ವಿದ್ಯಾವನ ಕಾಲೇಜಿನಲ್ಲಿ ಗಣೇಶೋತ್ಸವ ಸಂಭ್ರಮ
ಹೊಸಕೋಟೆ:ಆಧುನಿಕತೆಯ ನಡುವೆ ಮನುಷ್ಯ ಆಚರಣೆಗಳಿಂದ ದೂರ ಸರಿಯುತ್ತಿರುವ ನಡುವೆ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಆಚರಣೆಯನ್ನು ವಿಸ್ತರಣೆ ಮಾಡಬೇಕು ಎಂದು ವಿದ್ಯಾವನ ಕಾಲೇಜಿನ ಅಧ್ಯಕ್ಷ ಸುಜಾತ ರೆಡ್ಡಿ ತಿಳಿಸಿದದರು.
ತಾಲೂಕಿನ ತಿರುಮಲಶೆಟ್ಟಿಹಳ್ಳಿ ಕ್ರಾಸ್‌ನಲ್ಲಿರುವ ವಿದ್ಯಾವನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರಾಂತಿಕಾರಿ ಹೋರಾಟಗಾರರಾದ ಬಾಲಗಂಗಾಧರನಾಥ್ ತಿಲಕ್‌ರವರು ಸಮುದಾಯವನ್ನು ಒಚಿದೆಡೆ ಸೇರಿಸುವ ದೃಷ್ಠಿಯಿಂದ ಗಣೇಶೋತ್ಸವವನ್ನು ಗಲ್ಲಿಗಳಲ್ಲಿ ಆಚರಣೆ ಮಾಡುವ ಪದ್ದತಿಯನ್ನು ಪ್ರಾರಂಭ ಮಾಡಿದರು. ಆದರೆ ಈ ಆಚರಣೆ ದೇಶದ ಮೂಲೆ ಮೂಲೆಗಳಲ್ಲಿ ಪ್ರಾರಂಭವಾಗಿ ಧಾರ್ಮಿಕತೆಯ ಮಹತ್ವವನ್ನು ಸಾರುವಂತಾಯಿತು. ಆದ್ದರಿಂದ ಯುವ ಪೀಳಿಗೆ ಆಚರಣೆಗಳನ್ನು ಮುಂದುವರೆಸಿಕೊಂಡು ಸಂಸ್ಕೃತಿ ಪರಂಪರೆ ಉಳಿಸಬೇಕು ಎಂದರು.ವಿದ್ಯಾವನ ಕಾಲೇಜಿನ ಪ್ರಾಂಶುಪಾಲ ಬೈರಾರೆಡ್ಡಿ ಜಿ.ಮಾತನಾಡಿ ವಿಘ್ನ ನಿವಾರಕನಾದ ಗಣೇಶನನ್ನು ಪ್ರತಿ ದಿನ ಪೂಜಿಸಿ ಆರಾಧಿಸುವ ಆಚರಣೆ ಇದ್ದರೂ ಸಹ ಗಣೇಶ ಹಬ್ಬದಂದು ಗಲ್ಲಿಗಳಲ್ಲಿ ಕೂರಿಸಿ ಆಚರಿಸಿ ಮಣ್ಣಿನ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದು ವಾಡಿಕೆ. ಅದರಂತೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದ್ಧಾರೆ. ಎಂದರು.
ವಿದ್ಯಾವನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಲಹರಿ, ಭಾರ್ಗವಿ, ಚಿತ್ರ, ರಂಜಿತ, ಧೃತಿ, ರಂಜಿತ್ ಕುಮಾರ್ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.