ಇಂಜನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ
ತಾವರೆಕೆರೆ : ಹೊಸಕೋಟೆ ವಿಧಾನಸಭಾ ಕ್ಷೇತ್ರದ ಜಡಿಗೇನಹಳ್ಳಿ ಹೋಬಳಿಯ ಇಂಜನಹಳ್ಳಿ ಗ್ರಾಮದಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನ ಮತ್ತು ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಶರತ್ ಬಚ್ಚೇಗೌಡರಿಂದ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಶ್ರೀ ಕೋಡಿಹಳ್ಳಿ ಸುರೇಶ್ , ಗಡಿಗೆನಹಳ್ಳಿ ನಂಜಪ್ಪ , ತವಟಹಳ್ಳಿ ಭತ್ತೆಪ್ಪ , ಚಂದ್ರಶೇಖರ್ ಸಮಾಜ ಸೇವಕರು ಹಾಗೂ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೊಸಕೋಟೆ ತಾಲೂಕು ಓರೋಹಳ್ಳಿ ಹಾಗೂ ಗ್ರಾಮಸ್ಥರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಹಾಜರಿದ್ದರು .