ಮನೆ ಕಟ್ಟಲು ತೊಂದರೆ, ಅಸಹಾಯಕ ತಾಯಿಯ ಕಣ್ಣೀರು, ನಗರಸಭಾ ಸದಸ್ಯ ಸಂಬಂಧಿಕರದಿಂದ ಅಧಿಕಾರ ದುರ್ಬಳಕೆ ಆರೋಪ..?kop
ದೊಡ್ಡಬಳ್ಳಾಪುರ : ಅಸಹಾಯಕ ತಾಯಿಯೊಬ್ಬಳು ಪಿತ್ರಾರ್ಜಿತವಾಗಿ ತನ್ನ ಗಂಡನಿಗೆ ಬಂದ ಜಾಗದಲ್ಲಿ ಮನೆ ಕಟ್ಟಲು ಮುಂದಾಗುತ್ತಾರೆ, ಆಕೆ ಮನೆ ಕಟ್ಟಿದ್ರೆ ತನ್ನ ಮನೆಗೆ ತೊಂದರೆಯಾಗುತ್ತೆ ಅನ್ನುವ ಕಾರಣಕ್ಕೆ ಪಕ್ಕದ ಮನೆಯವರು ತೊಂದರೆಯನ್ನ ಕೊಡುತ್ತಿದ್ದಾರೆ, ನಗರಸಭಾ ಸದಸ್ಯರ ಸಂಬಂಧಿಕನಾಗಿರುವ ಆತ ಆಧಿಕಾರ ದುರ್ಬಳಕೆ ಮಾಡಿಕೊಂಡು ತೊಂದರೆಯನ್ನ ನೀಡುತ್ತಿದ್ದು, ಮನೆ ಕಟ್ಟಲಾಗದೆ ಆ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ನ ಧರ್ಮರಾಯಸ್ವಾಮಿ ನಗರದ ನಿವಾಸಿಯಾಗಿರುವ ಯಶೋಧಮ್ಮ, ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮನೆಯನ್ನ ಕಟ್ಟುತ್ತಿದ್ದಾರೆ, ಗಂಡ ಲಕ್ಷಣ್ ಎಂಬುವರಿಗೆ ಪಿತ್ರಾರ್ಜಿತವಾಗಿ ಬಂದಿದ್ದ 40*36 ಅಳತೆಯ ನಿವೇಶನದಲ್ಲಿ ಮನೆಯನ್ನ ಕಟ್ಟಲು ಪಾಯ ನಿರ್ಮಾಣಕ್ಕೆ ಮುಂದಾಗಿದ್ರು, ಅದರೆ ಪಕ್ಕದ ಮನೆಯ ನಿವಾಸಿಯಾಗಿರುವ ರಘು ಮತ್ತು ರಾಮಾಂಜಿನಪ್ಪ ನವರು ಮನೆ ಕಟ್ಟಲು ತೊಂದರೆ ಕೊಡುತ್ತಿರುವುದು ಯಶೋಧಮ್ಮನವರ ಕಣ್ಣೀರಿಗೆ ಕಾರಣವಾಗಿದೆ.
ಮಹಿಳಾ ಮತ್ತು ಮಕ್ಕಳು ವಯೋವೃದ್ಧರ ಹಿತಾರಕ್ಷಣಾ ಸಮಿತಿಯ ಅವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಭಾಗ್ಯಲಕ್ಷಮ್ಮನವರು ಮಾತನಾಡಿದ ಯಶೋಧಮ್ಮನವರದ್ದು ರೆವಿನ್ಯೂ ನಿವೇಶನ, ಇ ಖಾತೆ ಮಾಡಲು ನಗರಸಭೆಗೆ ಅರ್ಜಿಯನ್ನು ಹಾಕಲಾಗಿದೆ,ಮನೆ ಕಟ್ಟಲು ನಗರಸಭೆಯಿಂದ ಅನುಮತಿ ಪಡೆದಿಲ್ಲ ಎಂಬ ಏಕೈಕ ಕಾರಣವನ್ನ ನೆಪ ಮಾಡಿಕೊಂಡು ರಘುರವರು ನಗರಸಭೆ ಅಧಿಕಾರಿಗಳಿಂದ ಮನೆ ಕಟ್ಟದಂತೆ ತೊಂದರೆ ಕೊಡುತ್ತಿದ್ದಾರೆ ಎಂಬುದು ನಾಗಲಕ್ಷಮ್ಮನವರ ಆರೋಪ,
ಧರ್ಮರಾಯಸ್ವಾಮಿ ನಗರದಲ್ಲಿನ 200ಕ್ಕೂ ಹೆಚ್ಚು ಮನೆಗಳನ್ನ ಕಟ್ಟಿರುವುದು ರೆವೆನ್ಯೂ ನಿವೇಶನದಲ್ಲಿ, ನಗರಸಭೆಯಿಂದ ಯಾರಿಗೂ ಇ ಖಾತೆಯಾಗಿಲ್ಲ, ಸದ್ಯ ಇವರ ನಿವೇಶನದ ಅಕ್ಕಪಕ್ಕ ಮೂರು ಮನೆಗಳನ್ನ ಕಟ್ಟಲಾಗುತ್ತಿದೆ ಅವರು ಸಹ ಯಾವುದೇ ಅನುಮತಿಯನ್ನ ಪಡೆದಿಲ್ಲ, ರಘುರವರು ಸಹ ಮನೆ ಕಟ್ಟಲು ಅನುಮತಿಯನ್ನ ಪಡೆಯದಿಲ್ಲ , ಹೀಗಿರುವಾಗ ಯಶೋಧಮ್ಮನವರು ಮನೆ ಕಟ್ಟಲು ಮಾತ್ರ ತೊಂದರೆ ಕೊಡುತ್ತಿದ್ದಾರೆ ಎಂದರು.
ಯಶೋಧಮ್ಮನವರ ಮಗ ರವಿಯವರು ಮಾತನಾಡಿ, ರಘುರವರು ನಮ್ಮ ನಿವೇಶನವನ್ನ ಖರೀದಿಗೆ ಕೇಳಿದ್ರು ನಾವು ಕೊಡಲಿಲ್ಲ, ಸದ್ಯ ನಮ್ಮ ನಿವೇಶನ ಅವರ ಮನೆಗೆ ಅಡ್ಡವಾಗಿದ್ದು, ಈ ನಿವೇಶನ ಖರೀದಿ ಮಾಡಿದ್ದಾರೆ ತನ್ನ ಮನೆಗೆ ಅನುಕೂಲವಾಗುತ್ತೆ ಎಂಬ ಕಾರಣಕ್ಕೆ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ, ಅವರ ಸಂಬಂಧಿಕರು ನಗರಸಭಾ ಸದಸ್ಯರು, ಅವರ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ನಗರಸಭೆ ಅಧಿಕಾರಗಳ ಮೂಲಕ ಮನೆ ಕಟ್ಟದಂತೆ ತೊಂದರೆ ಕೊಡುತ್ತಿದ್ದಾರೆಂದು ಆರೋಪ ಮಾಡಿದರು.