ಸ್ವಯಂ ಪ್ರೇರಿತರಾಗಿ ರಕ್ಷಣಾ ವೇದಿಕೆಗೆ ಸೇರ್ಪಡೆಯಾದ ಕಾರ್ಯಕರ್ತರು.
ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಆದೇಶದಂತೆ ವಾರ್ಷಿಕ ಸಭೆ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಭಾಷೆಟ್ಟಿ ಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಪುರುಷೋತ್ತಮ್ ಗೌಡ ಮಾತನಾಡಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ಸಕ್ರಿಯ ಸಂಘಟನೆಯಾಗಿ ರೂಪುಗೊಂಡಿದ್ದು, ಇದನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇನ್ನಷ್ಟು ಚುರುಕು ಗೊಳಿಸಲಾಗುವುದು. ಇದರ ಜೊತೆಗೆ ವೇದಿಕೆಯ ಸಿದ್ಧಾಂತಗಳುಹಾಗೂ ಹೋರಾಟಗಳ ರೂಪರೇಷಗಳನ್ನು ಕಾರ್ಯಕರ್ತರಿಗೆ ಅರ್ಥೈಸಲಾಗುವುದು. ಮುಂಬರುವ ದಿನಗಳಲ್ಲಿ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ತಾಲೂಕುಗಳಲ್ಲಿ ರಾಜ್ಯ ಉಪಾಧ್ಯಕ್ಷರಾದ ಪುಟ್ಟೇಗೌಡ, ಮಹಿಳಾ ಉಪಾಧ್ಯಕ್ಷೆ ಅನ್ನಪೂರ್ಣ, ರಾಜ್ಯ ಮುಖಂಡರಾದ ಧರ್ಮರಾಜ್, ಸಹನಾ, ಅಬ್ಬಿಗೆರೆ ವಿನೋದ್, ಅಂಬರೀಶ್, ವೀರಭದ್ರಪ್ಪ, ಸುರೇಶ ಹಾಗೂ ರಾಜ್ಯ ಸಮಿತಿಯ ಸಲಹೆ ಮೇರೆಗೆ ಸಭೆಗಳನ್ನು ಆಯೋಜಿಸಿ ಜಿಲ್ಲೆಯಲ್ಲಿ ವೇದಿಕೆಯನ್ನು ಬಲಿಷ್ಠಗೊಳಿಸಲಾಗುವುದುಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ವೇದಿಕೆಯ ಸಿದ್ದಂತಾಗಳನ್ನು ಒಪ್ಪಿ ಹಲವಾರು ಕಾರ್ಯಕರ್ತರು ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಯದರು. ನೂತನವಾಗಿ ಸೇರ್ಪಡೆಯಾದ ಕಾರ್ಯಕರ್ತರಿಗೆ ವೇದಿಕೆಯ ಪ್ರತಿಘ್ನ ವಿಧಿಯನ್ನು ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡರು ಬೋದಿಸಿದರು. ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸುವ ಬಗ್ಗೆ ಪ್ರಸ್ತಾಪವಾಯಿತು. ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು