ಶಿಕ್ಷಕರ ಹೊಂದಾಣಿಕೆಯಿಂದ ಹೆಚ್ಚು ಮಕ್ಕಳು ಶಾಲೆಗೆ ಸೇರಲು ಸಾಧ್ಯ — ಬಿ.ಪುಟ್ಟಸ್ವಾಮಿ

ಚಾಮರಾಜನಗರ: ಶಿಕ್ಷಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಹೊಂದಾಣಿಕೆ ಇದ್ದರೆ ಹೆಚ್ಚು ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಸೇರಲು ಸಾಧ್ಯವಾಗುತ್ತದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ. ಪುಟ್ಟಸ್ವಾಮಿ ತಿಳಿಸಿದರು.

ತಾಲ್ಲೂಕಿನ ಆಲೂರು ಸಮೀಪದ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಗೆ ತಮ್ಮ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು ಗ್ರಾಮಸ್ಥರು, ಶಿಕ್ಷಕರು ಹಾಗೂ ಮಕ್ಕಳ ಜೊತೆ ಚರ್ಚಿಸಿದಾಗ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿದುಬಂದಿದೆ ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ತಕ್ಷಣ ಅಹಿತಕರ ಘಟನೆಗಳನ್ನು ಸರಿಪಡಿಸಿ ಉತ್ತಮ ಶಿಕ್ಷಕರನ್ನು ನೇಮಿಸಿ, ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಯಾವುದೇ ರೀತಿ ಘಟನೆಗಳು ಉಲ್ಬನಗೊಳ್ಳಬಾರದು, ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತದೆ, ನಮ್ಮ ಜೆಡಿಎಸ್ ಪಕ್ಷ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವುದರ ಜೊತೆಗೆ ಸದಾ ನಿಮ್ಮೊಟ್ಟಿಗೆ ಇರುತ್ತೇವೆ ಅಲ್ಲದೆ ಶತಮಾನೋತ್ಸವ ನಡೆಯುತ್ತಿರುವ ಈ ಶಾಲೆಯನ್ನು ಮುಚ್ಚಿಸಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಆಲೂರು ಮಲ್ಲು ಮಾತನಾಡಿ, ಶಿಕ್ಷಕರು ಗ್ರಾಮಸ್ಥರು ಹಾಗೂ ಎಸ್ ಡಿ ಎಂಸಿ ಸಮಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳದೆ ಕರ್ತವ್ಯ ನಿರ್ವಹಿಸಬೇಕು, ನಾನು ಅನೇಕ ವರ್ಷಗಳಿಂದ ಈ ಗ್ರಾಮದ ಎಲ್ಲಾ ಕೋಮಿನ ಜನಾಂಗದವರು ಅನ್ಯೋನ್ಯವಾಗಿ ಇರುವುದನ್ನು ನೋಡಿದ್ದೇನೆ.ಎಲ್ಲರ ಒಗ್ಗಟ್ಟಿನಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ, ಅಲ್ಲದೆ ಇನ್ನು ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ಒದಗಿಸಲು ನಾವು ಗ್ರಾಮಸ್ಥರೊಂದಿಗೆ ಪ್ರತಿಭಟನೆ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಇದೆ ವೇಳೆ ಜೆಡಿಎಸ್ ಮುಖಂಡರಾದ ಬಿ. ಪುಟ್ಟಸ್ವಾಮಿ ಅವರು ವಿದ್ಯಾರ್ಥಿಗಳ ಜೊತೆ ಚರ್ಚಿಸಿ ನಿಮ್ಮ ಪರವಾಗಿ ನಾವಿದ್ದೇವೆ ಚೆನ್ನಾಗಿ ಓದಿ ಎಂದು ತಿಳಿಸಿ ಮಕ್ಕಳಿಗೆ ಸಿಹಿ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಜು , ಚಾಮರಾಜನಗರ ಟೌನ್ ಅಧ್ಯಕ್ಷ ಜಿಎಂ. ಶಂಕರ್, ಎಸ್ ಟಿ ಮೋರ್ಚಾ ಅಧ್ಯಕ್ಷ ರಾಮಚಂದ್ರು, ಜೆಡಿಎಸ್ ಮುಖಂಡರಾದ ಶಂಕರಪ್ಪ, ಲೋಕೇಶ್, ನಂಜಪ್ಪ ಅಶ್ವಥ್, ನಾಗೇಂದ್ರ ನಾಗರಾಜು, ಮಲ್ಲಪ್ಪ, ನಿಂಗಯ್ಯ,ರಾಮುರಾಜು, ಸಿ ಆರ್ ಪಿ. ಕಿಟ್ಟು, ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಸೇರಿದಂತೆ ಇತರರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