ಡೇರಿಯ ಆದಾಯ ವರ್ಷದಿಂದ ವರ್ಷಕ್ಕೆ ದ್ವಿಗುಣ ಗೊಳ್ಳಲು ಉತ್ಪಾದ ಕರ ನಿರಂತರ ಪರಿಶ್ರಮವಿದೆ ಮುನಿರಾಜು ಪ್ರಶಂಸೆ

ದೇವನಹಳ್ಳಿ :- ಕಳೆದ ಹಲವು ವರ್ಷಗಳಿಂದ ನಮ್ಮ ಲ್ಲಿನ ಹಾಲು ಉತ್ಪಾದಕರಿಗೆ ಬೇಕಿರುವ ಸವಲತ್ತು ಗಳನ್ನು ನಿಗದಿತ ಅವಧಿಯೊಳಗೆ ಒದಗಿಸಿಕೊಡು ವುದಲ್ಲದೆ ಬೇರೆಯ ಆದಾಯ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳಲು ಹಾಲು ಉತ್ಪಾದಕರ ನಿರಂತರ ಪರಿಶ್ರಮವಿದೆ ಎಂದು ದೇವನಹಳ್ಳಿ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಮುನಿರಾಜು ಪ್ರಶಂಸೆ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲೂಕಿನ ಆಲೂರು ದುದ್ದನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾವಾರ್ಷಿಕ ಸಭೆ ಶುಕ್ರವಾರ ನಡೆದಿದ್ದು ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಹಾಲು ಉತ್ಪಾದ ಕರ ಸಹಕಾರ ಸಂಘದಿಂದ ಹಾಲು ಉತ್ಪಾದಕರಿಗೆ ಕಲ್ಯಾಣ ನಿಧಿ ಸ್ಥಾಪಿಸಿ, ಸದಸ್ಯರ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರು ಹಾಲು ಒಕ್ಕೂಟ ಸಹಾಯಧನ ನೀಡುತ್ತಾ ಬಂದಿದೆ. ಜನಶ್ರೀ ಬಿಮಾ ಯೋಜನೆಯಲ್ಲಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಪರಿಹಾರ ನೀಡುತ್ತಿ ದ್ದೇವೆ. ರಾಸುಗಳಿಗೆ ಒಕ್ಕೂಟವು ಶೇ. 50 ರಷ್ಟು ವಿಮಾ ಮೊತ್ತ ಪಾವತಿಸಿ ಮಿಕ್ಕ ಮೊತ್ತವನ್ನು ಸದಸ್ಯರೆ ಪಾವತಿ ಸಬೇಕಿದೆ. ಸಂಘದಿಂದ ದೊರೆಯಬಹುದಾದ ಸೌಲಭ್ಯ ಗಳ ಮಾಹಿತಿ ನೀಡಿದರು. ನಮ್ಮಲ್ಲಿ ಪ್ರತಿದಿನ 1300 ಲೀಟರ್ ಹಾಲು ಶೇಕರಣೆ. 2.70 ಲಕ್ಷ ರೂ ಒಟ್ಟು ವಾರ್ಷಿಕ ಆದಾಯ, 80 ಜನ ಹಾಲು ಉತ್ಪಾದಕರಿದ್ದು ವರ್ಷದಿಂದ ವರ್ಷಕ್ಕೆ ಆದಾಯ ದ್ವಿಗುಣ ಗೊಳ್ಳುತ್ತಿ ರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಪಿ. ಮುನಿರಾಜು, ಕುಂದಾಣ ಸೊಸೖಟಿ ನಿರ್ದೇಶಕ ಸೋಮಶೇಖರ್, ಮಾಜಿ ಅಧ್ಯಕ್ಷ ಮಧು, ಮಾಜಿ ಅಧ್ಯಕ್ಷ ರಂಗಸ್ವಾಮಿ, ನಾಗರಾಜ್, ಡಿಸಿ. ರಂಗಸ್ವಾಮಿ, ಆಲೂರು ದುದ್ದನಹಳ್ಳಿ ಗ್ರಾ. ಪಂ. ಮಾಜಿ ಉಪಾದ್ಯಕ್ಷೆ ಹಾಲಿ ಸದಸ್ಯರಾದ ಕಾಂತ ಮುನಿರಾಜು, ರಘು, ಕಾಂಗ್ರೆಸ್ ಮುಖಂಡ ಮುನೇಗೌಡ, ದುದ್ದನ ಹಳ್ಳಿ, ಡೇರಿ ಉಪಾದ್ಯಕ್ಷ ತಿಮ್ಮರಾಯಪ್ಪ, ಮಾಜಿ ಅದ್ಯಕ್ಷ ಮಂಜುನಾಥ್, ಡೇರಿ ನಿರ್ದೇಶಕರಾದ ನಾರಾಯಣಸ್ವಾಮಿ, ಚನ್ನ ಕೃಷ್ಣಪ್ಣ, ಬಾಲೇಂದ್ರ, ಮುನೇಗೌಡ, ಸಂಪಂಗಿಪ್ಪ, ಮುನಿರಾಜು, ಭಾಗ್ಯಮ್ಮ, ಶಶಿಕಲಾ ಸಿಇಒ ಆನಂದಮೂರ್ತಿ, ಮುಖಂಡರಾದ ಮಧು, ಹರೀಶ್, ನವೀನ್, ಡೇರಿ ಸಿಬ್ಬಂದಿ ರಮೇಶ ಒಳ ಗೊಂಡಂತೆ ಹಾಲು ಉತ್ಪಾ ದಕರು ಹಾಜರಿದ್ದರು