ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ದಲಿತ ಸಂಘಟನೆಗಳ ನಿರ್ಧಾರ
ದೊಡ್ಡಬಳ್ಳಾಪುರ:2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಮನುವಾದವನ್ನು ಬಲವಂತವಾಗಿ ಹೇರುತ್ತಿರುವ ಮೋದಿ ನೇತೃತ್ವದ ಬಿಜೆಪಿ ಯನ್ನು ಸೋಲಿಸಲುರಾಜ್ಯದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನ ಸಮಿತಿ ಘೋಷಿಸಿದೆ.
ದೊಡ್ಡಬಳ್ಳಾಪುರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ಕುರಿತು ಮಾತನಾಡಿದ ಸಂಘಟನೆಯ ರಾಜ್ಯ ಮುಖಂಡ ರಮೇಶ್ ಮಾತನಾಡಿ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎನ್ನುವ ದ್ಯೇಯ ಘೋಷದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ದಲಿತ, ಶೂದ್ರ ಮುಂತಾದ ತಳ ಸಮುದಾಯಗಳನ್ನು ತುಳಿಯುವ ಹುನ್ನಾರ ನಡೆಸಿದೆ. ಅದರಲ್ಲೂ ಪ್ರಮುಖವಾಗಿ ಸಂವಿದಾನವನ್ನು ಬದಲಾಯಿಸಲು ಸಂಚು ನಡೆಸಿರುವುದು ಕಂಡನೀಯ. ಅನಂತಕುಮಾರ ಹೆಗ್ಡೆ ಯಂತ ಅಯೋಗ್ಯ ಸಂವಿಧಾನದ ಬದಲಾವಣೆ ಬಗ್ಗೆ ಸತತವಾಗಿ ಮಾತನಾಡುತ್ತಿದ್ದರೂ ಪ್ರಧಾನಿ ಮೋದಿ ಕನಿಷ್ಠ ಅದನ್ನು ಖಂಡಿಸುವ ಮಾತನಾಡಿಲ್ಲ. ಬಿಜೆಪಿ ಸಹ ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟ ಹೆಗ್ಡೆ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರೆ ಬಾಬಾ ಸಾಹೇಬರು ಸಂವಿಧಾನದ ಬಗ್ಗೆ ಬಿಜೆಪಿ ಎಷ್ಟು ಅಸಹನೆ ಇದೆ ಎಂದು ಗೊತ್ತಾಗುತ್ತದೆ. ಮುಖ್ಯವಾಗಿ ಈ ಸಂದರ್ಭದಲ್ಲಿ ಕೋಮುವಾದಿಗಳಿಂದ ದೇಶವನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ. ಬಿಜೆಪಿ ಹತ್ತು ವರ್ಷದ ಸಾಧನೆ ಶೂನ್ಯ. ಬಡವರ ಖಾತೆಗೆ 15ಲಕ್ಷ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಹೀಗೆ ಹತ್ತು ಹಲವು ಬರವಸೆಗಳು ಭರವಸೆಗಳಾಗೆ ಉಳಿದಿವೆ. ಮೋದಿ ಅಧಿಕಾರದಲ್ಲಿ ಸರ್ಕಾರಿ ಸ್ವತ್ತುಗಳನ್ನು ಖಾಸಗಿಯವರಿಗೆ ಮಾರಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಟ್ಟಿದ್ದೆ ದೊಡ್ಡ ಸಾಧನೆಯಗಿದೆ. ಜೊತೆಗೆ ಧರ್ಮವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಚುನಾವಣೆಗೆ ಬಿಜೆಪಿಗರು ಮುಂದಾಗಿದ್ದಾರೆ. ಕೋಮುವಾದಿ ದೋರಣೆಯ ಬಿಜೆಪಿಯ ದುರಾಡಳಿತವನ್ನು ಕೊನೆಗಣಿಸಲು ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಲು ಎಲ್ಲಾ ದಲಿತ ಸಂಘಟನೆಗಳಿಂದ ತೀರ್ಮಾನಿಸಲಾಗಿದೆ ಎಂದು ರಮೇಶ್ ಹೇಳಿದರು.
