ಯುವ ರಾಜ್ ಕುಮಾರ್ ಅಭಿಮಾನಗಳ ಸಂಘದಿಂದ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ, ಅನ್ನಸಂತರ್ಪಣೆ, ಮಜ್ಜಿಗೆ ಪಾನಕ ವಿತರಣೆ
ದೊಡ್ಡಬಳ್ಳಾಪುರ : ತಾಲೂಕು ಯುವ ರಾಜ್ ಕುಮಾರ್ ಸಂಘದಿಂದ ದಿವಗಂತ ಪುನೀತ್ ರಾಜ್ ಕುಮಾರ್ ರವರ 49 ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗಿತು, ಈ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಲಾಗಿತು.
ದೊಡ್ಡಬಳ್ಳಾಪುರದ ಬಯಲು ಬಸವಣ್ಣ ದೇವಸ್ಥಾನದ ಬಳಿ ಯುವ ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಹಯೋಗದಲ್ಲಿ ಪುನೀತ್ ರವರ ಹುಟ್ಟು ಹಬ್ಬದ ಆಚರಣೆಯನ್ನ ಮಾಡಲಾಗಿತು, ಅ ಇದೇ ವೇಳೆ ಮಾತನಾಡಿದ ಯುವ ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ನಾಗರಾಜ್.ಎನ್.ವೈ, ಪುನೀತ್ ರಾಜ್ ಕುಮಾರ್ ರವರ ಆದರ್ಶವನ್ನ ಇವತ್ತಿನ ಮಕ್ಕಳು ಅಳವಡಿಸಿಕೊಳ್ಳ ಬೇಕಿದೆ, ತೆರೆಮರೆಯಲ್ಲಿ ಅವರು ಮಾಡುತ್ತಿದ್ದ ದಾನ ಧರ್ಮಗಳು ಸಾಕಷ್ಟು ಜನರಿಗೆ ನೆರವಾಗಿದೆ. ಅವರ ನೆನಪಿಗಾಗಿ ಅನ್ನಸಂತರ್ಪಣೆ, ಮಜ್ಜಿಗೆ ಮತ್ತು ಪಾನಕ ವಿತರಣೆ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ ಎಂದರು,
ಕಾರ್ಯಕ್ರಮದಲ್ಲಿ ನಂದಿನಿ ಪಾರ್ಲರ್ ಮಾಲೀಕರಾದ ಕುಮಾರಣ್ಣ, ಕೆಂಪರಾಜು, ಚೌಡರಾಜ್, ನಾಗಲಕ್ಷ್ಮಮ, ಮಂಜುನಾಥ್, ಆನಂದಪ್ಪ ಭಾಗವಹಿಸಿದ್ದರು.