SSLC ಸಿ.ಬಿ.ಎಸ್.ಇ. ಫಲಿತಾಂಶ ಪ್ರಕಟ : ದೊಡ್ಡಬಳ್ಳಾಪುರದ ಎಂ.ಎಸ್.ವಿ ಪಬ್ಲಿಕ್ ಶಾಲೆಗೆ 100% ಫಲಿತಾಂಶ

ದೊಡ್ಡಬಳ್ಳಾಪುರ : 2023-24 ಸಾಲಿನ ಸಿ.ಬಿ.ಎಸ್.ಇ ಕೇಂದ್ರೀಯ ಪರೀಕ್ಷಾ ಮಂಡಳಿಯ ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ನಗರದ ಎಂ.ಎಸ್.ವಿ ಪಬ್ಲಿಕ್ ಶಾಲೆಯು ಸತತ 13ನೇ ಬಾರಿಯೂ ಶೇ100 ರಷ್ಟು ಫಲಿತಾಂಶ ಗಳಿಸಿದೆ.

ಈ ಬಾರಿ ಒಟ್ಟು 96 ವಿದ್ಯಾರ್ಥಿಗಳಲ್ಲಿ 19 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ, 56 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಹಾಗೂ 17 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ತ್ರಿಶಾ. ಎಸ್ -93.80% ಪಡೆದು ಶಾಲೆಗೆ ಪ್ರಥಮ ಸ್ಥಾನ, ಪಂಚಮಿ.ಕೆ.ಕಾಡನೂರ್.. -93.60% ದ್ವಿತೀಯ ಸ್ಥಾನ ಹಾಗೂ ಲಿಖಿತಾ.ಎಲ್.ಆರಾಧ್ಯ – 90.00% ತೃತೀಯ ಸ್ಥಾನ ಪಡೆದಿದ್ದಾರೆ.

ಮಕ್ಕಳ ಈ ಫಲಿತಾಂಶಕ್ಕೆ ಮತ್ತು ಅವರ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಸುಬ್ರಹ್ಮಣ್ಯ ಎ ರವರು ಹರ್ಷ ವ್ಯಕ್ತಪಡಿಸಿದ್ದು, ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಗುರು ವೃಂದಕ್ಕೆ ಅಭಿನಂದನೆಗಳು” ತಿಳಿಸಿದ್ದಾರೆ

ಹಾಗೂ ಶಾಲಾ ಕಾರ್ಯದರ್ಶಿಗಳಾದ ಶ್ರೀಮತಿ ಮಂಜುಳಾ ಸುಬ್ರಮಣ್ಯ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ರೆಮ್ಯ.ಬಿ.ವಿ, ಉಪ ಪ್ರಾಂಶುಪಾಲೆ ಶ್ರೀಮತಿ ಪ್ರತಿಮಾ ಪೈ ಹಾಗೂ ಸಿಬ್ಬಂದಿ ವರ್ಗ ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.