ಮುಖಂಡ ಮುನಿಸುಬ್ಬು ಮಾತನಾಡಿ ಪ್ರಧಾನಿ ಮೋದಿ ಹತ್ತು ವರ್ಷ ದೇಶವನ್ನಾಳಿದ್ದಾರೆ ಈ ಹತ್ತು ವರ್ಷಗಳಲ್ಲಿ ಜನಪರ ಕಾಳಜಿ ತೋರದೆ ಬಾಬಾ ಸಾಹೇಬರ ಸಂವಿಧಾನದ ಆಶಯಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಒಂದೆಡೆ ಬಾಬಾ ಸಾಹೇಬರು ಬಂದರೂ ಸಂವಿದಾನವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಹೇಳುವ ಬಿಜೆಪಿ ಯವರು ಒಳಗೊಳಗೇ ದಲಿತ ಹಿಂದುಳಿದ ವರ್ಗಗಳನ್ನು ತುಳಿದು ಸಂವಿಧಾನ ಬದಲಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ನೋಡುತ್ತಿರುವ ಬಿಜೆಪಿ ಯಂತ ಕೋಮುವಾದಿ ಪಕ್ಷವನ್ನು ಸೋಲಿಸಿ ಜಾತ್ಯತೀತ ಪಕ್ಷವಾದ ಕಾಂಗ್ರೇಸನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ರಾಜು ಸಣ್ಣಕ್ಕಿ ಮಾತನಾಡಿ ಮೋದಿ ಪ್ರಧಾನಿಯಾಗಿ ಜನಪರ ಆಡಳಿತವನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆ. ರೈತರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಅವರ ಬೆಂಬಲಕ್ಕೆ ನಾವಿದ್ದೇವೆ ಎನ್ನುವ ಮೋದಿರವರು ರೈತರ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಚುಚ್ಚು ಮದ್ದು ಕೊಡಲಾಗದೆ ಉದಾಸೀನಾ ತೋರಿದ್ದು ಕಡೆಗೆ ಕೋರ್ಟ್ ಚೀಮಾರಿ ಹಾಕಿಸಿಕೊಂಡಿದ್ದು ಜೊತೆಗೆ ರಾಜ್ಯದ ಅನುದಾನವನ್ನು ತಡೆ ಹಿಡಿದು ಮಲತಾಯಿ ದೋರಣೆ ತಾಳಿದ್ದು ಇದಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದಾಗ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದು ಬಿಜೆಪಿ ಮನಸ್ಥಿತಿ ಏನೆಂದು ಗೊತ್ತಾಗುತ್ತದೆ. ಒಟ್ಟಾರೆ ಈ ಮನುವಾದಿ ಪಕ್ಷಗಳು ಸಂವಿದಾನವನ್ನು ಗುಪ್ತವಾಗಿ ಬದಲಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ಬಿಜೆಪಿ ಮೈತ್ರಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ ಎಂದು ರಾಜು ಸಣ್ಣಕ್ಕಿ ಹೇಳಿದರು.
ಹಿರಿಯ ಮುಖಂಡ ಗುರುರಾಜಪ್ಪ ಮಾತನಾಡಿ ಪ್ರಸ್ತುತ ಪ್ರಜಾಪ್ರಭುತ್ವ ಸಂಧಿಗ್ದ ಪರಿಸ್ಥಿತಿಯಲ್ಲಿದೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮೋದಿ ಸರ್ಕಾರ ಸರ್ವಾಧಿಕಾರಿ ದೋರಣೆ ತಾಳಿದೆ. ಯಾವುದೇ ಚರ್ಚೆಯಿಲ್ಲದೇ ಶೇಕಡಾ ಮೂರು ಜನಸಂಖ್ಯೆ ಇರುವವರಿಗೆ 10ಪರ್ಸೆಂಟ್ ಮೀಸಲಾತಿ ಕೊಡುತ್ತಾರೆ. ಆದರೆ ಇಲ್ಲಿನ ಮೂಲನಿವಾಸಿಗಳ ಹಾಕ್ಕೋತ್ತಯಗಳನ್ನು ಕಡೆಗಣಿಸುತ್ತಾರೆ. ಮೋದಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಸತ್ತಿದೆ. ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುವ ಹಾಗೆ ಇಲ್ಲಾ. ಜನರ ಆಶಯಕ್ಕೆ ವಿರುದ್ಧವಾಗಿ ಮುನುವಾದಿ ಸಂಸ್ಕೃತಿಯನ್ನು ಬಲವಂತವಾಗಿ ಹೇರಲು ಮೋದಿ ಸರ್ಕಾರ ಹೊರಟಿದೆ. ಇದನ್ನೆಲ್ಲಾ ಪ್ರಶ್ನೆ ಮಾಡಿದರೆ ದೇಶದ್ರೋಹದ ಆಪಾದನೆ ಹೋರಿಸುತ್ತಾರೆಂದರೆ ಮೋದಿ ಆಡಳಿತ ಹೇಗಿದೆ ಎಂಬುದು ಅರ್ಥವಾಗುತ್ತದೆ. ಬರೀ ಸುಳ್ಳುಗಳನ್ನು ಪ್ರತಿ ಪಾಧಿಸುವುದು ಮೋದಿ ಕೆಲಸ. ಹೀಗಾಗಿ ಸಂವಿದಾನವನ್ನು ಬೆಂಬಲಿಸುವ ಜಾತ್ಯತೀತ ಆಶಯವನ್ನುಲಿಸುವ ಕಾಂಗ್ರೆಸ್ ಪಕ್ಷವನ್ನು ನಾವೆಲ್ಲ ಬೆಂಬಲಿಸಬೇಕಿದೆ. ಬಾಬಾ ಸಾಹೇಬರ ಮತದಾನ ಅಸ್ತ್ರವನ್ನು ಬಳಸಿ ಕೋಮುವಾದಿ ಹಾಗೂ ಸರ್ವಾಧಿಕಾರಿ ದೋರಣೆಯನ್ನು ತಿರಸ್ಕರಿಸಬೇಕಿದೆ ಎಂದು ಗುರುರಾಜಪ್ಪ ಹೇಳಿದರು.
ಕುರುಬರಳ್ಳಿ ಮಂಜು, ರಾಜಪ್ಪ, ವಡ್ಡರಹಳ್ಳಿ ರಾಜಗೋಪಾಲ್ ಸೇರಿದಂತೆ ಹಲವಾರು ದಲಿತ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.