ಅರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ದೊರೆತ ನ್ಯಾಕ್ ‘ಎ’ ಶ್ರೇಣಿ 23 ವರ್ಷಗಳ ಅವಧಿಯಲ್ಲಿ 10 ಸಾವಿರ ಇಂಜಿನಿಯರ್ಸ್ ಕೊಡುಗೆ ನೀಡಿರುವ ಕಾಲೇಜ್.

ದೊಡ್ಡಬಳ್ಳಾಪುರ : ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿಶ್ವವಿದ್ಯಾಲಯ ಆರಂಭವಾಗಿ 23 ವರ್ಷಗಳು, ಈ ಅವಧಿಯಲ್ಲಿ ಕಾಲೇಜ್ ನಿಂದ ಇಂಜಿನಿಯರ್ಸ್ ಆಗಿ ಬಂದವರು 10 ಸಾವಿರ ವಿದ್ಯಾರ್ಥಿಗಳು, ಕೈಗೆಟುಕುವ ದರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವ ಕಾಲೇಜ್ ಗೆ ನ್ಯಾಕ್ ಕಮಿಟಿಯಿಂದ ಎ ಗ್ರೇಡ್ ಮಾನ್ಯತೆ ಸಿಕ್ಕಿದೆ,

ರಾಷ್ಟ್ರದ ಅತ್ಯುನ್ನತ ಮೌಲ್ಯಮಾಪನ ಮಾನ್ಯತಾ ಪರಿಷತ್ (NAAC) ಉನ್ನತ ಶಿಕ್ಷಣ ಮೌಲ್ಯಮಾಪನ ಮಾಡುವ ದೇಶದ ಅತ್ಯುನ್ನತ ಸಂಸ್ಥೆ, ದೊಡ್ಡಬಳ್ಳಾಪುರದ ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾವಿಶ್ವವಿದ್ಯಾಲಯಕ್ಕೆ ನ್ಯಾಕ್ ಕಮಿಟಿ ಮೂವರು ಸದಸ್ಯರು ಭೇಟಿ ನೀಡಿದ್ದರು, ಈ ವೇಳೆ ಕಾಲೇಜ್ ನಲ್ಲಿರುವ ಭೋಧನೆ,ಮೂಲಭೂತ ಸೌಕರ್ಯಗಳು, ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳ ಕಾರ್ಯಶೈಲಿಯನ್ನ ನೋಡಿ ಅಂಕಗಳನ್ನ ನೀಡುತ್ತದೆ. ನ್ಯಾಕ್ ಕಮಿಟಿಯ ಸದಸ್ಯರ ತಂಡ ಅಂತಿಮವಾಗಿ ಜಾಲಪ್ಪ ಕಾಲೇಜ್ ಗೆ 4 ಅಂಕಗಳಿಗೆ 3.24 ಅಂಕಗಳನ್ನ ನೀಡಿ ಎ ಗ್ರೇಡ್ ನೀಡಿದೆ.

