ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ಉಪನಿರ್ದೆಶಕರ ದಿಡೀರ್ ಬೇಟಿ

ದೊಡ್ಡಬಳ್ಳಾಪುರ : ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಪ್ರವೀಣ ಬರಗಲ್ಲ ಧಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಹುತೇಕ ಅಂಗಡಿಗಳು ಬಾಗಿಲು ತೆರೆದಿರಲಿಲ್ಲ, ಅಂಗಡಿಗಳ ಮುಂಭಾಗದಲ್ಲಿ ವೇಳಾಪಟ್ಟಿ ಹಾಕಿರಲಿಲ್ಲ, ಪಡಿತರರೊಂದಿಗೆ ಅಸಭ್ಯ ವರ್ತನೆ ತೋರುತ್ತಿರುವುದು ಅವರ ಗಮನಕ್ಕೆ ಬಂದಿದೆ, ಸರ್ಕಾರಿ ನಿಯಮ ಉಲ್ಲಂಘನೆ ಮಾಡಿರುವ ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ತೆಗೆದು ಕೊಳ್ಳುವುದ್ದಾಗಿ ಭರವಸೆ ನೀಡಿದ್ದಾರೆ.

ಸರ್ಕಾರದ ಆದೇಶದಿಂತೆ ತಿಂಗಳ 11ನೇ ತಾರೀಖಿನ ನಂತರ ತಿಂಗಳ ಪೂರ್ತಿ ನ್ಯಾಯಬೆಲೆ ಅಂಗಡಿಗಳು ತೆರೆದಿರ ಬೇಕು, ಆದರೆ ಅಂಗಡಿ ಮಾಲೀಕರು ತಿಂಗಳಲ್ಲಿ ಕೇವಲ ಎರಡರಿಂದ ಮೂರು ದಿನ ತೆಗೆಯುತ್ತಿದ್ದರು, ಕೇವಲ ಎರಡೇ ದಿನದೊಳಗೆ ರೇಷನ್ ತೆಗೆದುಕೊಳ್ಳುವ ಅನಿರ್ವಾಯತೆ ಪಡಿತರರಿಗೆ ಇತ್ತು, ರೇಷನ್ ಸಿಗುವುದಿಲ್ಲ ಎಂಬ ಆತಂಕದಲ್ಲಿ ಪಡಿತರರು ಕೆಲಸಕ್ಕೆ ರಜೆ ಹಾಕಿ, ದಿನಪೂರ್ತಿ ಸರದಿ ಸಾಲಿನಲ್ಲಿ ನಿಂತು ರೇಷನ್ ತೆಗೆದು ಕೊಳ್ಳುತ್ತಿದ್ದರು.

ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರರ ಮೇಲೆ ನಡೆಸುತ್ತಿದ್ದ ಅನ್ಯಾಯದ ವಿರುದ್ದ ಯುವ ಸಂಚಲನ ತಂಡ ಹೋರಾಟವನ್ನು ಮಾಡುತ್ತಿದೆ, ಅಂಗಡಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ತೆಗೆದು ಕೊಳ್ಳುವಂತೆ ಆಹಾರ ಇಲಾಖೆ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ, ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಗಳನ್ನು ಅಂಗಡಿ ಮಾಲೀಕರ ವಿರುದ್ಧ ತೆಗೆದು ಕೊಂಡಿಲ್ಲ, ಅಂಗಡಿ ಮಾಲೀಕರ ಪರವಾಗಿಯೇ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬುದು ಯುವ ಸಂಚಲನ ಸಂಘಟನೆ ಆರೋಪ. ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಧಿಢೀರ್ ಭೇಟಿ ನೀಡುವಂತೆ ಆಗ್ರಹಿಸುತ್ತಲೇ ಬಂದಿದ್ರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಇಲಾಖೆಯ ಉಪನಿರ್ದೇಶಕರಾದ ಪ್ರವೀಣ್ ಬರಗಲ್ಲ ಅವರು ಕಳೆದ ಶನಿವಾರದಂದ್ದು ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯಲ್ಲಿನ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಧಿಢೀರ್ ಭೇಟಿ ನೀಡಿದರು. ಈ ವೇಳೆ ನಗರದಲ್ಲಿ ಬಹುತೇಕ ನ್ಯಾಯಬೆಲೆ ಅಂಗಡಿಗಳು ಬಾಗಿಲು ತೆರೆಯದೆ ಇರುವುದು, ಅಂಗಡಿಗಳ ಮುಂಭಾಗದಲ್ಲಿ ವೇಳಾಪಟ್ಟಿಯನ್ನ ಅಳವಡಿಸದೆ ಇರುವುದು ಮತ್ತು ಪಡಿತರರೊಂದಿಗೆ ಅಂಗಡಿ ಮಾಲೀಕರು ಅಸಭ್ಯವಾಗಿ ನಡೆದು ಕೊಳ್ಳುತ್ತಿವುದರ ಬಗ್ಗೆ ಕಂಡು ಬಂದಿದೆ, ಇದೇ ವೇಳೆ ಪಡಿತರರು ಸಹ ತಮ್ಮ ಸಮಸ್ಯೆಗಳನ್ನ ಅಧಿಕಾರಿಗಳ ಗಮನಕ್ಕೆ ತಂದರು.

ಮಾಧ್ಯಮದೊಂದಿಗೆ ಮಾತನಾಡಿದ ಆಹಾರ ಇಲಾಖೆ ಉಪನಿರ್ದೇಶಕರಾದ ಪ್ರವೀಣ್ ಬರಗಲ್ಲ ರವರು ಸರ್ಕಾರಿ ನಿಯಮಗಳನ್ನ ಉಲ್ಲಂಘನೆ ಮಾಡುತ್ತಿರುವ ಮಾಲೀಕರ ವಿರುದ್ಧ ಕ್ರಮ ತೆಗೆದು ಕೊಳ್ಳುವ ಭರವಸೆ ನೀಡಿದರು, ಪಡಿತರರಿಗೆ ಮನವಿ ಮಾಡಿದ ಅವರು, ತಿಂಗಳ ಪೂರ್ತಿ ನ್ಯಾಯಬೆಲೆ ಅಂಗಡಿಗಳು ತೆರೆದಿರುತ್ತದೆ, ನಿಮಗೆ ಬಿಡುವಿದ್ದಾಗ ಬಂದು ರೇಷನ್ ತೆಗೆದು ಕೊಂಡು ಹೋಗಿ, ಒಂದು ವೇಳೆ ತಿಂಗಳ ಪಡಿತರ ನಿಮಗೆ ಸಿಗದಿದ್ದಲ್ಲಿ ಅಥವಾ ಬಾಗಿಲು ಹಾಕಿದ್ದಲ್ಲಿ ನಮಗೆ ದೂರು ನೀಡುವಂತೆ ಹೇಳಿದರು, ನಿಮ್ಮ ಪಡಿತರ ನಿಮ್ಮ ಅಂಗಡಿಗಳಲ್ಲಿಯೇ ಇರುತ್ತದೆ ಯಾವುದೇ ಆತಂಕ ಬೇಡ ಎಂದು ಹೇಳಿದರು.

ಈ ವೇಳೆ ಆಹಾರ ಇಲಾಖೆಯ ಅಧಿಕಾರಿಗಳು ಯುವ ಸಂಚಲನದ ಚಿದಾನಂದ್, ಗಿರೀಶ್, ನವೀನ್, ಹನುಮಂತರಾಜ್ ಹಾಜರಿದ್ದರು.