಾರಕ್ಕೆ ನೀಡಲು ತಡ ಮಾಡಿದ್ದಲ್ಲಿ ಸಂಬಂಧಿತ ಸಮುದಾಯದಸಮುದಾಯದಸಮುದಾಯದ ಬಹಳಷ್ಟು ಹಟ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಂಕ್ರಪ್ಪ ಸರ್ಕಾರವನ್ನು ಆಗ್ರಹಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಯಾಗುವವರೆಗೆ ಮೇಲ್ಕಂಡ ತರಗತಿಗಳಿಗೆ ಪ್ರವೇಶ ನಡೆಸದಂತೆ ತಡೆ ಹಿಡಿಯಬೇಕೆಂದು ಅಥವಾ ನ್ಯಾ. ಎ.ಜೆ. ಸದಾಶಿವ ವರದಿಯಂತೆ ಮಾದಿಗ ಮತ್ತು ಅದರ ಸಂಬಂಧಿತ ಸಮುದಾಯದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ 2025-26ನೇ ಸಾಲಿಗೆ ಅನ್ವಯಿಸುವಂತೆ ಶೇ.6ರಷ್ಟು ಮೀಸಲಾತಿ ಯನ್ನು ಕಾಯ್ದಿರಿಸಿಕೊಂಡು ಮಾದಿಗ ಮತ್ತು ಅದರ ಸಂಬಂಧಿತ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪ್ರವೇಶ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ಎಚ್ಚರ ವಹಿಸಬೇಕು.
ಜಾತಿ ಸಮೀಕ್ಷೆಯಲ್ಲಿ ಸಾಮಾಜಿಕ ಬಹಿಷ್ಕಾರದ ದೇವಾಲಯಗಳ ಪ್ರವೇಶ ನಿರಾಕರಣೆ ಮತ್ತು ಕೆಲವು ತಾರತಮ್ಯಗಳ ಕುರಿತು ಪ್ರಶ್ನಾವಳಿಗಳು ಇದಾಗ್ಯೂ ಸಹ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ನಿಖರವಾದ ಮಾಹಿತಿ ಯನ್ನು ನೀಡಲು ಸ್ಥಳೀಯ ಅಸ್ಪೃಶ್ಯ ಸಮುದಾಯದ ಬಂಧುಗಳು ಹಿಂಜರಿಕೆಯಿಂದ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲವೆಂದು ತಿಳಿದುಬಂದಿದೆ. ಈ ಬಗ್ಗೆ ತಾವುಗಳು ವರದಿಯನ್ನು ನೀಡುವಾಗ ತಾರತಮ್ಯ ಮತ್ತು ಅಸಾಮಾನತೆ ಇಂದಿಗೂ ಚಾಲ್ತಿಯಲ್ಲಿರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ವರದಿ ಜಾರಿ ಆಗಲಿ.
ಸಮೀಕ್ಷೆಯಲ್ಲಿ ಮೂಲ ಜಾತಿಗಳನ್ನು ನೋಂದಾಯಿಸಿ ಕೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆದಿ ಕರ್ನಾಟಕ ಮತ್ತು ಆದಿದ್ರಾವಿಡ ಜಾತಿ ಸೂಚಕ ಪದಗಳನ್ನು ಪರಿಶಿಷ್ಟ ಜಾತಿಪಟ್ಟಿಯಿಂದ ರದ್ದುಗೊಳಿಸು ವಂತೆ ಕಾಲಮಿತಿಯೊಂದಿಗೆ ಶಿಫಾರಸ್ಸು ಮಾಡುವುದು.
ಹಾಲಿ ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿ ಸೂಚಕ ಪದಗಳಿಂದ ಕರೆಯಲ್ಪಡುವ ಸಮುದಾಯಗಳ ಬಂಧು ಗಳು ಇನ್ನು ಮುಂದೆ ತಮ್ಮ ತಮ್ಮ ಮೂಲ ಜಾತಿಯ ಹೆಸರಿನ ಜಾತಿ ಪ್ರಮಾಣಪತ್ರಗಳನ್ನು ಕಾಲಮಿತಿಯೊಳಗೆ ಹಿಂಪಡೆಯುವಂತೆ ಕ್ರಮ ಕೖ ಗೊಳ್ಳಬೇಕು.
ಜಾತಿಗಣತಿಯಲ್ಲಿ ಮೂಲ ಜಾತಿಯನ್ನು ಗುರುತಿಸಿಕೊಳ್ಳದೇ ಆಧಿಕರ್ನಾಟಕ ಮತ್ತು ಆದಿ ದ್ರಾವಿಡ ಜಾತಿ ಸೂಚಕ ಪದಗಳಿಂದ ಮಾತ್ರ ಗುರುತಿಸಿಕೊಂಡಿರುವವರ OR NOT KNOW ಎಂದು ಹೇಳಿರುವವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುತ್ತಾರೆಂದು ಭಾವಿಸಿ ಸಮಗ್ರವಾಗಿ ವಿಚಾರಣೆ ನಡೆಸಿ ಅವರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮತ್ತು ಹೊರಗುತ್ತಿಗೆ ಉದ್ಯೋಗ ನೀತಿಯಲ್ಲಿ ಮೀಸಲಾತಿ ಮತ್ತು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು.
