ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಕೆಗೂ ಮುನ್ನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಗಳು ರಾಜೀನಾಮೆ ನೀಡಲಿ : ನಾರಾಯಣಸ್ವಾಮಿ

ದೇವನಹಳ್ಳಿ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್ ಸಿ ಬಿ ಕ್ರಿಕೆಟ್ ಗೆಲುವು ಸಂಬಂಧ ಸಂಭ್ರಮಾಚರಣೆಗೆ ತೆರಳಿತ ಕ್ರಿಕೆಟ್ ಪ್ರಿಯರಿಗೆ ಸಂಭ್ರಮಕ್ಕಿಂತ ದೊಡ್ಡ ಆಘಾತವೇ ಕಾಲ್ತುಳಿತ ದಲ್ಲಿ ಮೃತಪಟ್ಟ ಅಮಾಯಕ ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಿದ್ದಾರೆ ಸತ್ತವರು ವಾಪಸ್ ಬರುವುದಿಲ್ಲವೆಂದು ಎಂಎಲ್ಸಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ದೇವನಹಳ್ಳಿ ಪಟ್ಟಣಕ್ಕೆ ಸಮೀಪವಿರುವ ನೀಲೇರಿಯ ಅಂಬರೀಶ್ ಗೌಡರ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಕಾನೂನು ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಪೊಲೀಸ್ ಕಮಿಷನರ್ ಅಮಾನತು ಪೊಲೀಸ್ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ ಸರ್ಕಾರದ ಸಿಷ್ಟಾಚಾರವನ್ನು ಪಾಲಿಸುವುದು ಬೇಕು ಬೇಡೋ ಅನ್ನಿಸುವಂತಾಗಿದೆ ಈಗಿನ ಸರ್ಕಾರದ ಸ್ಥಿತಿಗತಿ. ಸರ್ಕಾರದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಗೃಹ ಸಚಿವರು  ಕೂಡಲೇ ರಾಜೀನಾಮೆ ನೀಡಬೇಕು.
ಆ ರ್ ಬಿ ಸಂಭ್ರಮಾಚರಣೆ ನಡೆಸಲು ಸರ್ಕಾರದ ಅನುಮತಿ ನೀಡದೆ ತಾರಾತುರಿಯಲ್ಲಿ ಸಂಭ್ರಮಾಚರಣೆ ಆಚರಿಸುವ ಉದ್ದೇಶವೇನಿತ್ತು. ಆಮಾಯಕ ಜೀವಗಳನ್ನು ಕಳೆದು ಕೊಂಡ ಪೋಷಕರ ರೋದನೆಯ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟುವಿದು ಖಂಡಿತ. ಆರ್‌ಸಿಬಿ ಗೆದ್ದುಕೊಂಡು ಬಂದವರು ಸ್ಟೇಟ್ ಸ್ಪಾನ್ಸರ್ ಟೀಮ್ ಅಲ್ಲ ಅದೊಂದು ಪ್ರವೇಟ್ ಫ್ರೆಂಚ್ಸಿ, ಸರ್ಕಾರ ಅವರಿಗೆ ಇಷ್ಟೊಂದು ಮಹತ್ವ ಬೇಕಿರಲಿಲ್ಲ. ಸರ್ಕಾರದ ಪ್ರಾವೇಜಿತ ಕಾರ್ಯಕ್ರಮ ವೆಂದು ಬಿಂಬಿಸಿಕೊಂಡು ಇಂತಹ ದುರಂತಕ್ಕೆ ಕಾರಣರಾಗಿದ್ದಾರೆ.
ಸರ್ಕಾರ ವಿಸರ್ಜನೆ ಆಗೋವರೆಗೂ ಭಾರತೀಯ ಜನತಾ ಪಾರ್ಟಿ ಹೋರಾಟವನ್ನು ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನೀಲೇರಿ ಅಂಬರೀಶ್ ಗೌಡ, ಹಿರಿಯ ಮುಖಂಡ ಬುಳ್ಳಹಳ್ಳಿ ರಾಜಪ್ಪ, ಪ್ರಭಾಕರ್, ಪಕ್ಷದ ಯುವ ಮುಖಂಡ ಬಿಕೆ ನಾರಾಯಣ ಸ್ವಾಮಿ, ಶಾನಪ್ಪನಹಳ್ಳಿ ರವಿ ಕುಮಾರ್, ಅರುವನಹಳ್ಳಿ ವೆಂಕಟೇಗೌಡ, ಬಿದಲುಪುರ ಅನಿಲ್, ವಿಜಯಪುರ ವೆಂಕಟೇಶ್, ಗೋಕರೆಸತೀಶ್ ಮಹಿಳಾ ಬಿಜೆಪಿ ಘಟಕದ ಅಧ್ಯಕ್ಷೆ ವಿಜಯ ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ ಪದಾಧಿಕಾರಿಗಳಾದ ಪುನೀತ ಇತರರು ಹಾಜರಿದ್ದರು.