ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರಕ್ಕೆ ತರಲು ಟಿ. ವೆಂಕಟರಮಣಯ್ಯ ಅವರ ಶ್ರಮ ದೊಡ್ಡದು. -ಕೆ.ಹೆಚ್.ಮುನಿಯಪ್ಪ.

ದೊಡ್ಡಬಳ್ಳಾಪುರ : ಜಿಲ್ಲಾಸ್ಪತ್ರೆಯನ್ನ ದೊಡ್ಡಬಳ್ಳಾಪುರಕ್ಕೆ ತಂದವರು ಟಿ.ವೆಂಕಟರಣಯ್ಯನವರು, ಬಿಜೆಪಿ ಸರ್ಕಾರದಲ್ಲಿ ಜಿಲ್ಲಾಸ್ಪತ್ರೆ ಕೈತಪ್ಪಿತ್ತು, ಜಿಲ್ಲಾಸ್ಪತ್ರೆ ಮತ್ತೆ ದೊಡ್ಡಬಳ್ಳಾಪುರಕ್ಕೆ ವಾಪಸ್ ತರಲು ಕಣ್ಣೀರಿಟ್ಟಿದ್ರು, ಕೃಷ್ಣಬೈರೇಗೌಡರು ಮತ್ತು ನಾವು ಜಿಲ್ಲಾಸ್ಪತ್ರೆಯನ್ನ ದೊಡ್ಡಬಳ್ಳಾಪುರಕ್ಕೆ ತಂದಿದ್ದೇವೆ ಎಂದು ಸಚಿವರಾದ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ದೊಡ್ಡಬಳ್ಳಾಪುರ ನಗರದ ಒಕ್ಕಲಿಗರ ಭವನದಲ್ಲಿ ಅಯೋಜನೆ ಮಾಡಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆಹಾರ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ನಮ್ಮ ಯೋಜನೆಗಳು ರಾಜ್ಯದ 4.5ಕೋಟಿ ಜನತೆಗೆ ಒಂದಲ ಒಂದುರೀತಿಯಲ್ಲಿ ತಲುಪಿದೆ. ಈ ಬಾರಿ ಪಕ್ಷದ ಪ್ರತಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯಿಂದ ಮತ ಕೇಳಿ ಎಂದರು. ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ.ನಿಮ್ಮ ಬೆಂಬಲದ ಅವಶ್ಯಕತೆ ಇದೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಉತ್ತಮ ಆಡಳಿತ ಪಕ್ಷಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ನಮ್ಮ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಉತ್ತಮ ಸ್ವಭಾವದವರಾಗಿದ್ದು.ಜನಸೇವೆಗಾಗಿ ಆಸ್ಪತ್ರೆ, ವಿದ್ಯಾಮಂದಿರ ಗಳ ನಿಮಾರ್ತೃ, ಎಂ ಎಸ್ ರಾಮಯ್ಯ ರವರ ಕುಟುಂಬದ ಕುಡಿಯಾಗಿದ್ದಾರೆ. ಅವರ ಕುಟುಂಬ ಸತತ ವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು. ರಕ್ಷಾ ರಾಮಯ್ಯ ದೂರ ದೃಷ್ಟಿಯುಳ್ಳ ಉತ್ತಮ ಪ್ರತಿಭಾನ್ವಿತ ನಾಯಕ ಎಂದರು. ಕ್ಷೇತ್ರದ ಅಭಿವೃದ್ಧಿಗಾಗಿ ಮತ ನೀಡುವಂತೆ ಮನವಿ ಮಾಡಿದರು.

ಮಾಜಿ ಶಾಸಕ ವೆಂಕಟರಮಣಯ್ಯ ಬಗ್ಗೆ ಮಾತನಾಡಿದ ಅವರು ದೇಶ ಹಾಗೂ ರಾಜ್ಯದಲ್ಲಿ ಎಂದು ಕಾಣಲು ಸಾಧ್ಯವಿಲ್ಲದ ವ್ಯಕ್ತಿತ್ವ ವೆಂಕಟರಮಣಯ್ಯ ಅವರದ್ದು , ಅವರ ಆಡಳಿತವಧಿಯಲ್ಲಿ ಸರ್ಕಾರಿ ಸೇವೆಗಳನ್ನು ತಾಲ್ಲೂಕಿನ ಪ್ರತಿ ಪ್ರತಿ ಗ್ರಾಮಗಳಿಗೆ ಹಾಗೂ ಪ್ರತಿ ಮತದಾರರಿಗೆ ತಲುಪಿಸಿದ ಒಬ್ಬ ನಾಯಕ. ಇಂದು ತಾಲ್ಲೂಕಿನ ಜಿಲ್ಲಾಸ್ಪತ್ರೆ ಉಳಿಯಲು ಅವರೇ ಕಾರಣ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಸ್ಪತ್ರೆ ಉಳಿವಿಗಾಗಿ ಕಣ್ಣೀರಿಟ್ಟ ನಾಯಕ ವೆಂಕಟರಮಣಯ್ಯ ಎಂದರು.