ಮಕ್ಕಳಿಂದ ಮಣ್ಣಿನ ಗಣೇಶಮೂರ್ತಿ ರಚನೆ : ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸಂದೇಶ

ಹೊಸಕೋಟೆ:ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕೋಟೂರು ಗ್ರಾಮದಲ್ಲಿರುವ ಟಿಜಿಎಸ್‌ಬಿ ಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಂದ ಬೀಜ ಹುದಗಿಸಿದ ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ರಚಿಸಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಸಂದೇಶ ನೀಡಿದರು.

ವಿನಾಯಕ ಚತುರ್ಥಿ ಪ್ರಯುಕ್ತ ಶಾಲೆಯ ಮಕ್ಕಳಿಂದಲೆ ಗಣೇಶ ಮೂರ್ತಿಗಳನ್ನು ರಚಿಸುವಂತೆ ಪ್ರೇರಣೆ ನೀಡಲಾಗಿತ್ತು. ಈ ಸಂಧರ್ಭದಲ್ಲಿ ಶಾಲೆಯ ಪ್ರಾಂಶುಪಾಲೆ ಉಷಾ ಅಯ್ಯರ್ ಮಾತನಾಡಿ ಪರಿಸರ ಸಂರಕ್ಷಣೆಯ ದೂರದೃಷ್ಟಿಯನ್ನು ಮಕ್ಕಳಲ್ಲಿ ಉಂಟು ಮಾಡುವ ಸಲುವಾಗಿ ಗಣೇಶ ವಿಗ್ರಹಗಳನ್ನು 10ನೇ ತರಗತಿ ಮಕ್ಕಳಿಂದಲೆ ಜೇಡಿ ಮಣ್ಣಿನಿಂದ ತಯಾರಿಸುವಂತೆ ಶಾಲಾ ಶಿಕ್ಷಕರು ತರಬೇತಿ ನೀಡಿದ್ದಾರೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಈ ವರ್ಷ ನಮ್ಮ ಶಾಲಾ ಮಕ್ಕಳಿಗೆ ಹೇಗೆ ಹಬ್ಬ ಆಚರಿಸುತ್ತೇವೆ ಎನ್ನುವುದಕ್ಕಿಂತ ಪರಿಸರ ಸಂರಕ್ಷಣೆ ಮಾಡುವ ಮೂಲಕ ನಾವು ಹೇಗೆ ಜವಾಬ್ದಾರಿಯುತವಾಗಿ ಆಚರಿಸುತ್ತೇವೆ ಎಂದು ಅರಿವನ್ನು ಮೂಡಿಸುವ ಸಲುವಾಗಿ ಸವಾಲಾಗಿ ಹಾಕಿದ ಬೀಜಗಳನ್ನು ನೆಡುವುದರಿಂದ ಹಿಡಿದು ಸೂಕ್ಷ್ಮದರ್ಶಕದ ಮೂಲಕ ಜೇಡಿಮಣ್ಣನ್ನು ವಿಶ್ಲೇಶಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳವರೆಗೆ ಭಕ್ತಿಯ ಪಾರಮ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಮಹತ್ವದ ಕೆಲಸ ಮಾಡಲಾಗಿದೆ ಎಂದರು.