ಕನ್ನಡದ ಕುಲವಧು ಶ್ರೇಷ್ಠ ತಾರೆ ಅತ್ತಂಗತರಾಗಿದ್ದು ಕನ್ನಡಿಗರಿಗೆ ನೋವಿನ ಸಂಗತಿಯಾಗಿದೆಂದು ರೇಣುಕಾ ಚಂದ್ರಶೇಖರ್ ಹಡಪದ್.
ವಿಜಯಪುರ:ಬಿ.ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು.ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ. ಅವರು ಏಳು ದಶಕಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯನ್ನು ಕನ್ನಡದಲ್ಲಿ “ಅಭಿನಯ ಸರಸ್ವತಿ” (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಯಾದ ಶ್ರೀಮತಿ ರೇಣುಕಾ ಚಂದ್ರಶೇಖರ್ ಹಡಪದ್ ತಿಳಿಸಿದರು
ವಿಜಯಪುರ ಪಟ್ಟಣ ಸಮೀಪದಲ್ಲಿರುವ ಅಂಕತಟ್ಟಿ ಗೇಟ್ ಬಳಿ ಇರುವ ಕ್ರುಂಬ್ಬಿಗಲ್ ಕುಟೀರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬಹುಭಾಷ ಚತುರೆ ಬಿ ಸರೋಜಾ ದೇವಿ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನುಡಿ ನಮನ ಕಾರ್ಯಕ್ರಮದಲ್ಲಿ ಅಗಲಿದ ಕನ್ನಡದ ಕುವರಿ ಬಿ.ಸರೋಜದೇವಿ ರವರಿಗೆ ಒಂದು ನಿಮಿಷ ಮೌನ ಆಚರಿಸಿ ಭಾವಪೂರ್ಣಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಕ್ತರಹಳ್ಳಿ ಪಂಚಾಯಿತಿಯ ಮಾಜಿ ಸದಸ್ಯರಾದ ಶ್ರೀಮತಿ ಭಾನುಮತಿ ಜಯರಾಂ ಬಿ ಸರೋಜದೇವಿ ರವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಕನ್ನಡ ಚಲನಚಿತ್ರ ಕಪ್ಪು ಬಿಳುಪಿನ ಏರುಗತಿಯ ಸ್ಥಿತಿಯಲಿದ್ದಾಗ ಕನ್ನಡ ಸಿನಿಮಾವನ್ನು ಜನ ಮಾನಸಕ್ಕೆ ಹಿಡಿಸುವಂತೆ ಖ್ಯಾತಿಗೊಳಿಸಿದವರು ಬಿ ಸರೋಜಾ ದೇವಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಕ್ತರಹಳ್ಳಿ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ಲಕ್ಷ್ಮಿ ವೆಂಕಟೇಶ್ ನುಡಿ ನಮನ ಸಲಿಸುತ್ತಾ ಬಿ ಸರೋಜಾ ದೇವಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಅಭಿನಯಿಸಿದ್ದ ಕೀರ್ತಿ ಇವರದಾಗಿದೆ . ಕನ್ನಡದ ಕುಲವಧುವಾಗಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಸಂತೆ ನಾರಾಯಣಸ್ವಾಮಿ ಸಿ ಮಂಜುನಾಥ್ ಕರ್ನಾಟಕ ರೇಷ್ಮೆ ಇಲಾಖೆಯ ವಿಶ್ರಾಂತ ನೌಕರರಾದ ಮಾರ್ಕೆಟ್ ವೆಂಕಟೇಶ್ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಆರ್ ಮುನಿರಾಜು ಉಪಸ್ಥಿತರಿದ್ದರು.