ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೂ 7 ಜನರಿಂದ ನಾಮಪತ್ರ ಸಲ್ಲಿಕೆ
ಚಿಕ್ಕಬಳ್ಳಾಪುರ : ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಗೆ ಇಲ್ಲಿಯವರೆಗೂ 9 ಜನರು ನಾಮಪತ್ರಗಳನ್ನ ಸಲ್ಲಿಸಿದ್ದಾರೆ, ಕಾಂಗ್ರೆಸ್ ಪಕ್ಷದಿಂದ ರಕ್ಷಾ ರಾಮಯ್ಯ ಮತ್ತು ಬಿಜೆಪಿ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು
ಮಾರ್ಚ್ 28 ರಿಂದ ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದ್ದು, ಏಪ್ರಿಲ್ 1ರ ತನಕ 9 ಜನರು ನಾಮಪತ್ರ ಸಲ್ಲಿಸಿದ್ದಾರೆ, ಕಾಂಗ್ರೆಸ್ ನಿಂದ ಎಂ.ಎಸ್. ರಕ್ಷಾ ರಾಮಯ್ಯ, ಬಿಜೆಪಿಯಿಂದ ಡಾ.ಕೆ.ಸುಧಾಕರ್, ಕರ್ನಾಟ ರಾಷ್ಟ್ರ ಸಮಿತಿ ಪಕ್ಷದಿಂದ ಜಿ ಸುಬ್ರಮಣಿ, ಪಕ್ಷೇತರರಾಗಿ ಎಲ್.ನಾಗರಾಜು, ಕೆ.ವೆಂಕಟೇಶ್, ಎಂ.ವಿ.ಬಾಲಮುರಳಿಕೃಷ್ಣ, ಸುಧಾಕರ್ ಎನ್ ನಾಮಪತ್ರ ಸಲ್ಲಿಸಿದ್ದಾರೆ
ನಾಮಪತ್ರಗಳ ಪರಿಶೀಲನೆ ದಿನಾಂಕ 05 ಏಪ್ರಿಲ್ 2024 (ಶುಕ್ರವಾರ), ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ – 08 ಏಪ್ರಿಲ್ 2024 (ಸೋಮವಾರ), ಮತದಾನದ ದಿನಾಂಕ -26 ಏಪ್ರಿಲ್ 2024 (ಶುಕ್ರವಾರ), ಮತದಾನದ ಸಮಯ- ಬೆಳಿಗ್ಗೆ 7:00 ರಿಂದ ಸಂಜೆ 6:00 ಗಂಟೆ, ಮತ ಎಣಿಕೆ ದಿನಾಂಕ- 04 ಜೂನ್ 2024 (ಮಂಗಳವಾರ), ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳುವ ದಿನಾಂಕ- 06 ಜೂನ್ 2024 (ಗುರುವಾರ).