ಕಟ್ಟಿದ ಕಿಟಕಿ ಸಜ್ಜೆ ಅವಘಡ ಸರ್ಕಾರಿ ಶಾಲಾ ಮೂರು ಮಕ್ಕಳು ಮೃತ್ಯು ಕೂಪದಿಂದ ಪಾರು ಬಿಇಎಲ್ ಕಂಪನಿ ವಿರುದ್ದ ಸಾರ್ವಜನಿಕರು ಕಿಡಿ..
ದೇವನಹಳ್ಳಿ:ಸರ್ಕಾರಿ ಶಾಲಾ ಮಕ್ಕಳ ತಲೆ ಮೇಲೆ ಬಿದ್ದ ಕಟ್ಟದ ಸಜೆ ಅವಘಡದಲ್ಲಿ ಮೂರು ಮಕ್ಕಳಿಗೆ ಗಂಭೀರ ಗಾಯ ಮೃತ್ಯು ಕೂಪದಿಂದ ಕ್ಷಣಮಾತ್ರದಲ್ಲಿ ಬಚಾವಾದ ವಿದ್ಯಾರ್ಥಿಗಳು. ಕೇವಲ 9 ವರ್ಷಗಳ ಹಿಂದಷ್ಟೇ ಕಟ್ಟಿ ದ ಕಟ್ಟಡದಲ್ಲಿ ಭಾರೀ ಅವಾಂತರ ತಪ್ಪಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಅವಘಡ ಪಟ್ಟಣದ ಕೋಟೆ ಬೀದಿಯ ಘಟನೆಯಲ್ಲಿ ಶಾಲೆ ಯಾಗಿದೆ. ಇದೇ ಶಾಲೆ ವಿದ್ಯಾರ್ಥಿಗಳಾದ ಭುವನ್ 7 ವರ್ಷ, ದರ್ಶನ್ 14 ವರ್ಷ, ಕುಮಾರ್ 15 ಮಕ್ಕಳಿಗೆ ಗಂಭೀರ ಗಾಯವಾಗಿದೆ. ಅವಘಡದ ಬಳಿಕ ಮಕ್ಕಳನ್ನ ಸ್ಥಳೀಯ ಸರ್ಕಾರಿ, ಖಾಸಗಿಶಾಲಾ ಆಸ್ಪತ್ರೆಗೆ ರವಾನೆ. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಕ್ಕಳ ಆಸ್ಪತ್ರೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಇಒ ಅನುರಾಧ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.