ಪರಿಶಿಷ್ಟ ಜಾತಿಗೆ ಒಳಪಡುವ ಯಾವುದೇ ಸಮುದಾಯದ ಬಂಧುಗಳ ವಾರ್ಷಿಕ ವರಮಾನ ಶೇ. 25.00 ಲಕ್ಷ ಮೀರಿದ್ದಲ್ಲಿ ಅವರುಗಳನ್ನು ಕೆನೆಪದರ ಗುಂಪಿಗೆ ಸೇರಿಸ ಬೇಕು. ಗ್ರಾಮ ಪಂಚಾಯಿತಿ ಮಟ್ಟದಿಂದ ಲೋಕ ಸಭಾ ಕ್ಷೇತ್ರದ ಮಟ್ಟದವರೆಗೂ ಜನಸಂಖ್ಯೆ ಆಧಾರದ ಮೇಲೆ ರಾಜಕೀಯ ಕ್ಷೇತ್ರದಲ್ಲೂ ಮೀಸಲಾತಿ ಕ್ಷೇತ್ರಗಳನ್ನು ಗುರುತಿಸಿ ಒಳಮೀಸಲಾತಿಗೆ ಒಳಪಡುವ ಸಮುದಾಯ ಗಳಿಗೆ ಮೀಸಲು ಕ್ಷೇತ್ರಗಳನ್ನಾಗಿ ವಿಂಗಡಿಸಿ ಜಾರಿಗೊಳಿ ಸಬೇಕು.
ಪರಿಶಿಷ್ಟ ಜಾತಿಯ ಜನಸಂಖ್ಯೆ ಅನುಸಾರ ಅನುದಾನವನ್ನು ರಾಜ್ಯ ಆಯವ್ಯಯದಲ್ಲಿ ಮೀಸಲಿಡಬೇಕು.ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಅಭಿವೃದ್ಧಿ ನಿಗಮಗಳಿಗೆ ಆಯಾ ಸಮುದಾಯದ ಜನಸಂಖ್ಯೆಯನುಸಾರ ಅನುದಾನ ನೀಡಬೇಕು.
ಚರ್ಮಗಾರಿಕೆ ಅಭಿವೃದ್ಧಿ ನಿಗಮದಲ್ಲಿ ಚರ್ಮಗಾರಿಕೆ ವೃತ್ತಿ ಮಾಡದವರಿಗೆ, ಉದ್ದಿಮೆದಾರರಿಗೆ ಉದ್ದಿಮೆ ಸ್ಥಾಪನೆ ಮಾಡಲು ನಿಗಮದಿಂದ ಯಾವುದೇ ರೀತಿಯಲ್ಲೂ ಸಾಲ, ಸಹಾಯಧನ ಮಂಜೂರು ಮಾಡಬಾರದೆಂದು ಶಿಫಾರಸ್ಸು ಮಾಡುವುದು.
ಸಫಾಯಿಚಾರಿ ಅಭಿವೃದ್ಧಿ ನಿಗಮದಲ್ಲಿ ಸಫಾಯಿಚಾರಿ ವೃತ್ತಿ ಮಾಡದವರಿಗೆ, ಉದ್ದಿಮೆ ದಾರರಿಗೆ ನಿಗಮದಿಂದ ಯಾವುದೇ ರೀತಿಯಲ್ಲೂ ಸಾಲ, ಸಹಾಯಧನ ನೀಡಬಾರದು, ನಿವೃತ್ತ ನ್ಯಾನಾಗಮೋಹನ್ ದಾಸ್ ಅವರ ವರದಿಯನ್ನು ಸರ್ಕಾರಕ್ಕೆ ಒತ್ತಾಯ ಮಾಡುತೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಪ್ರದಾನ ಕಾರ್ಯದರ್ಶಿ ವೆಂಕಟೇಶಪ್ಪ ರಾಜ್ಯ ಖಜಾಂಚಿ ಮುನಿರಾಜು ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಜಿಲ್ಲಾಧ್ಯಕ್ಷ ಮಾರಪ್ಪ, ಗಂಗಾಧರಪ್ಪ, ವೆಂಕಟಸ್ವಾಮಿ, ಮುನಿರತ್ನಮ್ಮ, ರಾಜಶೇಖರ್, ನರಸಿಂಹ ಮೂರ್ತಿ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಹಾಜರಿದ್ದರು.