ಆರ್.ಎಲ್. ಜಾಲಪ್ಪ ತಾಂತ್ರಿಕ ಮಹಾವಿಶ್ವವಿದ್ಯಾಲಯಕ್ಕೆ ನ್ಯಾಕ್ ಕಮಿಟಿಯಿಂದ ಸಿಕ್ಕ ಗೌರವಕ್ಕೆ ಇಂದು ಕಾಲೇಜ್ ನಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಲಾಗಿತು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀದೇವರಾಜ್ ಅರಸ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ರಾಜೇಂದ್ರ ಮಾತನಾಡಿ ಇಂಜಿನಿಯರಿಂಗ್ ಕಾಲೇಜ್ ಸ್ಫಾಪನೆ ಮಾಡುವುದು ಜಾಲಪ್ಪನವರ ಕನಸ್ಸು, ಇಂಜಿನಿಯರಿಂಗ್ ಪದವಿ ಕಲಿಯಲು ಸ್ಥಳೀಯ ವಿದ್ಯಾರ್ಥಿಗಳು ಬೆಂಗಳೂರಿಗೆ ಹೋಗ ಬೇಕಿತ್ತು, ಬೆಂಗಳೂರಿನ ಅನಿವಾರ್ಯತೆ ಮತ್ತು ಪೋಷಕರಿಗೆ ಕೈಗೆಟುಕುವ ದರದಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುವ ಕಾರಣಕ್ಕೆ 2001ರಲ್ಲಿ ಆರ್.ಎಲ್.ಜಾಲಪ್ಪ ತಾಂತ್ರಿಕ್ ಮಹಾವಿಶ್ವವಿದ್ಯಾಯಲ ಸ್ಫಾಪನೆ ಮಾಡಲಾಗಿದೆ. 23 ವರ್ಷಗಳ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಇಂಜಿನಿಯರ್ಸ್ ಇಲ್ಲಿಂದ ಪದವಿ ಪಡೆದಿದ್ದಾರೆ, ಸ್ಥಳೀಯ 500 ಇಂಜಿನಿಯರ್ಸ್ ಗಳು ಪದವಿ ಪಡೆದಿರುವುದು ನಮ್ಮ ಸಂಸ್ಥೆಯ ಹೆಮ್ಮೆ,

ವಿದ್ಯಾರ್ಥಿಗಳು ಬೆಂಗಳೂರು ಸಿಟಿ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜ್ ಸೇರುತ್ತಾರೆ, ಶೇಕಡಾ 90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನ ದಾಖಲು ಮಾಡಿಕೊಂಡು ಸಾಧನೆ ಮಾಡುವುದು ದೊಡ್ಡ ಕೆಲಸವಲ್ಲ, ಸಾಮಾನ್ಯ ವಿದ್ಯಾರ್ಥಿಗಳನ್ನ ದಾಖಲು ಮಾಡಿಕೊಂಡು ಸಾಧನೆ ಮಾಡುವುದು ದೊಡ್ಡ ಸಾಧನೆ ಅಂತಹ ಸಾಧನೆಯನ್ನ ನಮ್ಮ ಸಂಸ್ಥೆ ಮಾಡುತ್ತಿದೆ, ಬೆಂಗಳೂರು ಸಿಟಿಯಲ್ಲಿ ಸೀಟ್ ಸಿಗದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ, ಇಂತಹ ವಿದ್ಯಾರ್ಥಿಗಳಿಂದ ಸಾಧನೆ ಮಾಡಿಸುವ ಕೆಲಸವನ್ನು ನಾವು ಮಾಡುತ್ತಿವೆ ಎಂದರು.

ನಾಕ್ಯ್ ಕಮಿಟಿ ನೀಡಿರುವ ಎ ಗ್ರೇಡ್ ಮಾನ್ಯತೆ ನಮ್ಮ ಕಾಲೇಜ್ ಗೆ ಒಂದು ಬ್ರ್ಯಾಂಡ್ ನೀಡಿದೆ, ಈ ಮೂಲಕ ಕಂಪನಿಗಳು ನಮ್ಮ ಕಾಲೇಜ್ ಬರಲಿವೆ, ವಿದ್ಯಾರ್ಥಿಗಳಿಗೆ ಉತ್ತಮ ಫ್ಲೇಸ್ ಮೆಂಟ್ ಸಿಗಲಿದೆ, ನಮ್ಮ ಸುತ್ತಮುತ್ತ ಅಟಾನಾಮಸ್ ವಿಶ್ವವಿದ್ಯಾಲಯಗಳಿದ್ದು, ಅವುಗಳ ನಡುವೆ ಸರ್ಕಾರದ ಅಧಿನದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕಾಲೇಜ್ ಗೆ ಹೊರಗೆ ಉತ್ತಮ ಮೌನ್ಯತೆ ಸಿಗುತ್ತಿದೆ ಎಂದರು.