“ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಪಿ.ಕೆ.ಎಸ್ ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಅರ್ಥಪೂರ್ಣ ಆಚರಣೆ “
ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಗಡಿಗೇನಹಳ್ಳಿ ಹಾಗೂ,ಚಿಕ್ಕನಹಳ್ಳಿ, ಗ್ರಾಮಗಳ ಶಾಲೆಯ ಮಕ್ಕಳಿಗೆ ಪಿ ಕೆ ಎಸ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ , ಬ್ಯಾಗ್, ಪುಸ್ತಕಗಳನ್ನು , ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಪೂಜರಾಮನಹಳ್ಳಿ ಗ್ರಾಮದ ಸಮಾಜ ಸೇವಕರು ಹಾಗೂ ಕರ್ನಾಟಕ ಯಾದವ ಯುವ ವೇದಿಕೆಯ ರಾಜ್ಯಾಧ್ಯಕ್ಷರು ಪಿ ಕೆ ಎಸ್ ಶ್ರೀನಿವಾಸ್ ಯಾದವ್,ರವರ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳಿಗೆ, ಬ್ಯಾಗ್ ಕಲಿಕಾ ಸಾಮಗ್ರಿಗಳನ್ನು ಸಿಹಿ ಹಂಚಿ ವಿತರಣೆ ಮಾಡಿ, ಯಾವುದೇ ದುಂದು ವೆಚ್ಚ ಮಾಡದೆ,ಅರ್ಥಪೂರ್ಣವಾಗಿ ಸರಳವಾಗಿ ಜನ್ಮದಿನಾಚರಣೆಯನ್ನು, ಶಾಲಾ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇ,ಆಗೆ ಬಿ.ಎನ್ ಬಚ್ಚೇಗೌಡರು, ರವರು, ಶಾಸಕರಾದ ಶರತ್ ಬಚ್ಚೇಗೌಡರು, ಹಾಗೂ ಅವರ ಧರ್ಮಪತ್ನಿ ಪ್ರತಿಭಾ ಶರತ್ ಬಚ್ಚೇಗೌಡ ರವರ ಮಾರ್ಗದರ್ಶನದಲ್ಲಿ, ಇಂದು ನನ್ನ ಜನ್ಮದಿನಾಚರಣೆಯ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ, ಯಾವುದೇ ದುಂದು ವೆಚ್ಚ ಮಾಡದೆ ಸರಳ ಅರ್ಥಪೂರ್ಣವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಕಲಿಕಾ ಸಾಮಗ್ರಿಗಳು, ವಿತರಣೆ ಮಾಡುತ್ತಿದ್ದೇವೆ, ಈ ಕಾರ್ಯಕ್ರಮಕ್ಕೆ ಸಹಕರಿಸಿದ ಶಿಕ್ಷಕರು ಗ್ರಾಮದ ಸದಸ್ಯರು ಮುಖಂಡರು ನಮ್ಮ ಅಭಿಮಾನಿಗಳು ಕುಟುಂಬಸ್ಥರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು,
ಶಾಲೆಯ ಮುಖ್ಯ ಶಿಕ್ಷಕರು ಸರಸ್ವತಿ ರವರು ಮಾತನಾಡಿ,ಪಿಕೆಎಸ್ ಶ್ರೀನಿವಾಸ್ ರವರು. ಇಂದು ನಮ್ಮ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಬ್ಯಾಗ್ ಸಾಮಗ್ರಿಗಳನ್ನು ವಿತರಣೆ ಮಾಡಿ ಅವರ ಜನ್ಮದಿನಾಚರಣೆಯನ್ನು ಮಕ್ಕಳೊಂದಿಗೆ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ ಸಂತಸವಾಗಿದೆ ಹಾಗೆಯೇ ದೇವರು ಅವರಿಗೆ ರಾಜಕೀಯವಾಗಿ ಉನ್ನತ ಸ್ಥಾನ ಸಿಗಲಿ ಆಯುರ್ ಆರೋಗ್ಯವನ್ನು ಕೊಟ್ಟು ದೇವರು ಸುಖ ಶಾಂತಿ ವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯಾದವ ಯುವ ವೇದಿಕೆ ಗೌರವಾಧ್ಯಕ್ಷರು ಸುಧಾಕರ್ ಯಾದವ್, ವಳಗೆರೆಪುರ ಸುರೇಶ್, ಚಿಕ್ಕನಹಳ್ಳಿ ಕೃಷ್ಣಪ್ಪ, ನಾರಾಯಣಸ್ವಾಮಿ,ಗಡಿಗೇನಹಳ್ಳಿ ಸಹದೇವ್,ನಾಗರಾಜ್, ಪೂಜಾರಾಮನಹಳ್ಳಿ ರಮೇಶ್, ವೆಂಕಟೇಶ್, ಲಕ್ಷ್ಮೀ ನಾರಾಯಣ್, ವೆಂಕಟೇಶ್,ಉಮ್ಮಲು ಬಾಬು,ಅಪ್ಪಸಂದ್ರ ಗೋಕುಲ್,ಭುವನಹಳ್ಳಿ ಬಾಬು, ಕರಪನಹಳ್ಳಿ ವೆಂಕಟೇಶಣ್ಣ, ಸುನೀಲ್, ಮನೋಹರ್,ಹಾಜರಿದ್ದರು.