ವಿದ್ಯೆ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಗುರುವಂದನಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು ಮುಂದಿನ ಪೀಳಿಗೆಗೂ ಮಾದರಿ. ೨೫ ವರ್ಷಗಳ ನಂತರ ಗುರುವಂದನೆ ಮತ್ತು ಸ್ನೇಹ ಸಂಭ್ರಮ ನಿಜಕ್ಕೂ ಅವಿಸ್ಮರಣೀಯ ನಿವೃತ್ತ ಶಿಕ್ಷಕ ಎಸ್ ಕೃಷ್ಣಪ್ಪ.
ತಾವರೆಕೆರೆ: ವಿದ್ಯಾ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದಲ್ಲದೆ ಮುಂದಿನ ಪೀಳಿಗೆಗೆ ಮಾದರಿಯಾಗುವುದೆ ಗುರುವಂದನೆಯಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್ ಕೃಷ್ಣಪ್ಪನವರು ತಿಳಿಸಿದರು.
೧೯೯೮ – ೯೯ ಸಾಲಿನಲ್ಲಿ ೨೫ ವರ್ಷಗಳ ಹಿಂದೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳಿಂದ ೨೨ ಶಿಕ್ಷಕರಿಗೆ ಗುರುವಂಧನೆ ಮತ್ತು ಸ್ನೇಹ ಸಂಘಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಸುವುದಲ್ಲ ಸಂಸ್ಕಾರ, ದೇಶಸೇವೆ ಸ್ನೇಹಭಾವ ಸೇರಿದ ವ್ಯಕ್ತಿತ್ವವನ್ನು ತುಂಬಿ ಸಮಾಜಕ್ಕೆ ಉನ್ನತ ವ್ಯಕ್ತಿಯನ್ನು ನೀಡುವುದಾಗಿದ್ದು ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳು ಕೂಡ ನಡೆದುಕೊಳ್ಳಬೇಕಾಗುತ್ತದೆ ಕಳೆದ ೨೫ ವರ್ಷಗಳ ಹಿಂದೆ ನಮ್ಮ ಶಿಷ್ಯರಾಗಿ ವಿದ್ಯೆ ಕಲಿತ ಮಕ್ಕಳು ಎಲ್ಲೆಲ್ಲೋ ಇದ್ದ ನಮ್ಮ ಸಂಪರ್ಕ ಮಾಡಿ ಜೊತೆಗೆ ಅವರೆಲ್ಲರೂ ಕೂಡ ಒಟ್ಟಾಗಿ ಶ್ರಮಪಟ್ಟು ಈ ಕಾರ್ಯಕ್ರಮ ಆಯೋಜನೆ ಮಾಡಿ ನಮ್ಮನ್ನ ಅಭಿನಂದಿಸಿರುವುದು ನಿಜಕ್ಕೂ ಅವಿಸ್ಮರಣೀಯವಾಗಿದ್ದು ನನಗೆ ಆನಂದ ಬಾಷ್ಪಗಳು ಬಂದು ಗದ್ಗದಿತನಾಗಿದ್ದೇನೆ ನನ್ನೊಟ್ಟಿಗೆ ಇತರೆ ೨೧ ಶಿಕ್ಷಕರೂ ಕೂಡ ಬಾವುಕರಾಗಿ ವಿದ್ಯಾರ್ಥಿಗಳಿಗೆ ನಾವೆ ಕೃತಜ್ಞತೆ ಸಲ್ಲಿಸಬೇಕು ಎನ್ನುವಷ್ಟು ಸಂತೋಷವಾಗಿದೆ ಎಂದರು.
