” ವರಪ್ರದಾಯಕ ಶ್ರೀ ಶನಿಮಹಾತ್ಮ ಸ್ವಾಮಿಗೆ ವೆಂಕಟೇಶ್ವರ ಸ್ವಾಮಿ ಅಲಂಕಾರ ಹಾಗೂ ಪಲ್ಲಕ್ಕಿ ಉತ್ಸವ ”
13ನೇ ವರ್ಷದ ವಾರ್ಷಿಕೋತ್ಸವ

ತಾವರೆಕೆರೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದ ಶ್ರೀ ವರಪ್ರದಾಯಕ ಶನೇಶ್ವರ ಸ್ವಾಮಿಯ ದೇವಾಲಯದಲ್ಲಿ ಕಡೆಯ ಶ್ರಾವಣ ಶನಿವಾರ ಹಾಗೂ ಹದಿಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭ.

ದೇವಾಲಯದ ಪ್ರಧಾನ ಅರ್ಚಕರಾದ ಸುನಿಲ್ ಶಾಸ್ತ್ರಿ ಮಾತನಾಡಿ ತಾವರೆಕೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಶ್ರೀ ರಾಮವಧೂತ ಆಶ್ರಮದಲ್ಲಿ ಇರುವಂತಹ ಶ್ರೀ ವರಪ್ರದಾಯಕ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೆ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಶನಿಮಹಾತ್ಮ ಸ್ವಾಮಿಗೆ ಬೆಳಗ್ಗೆ ಐದು ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ತೈಲಾಭಿಷೇಕ , ನಂತರ ಬೆಳಗ್ಗೆ 6 ಗಂಟೆಗೆ ವಿಶೇಷ ಶ್ರೀ ವೆಂಕಟೇಶ್ವರ ಸ್ವಾಮಿಯ ಅಲಂಕಾರ ತಿಲಾರ್ಚನೆ ಮಹಾಮಂಗಳಾರತಿ ನೆರವೇರಿತು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 10:00ಯವರೆಗೂ ನಿರಂತರವಾಗಿ ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು .ಹರಿಕಥೆ, ವೀರಗಾಸೆ ಡೊಳ್ಳು ಕುಣಿತ ಹೀಗೆ ವಿವಿಧ ಕಲಾತಂಡಗಳೊಂದಿಗೆ ಶ್ರೀ ಶನಿ ಮಹಾತ್ಮ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪೂಜೆ ಸಲ್ಲಿಸಲಾಯಿತು ಹಾಗೂ ದೀಪೋತ್ಸವ ಕಾರ್ಯಕ್ರಮವು ಸಹ ದೇವಾಲಯದಲ್ಲಿ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಹೊಸಕೋಟೆ ಕ್ಷೇತ್ರದ ಶಾಸಕರಾದ ಶರತ್ ಬಚ್ಚೇಗೌಡರು ಪಾಲ್ಗೊಂಡು ಮಾತನಾಡಿದ ಅವರು ಪ್ರತಿ ವರ್ಷವೂ ಶ್ರಾವಣ ಶನಿವಾರದ ಕಡೆ ಶನಿವಾರ ತಾವರೆಕೆರೆಯಲ್ಲಿರುವಂತಹ ಶ್ರೀ ಶನಿಮಹಾತ್ಮ ಸ್ವಾಮಿಯ ದರ್ಶನಕ್ಕೆ ಬರುತ್ತೇನೆ. ಅದೇ ರೀತಿ ಈ ವರ್ಷವೂ ಸಹ ಬಂದು ಶ್ರೀ ಸ್ವಾಮಿಯ ದರ್ಶನ ಪಡೆದಿದ್ದೇನೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಪೂಜಾ ಕಾರ್ಯಕ್ರಮಕ್ಕೆ ಭಕ್ತ ಸಮೂಹ ಹೆಚ್ಚಾಗುತ್ತಿರುವುದನ್ನು ಕಂಡು ಬಹಳ ಸಂತೋಷದ ವಿಷಯವಾಗಿದೆ ಅದರಲ್ಲೂ ವಿಶೇಷವಾಗಿ ಪಕ್ಷಾತೀತವಾಗಿ ಜಾತಿಭೇದ ಮರೆತು ಎಲ್ಲಾ ಜನಾಂಗದವರು ಒಗ್ಗಟ್ಟಿನಿಂದ ಸೇರಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದರು ಹಾಗೂ ಶ್ರೀ ಶನಿಮಹಾತ್ಮ ಸ್ವಾಮಿಯ ಆಶೀರ್ವಾದ ಸಮಸ್ತ ನಾಡಿನ ಜನತೆ ಮೇಲೆ ಇರಲಿ ಎಂದು ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಬಿ.ವಿ ಬೈರೇಗೌಡ, ಬಿ.ವಿ ರಾಜಶೇಖರ್ ಗೌಡ , ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೆಎಂಎಂ ಮಂಜುನಾಥ್ , ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ. ಎಸ್ ರಾಜಶೇಖರ್, ತಾವರೆಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಿಯಾಂಕ ರಮೇಶ್, ಮಾಜಿ ಅಧ್ಯಕ್ಷರಾದ ರವಿಕುಮಾರ್, ಪವಿತ್ರ ಮಂಜುನಾಥ್, ಸುಧಾಕರ್, ಜಗದೀಶ್, ಮಂದೀಪ್ ಗೌಡ, ಯಲಚಹಳ್ಳಿ ದೇವರಾಜ್ , ಗುರುಬಸಪ್ಪ, ಶ್ರೀ ರಾಮವಧೂತ ಆಶ್ರಮದ ಪ್ರಧಾನ ಕಾರ್ಯದರ್ಶಿ ಟಿ ನಾಗರಾಜ್, ಖಜನ್ಸಿ ರಾಜೇಶ್, ಮಮತಾ ಮಂಜುನಾಥ್, ನಾಗೇಶ್, ಜ್ಞಾನಮೂರ್ತಿ, ನಂದಕುಮಾರ್ ,ಡಿ. ನರಸಿಂಹಯ್ಯ, ಹಾಗೂ ತಾವರೆಕೆರೆ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.