ಮೀನು ಹಿಡಿಯಲು ಕೆರೆಗೆ ಇಳಿದ ವ್ಯಕ್ತಿಯ ಸಾವು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವ ಪತ್ತೆ ಕಾರ್ಯಚಾರಣೆ

ದೊಡ್ಡಬಳ್ಳಾಪುರ : ಕೆರೆಯ ಬಳಿ ಕುಡಿಯೊಕ್ಕೆ ಬಂದಿದ್ದ ಸ್ನೇಹಿತರು, ಕುಡಿದ ನಶೆಯಲ್ಲಿ ಮೀನು ಹಿಡಿಯಲು ನೀರಿಗೆ ಇಳಿದಿದ್ದಾರೆ, ನಶೆಯ ಅಮಲು ನೆತ್ತಿಗೇರಿ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಆತನ ಶವ ಪತ್ತೆಗಾಗಿ ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಚಾರಣೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಪಾಲಗಜೋಗಿಹಳ್ಳಿ ಕೆರೆಯ ಬಳಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯಲ್ಲಿ ಪ್ರಕಾಶ್ (45) ಸಾವನ್ನಪ್ಪಿದ್ದಾನೆ, ಮೃತ ವ್ಯಕ್ತಿ ನಗರದ ಡಿಕ್ರಾಸ್ ನಿವಾಸಿಯಾಗಿದ್ದು, ಇಂದು ಸ್ನೇಹಿತನ ಜೊತೆ ಕೆರೆಯ ಬಳಿ ಕುಡಿಯಲು ಬಂದಿದ್ದಾಗ ಘಟನೆ ಸಂಭವಿಸಿದೆ.

ಕುಡಿತ ನಶೆಯಲ್ಲಿ ಮೀನು ಹಿಡಿಯಲು ನೀರಿನಲ್ಲಿ ಇಳಿದಿದ್ದಾರೆ, ಈ ವೇಳೆ ಕುಡಿದು ನಿತ್ರಾಣಗೊಡಿಂದ್ದ ಪ್ರಕಾಶ್ ನೀರಿನಿಂದ ಹೊರಗೆ ಬರಲಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಆತನ ಶವ ಪತ್ತೆಯಾಗದ ಹಿನ್ನಲೆ, ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚಾರಣೆ ಮುಂದುವರೆಸಿದ್ದಾರೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.