ನಂತರ ಹಳೆಯ ವಿದ್ಯಾರ್ಥಿ ಮೋಹನ್ ಮೌರ್ಯರವರು ಮಾತನಾಡಿ ಸುಮಾರು ೫ ತಿಂಗಳ ಕಾಲ ಸಂಪರ್ಕ ಬೆಳೆಸಿ ಒಬ್ಬರಿಂದೊಬ್ಬರ ವಿಳಾಸ ದೂರವಾಣಿ ಸಂಖ್ಯೆ ಪಡೆದು ಆ ಮೂಲಕ ಕೆಲವು ಶಿಕ್ಷಕರು ಹೊರ ಜಿಲ್ಲೆಗಳಲ್ಲಿದ್ದು ಅವರ ಸಂಪರ್ಕ ಮಾಡಿ ಸುಮಾರು ೧೫೦ ವಿದ್ಯಾರ್ಥಿಗಳ ಒಟ್ಟಾಗಿ ಕಾರ್ಯಕ್ರಮ ಆಯೋಜಿನೆ ಮಾಡಲಾಗಿದ್ದು ಕೆಲವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡ ವಿಧಿವಶರಾಗಿದ್ದು ಇದೇ ಸಂಧರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಲಾಗಿದ್ದು ಈ ಕಾರ್ಯಕ್ರಮ ಒಂದು ಐತಿಹಾಸಿಕ ದಾಖಲೆಯಾದಂತಾಗಿದೆ ಎಂದು ಎಲ್ಲಾ ಗುರುಗಳು ನಮಗೆ ಮಾಡಿದ ಆಶೀರ್ವಾದಕ್ಕೆ ನಾವು ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.
೨೫ ವರ್ಷಗಳ ನಂತರ ಗುರುವಂಧನೆ & ಸ್ನೇಹ ಸಂಗಮ
ಇದೊಂದು ಐತಿಹಾಸಿಕ ದಾಖಲೆಯಾಗುವಂತಹ ಕಾರ್ಯಕ್ರಮವಾಗಿದ್ದು ೧೫೦ ವಿದ್ಯಾರ್ಥಿಗಳು ಮತ್ತು ೨೨ ಶಿಕ್ಷಕರು ಹಾಗೂ ಕುಟುಂಬದ ಸದಸ್ಯರು ಒಟ್ಟಿಗೆ ಬೆರೆತು ಪರಸ್ಪರ ಸ್ನೇಹ ಭಾವನೆಗಳನ್ನು ಹಂಚಿಕೊಂಡು ಸಂಬಂದ ವೃದ್ದಿ ಜೊತೆಗೆ ಗುರುಗಳಿಗೆ ಕೃತಜ್ಞತೆ ಸಲ್ಲಿಸಿರುವುದು ದಾಖಲಾರ್ಹ.
ನಟರಾಜ್ ಎಂ ಎನ್ ಆರ್ ಹಳೆಯ ವಿದ್ಯಾರ್ಥಿ ಸರ್ಕಾರಿ ಬಾಲಕರ ಪ್ರೌಡಶಾಲೆ ಹೊಸಕೋಟೆ..
ಈ ಸಂಧರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಮೋಹನ್ ಮೌರ್ಯ, ಅಶೋಕ, ಶಿವಶಂಕರಾಚಾರಿ, ಸುಬ್ರಮಣಿ,
ಚೀಮಂಡಹಳ್ಳಿ ರಾಜಗೋಪಾಲ್, ಹಲಸಹಳ್ಳಿ ಮುರಳಿ, ಚಿಕ್ಕಹುಲ್ಲೂರು ಮಹೇಂದ್ರ, ಯಲಹಂಕ ಪುರುಷೋತ್ತಮ್, ಸಂತೋಷ್ ಕುಮಾರ್, ಮೂರ್ತಿ ದಾಸರಹಳ್ಳಿ , ಹೆಚ್ ಕೆ ಎಂ ಸೋಮಶೇಖರ್, ರಾಮೂರ್ತಿ ಹರಳೂರು, ಹಲಸಹಳ್ಳಿ ಶ್ರೀನಿವಾಸ್, ಹೊಸಕೋಟೆ ಕೇಶವ್ ರಾವ್ ಮೂರ್ತಿ ಉಪ್ಪಾರಹಳ್ಳಿ ಲಕ್ಕೊಂಡಹಳ್ಳಿ, ವೆಂಕಟೇಶ್, ಹೊಸಕೋಟೆ ಮುನಿಕೃಷ್ಣ, ಎವಿ ಮಂಜುನಾಥ್ , ವಿನೋದ್ ಕುಮಾರ್ , ಕೋಳಿ ಕುಮಾರ್ ವಿನಾಯಕ , ಕುಪೇಂದ್ರ ರಾವ್, ತಿರುಮಲೇಶ ,ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದ್ದು ೧೯೯೮- ೯೯ -೨೦೦೦ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಇದ್ದರು.