ಸರ್ಕಾರವನ್ನು ಉರುಳಿಸುವ ಶಕ್ತಿ ದಲಿತ ಸಂಘರ್ಷ ಸಮಿತಿಗೆ ಇದೆ– ಶ್ರೀಧರ್

ತಿಪಟೂರು: ತಾಲ್ಲೂಕಿನ ಹೋನ್ನವಳ್ಳಿ ಹೋಬಳಿ ಗುಡಿಗೂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಚನಹಳ್ಳಿ ಗ್ರಾಮದ ಕಾಲೋನಿಯಲ್ಲಿ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಮೂಲ ಸಂಘಟನೆಯ
ನಾಮಫಲಕ ಅನಾವರಣವನ್ನು ಗಿಡಕ್ಕೆ ನೀರು ಹಾಕುವ ಮುಖಾಂತರ ಕುಮಾರ್ ಆಸ್ಪತ್ರೆಯ ಪ್ರಖ್ಯಾತ ವೈದ್ಯರಾದ ಡಾ. ಶ್ರೀಧರ್ ಉದ್ಘಾಟಿಸಿದರು

ಡಾ. ಶ್ರೀಧರ್ ರವರು ಮಾತನಾಡಿ. ರಾಜ್ಯದ ನಾನಾ ಮೂಲೆಗಳಲ್ಲಿ ಎಲ್ಲಾ ಊರುಗಳಲ್ಲಿ ಸಮುದಾಯವನ್ನು ಒಗ್ಗೂಡಿಸಿ
ಜಾಗೃತಿ ಮೂಡಿಸಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸಂಘಟನೆ ಮುಖಾಂತರ ನ್ಯಾಯವನ್ನು ಕೊಡಿಸುತ್ತಾ ಬರುತ್ತಿರುವ ಸಂಘಟನೆ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸರ್ಕಾರವನ್ನು ಉರುಳಿಸುವ ಶಕ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಇದೆ ಸಂಘಟನೆಗೆ ಉಜ್ಜಲ ಭವಿಷ್ಯವಿದೆ ಮುಂದೆ ಇದೇ ರೀತಿಯ ಶಾಖೆಗಳನ್ನು ತೆರೆದು ಜನರಲ್ಲಿ ಜಾಗೃತಿ ಮೂಡಿಸಿ ಎಂದರು.

ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ
ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ ಕೇಳುವವರಿಲ್ಲದ ದಿನಗಳಲ್ಲಿ 52 ವರ್ಷದ ಹಿಂದೆ ಶೋಷಿತರ ಪ್ರತಿನಿಧಿಯಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜನ್ಮ ತಾಳಿತು ದಲಿತರು ವಿದ್ಯಾವಂತರಾಗಿ ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿದು ಸರಕಾರದ ಸಾಲ ಸೌಲಭ್ಯ ಬಳಸಿಕೊಂಡು ಹೆಚ್ಚು ದುಡಿಮೆ ಮಾಡಬೇಕು. ಮಕ್ಕಳ ಜೀವನ ಉತ್ತಮವಾಗಿರುವಂತೆ ನೋಡಿಕೊಂಡು ಎಲ್ಲರೂ ಸಂಘಟಿತರಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಪೆನ್ನುಗಳನ್ನು ವಿತರಿಸಲಾಯಿತು

ಕಾರ್ಯಕ್ರಮದಲ್ಲಿ. ಜಿಲ್ಲಾಕಾನೂನು ಸಲಹೆಗಾರಾದ.ಡಾ. ತಿಪಟೂರು ವೆಂಕಟೇಶ್. ತಾಲ್ಲೂಕು ಸಂಚಾಲಕರಾದ ಹರಚನಹಳ್ಳಿ ಮಂಜುನಾಥ್. ವಿಭಾಗೀಯ ಸಂಚಾಲಕರಾದ ಜಗದಾರಿಯ ಸ್ವಾಮಿ. ನೌಕರ ಒಕ್ಕೂಟದ ಅಧ್ಯಕ್ಷ ಮೈಲಾರಪ್ಪ ನಾಗತಿಹಳ್ಳಿ. ಜಿಲ್ಲಾ ಸಮಿತಿ ಸದಸ್ಯರಾದ ಕೆ ಬಿ. ನಂದಿನಿ.ರಾಜಣ್ಣ ಕರಿಕೆರೆ. ಸುರೇಶಣ್ಣ ಕರಿಕೆರೆ. ರಾಜಣ್ಣ ಗಂಗನಗಟ್ಟ. ಜಯಶಂಕರ್ ಮತ್ತಿಘಟ್ಟ. ಲಕ್ಷ್ಮಮ್ಮ ಬಿಳಿಗೆರೆ. ಚೇತನ್ ಹರಚನಹಳ್ಳಿ. ಚಿಕ್ಕ ಸ್ವಾಮಿ. ಸುರೇಶ್
ಈಡೇನಹಳ್ಳಿ. ಬಸವರಾಜು ವಾಸುದೇವನಹಳ್ಳಿ. ಗಿಡ್ಡಭೋವಿ. ಗ್ರಾಮ ಶಾಖೆ.ಪದಾಧಿಕಾರಿಗಳಾಗಿ.
ಮಧು. ಶರತ್. ಅಭಿ. ವರುಣ. ಶಂಕರ್. ಸೇರಿದಂತೆ ಮತ್ತಿತರನ್ನು ಆಯ್ಕೆ ಮಾಡಲಾಯಿತು.
ವರದಿ ಮಂಜು ಗುರುಗದಹಳ್ಳಿ.