ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ ಮಾಡಿದ ಡಬ್ಲ್ಯೂ ಡಬ್ಲ್ಯೂ ಎಫ್ ಸಂಸ್ಥೆ

ದೊಡ್ಡಬಳ್ಳಾಪುರ : ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆ, ಜವಾಹರ್ ನವೋದಯ ವಿದ್ಯಾಲಯ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ನವೋದಯ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಹೊಂಗೆ, ನೇರಳೆ, ಹಲಸು, ಬೆಟ್ಟದ ನೆಲ್ಲಿ, ಸಿಹಿ ಉಣಸೆ ಮತ್ತು ಹಿಪ್ಪೆ ಸಸಿಗಳನ್ನು ನೆಟ್ಟು ಶಾಲಾ ಮಕ್ಕಳಿಗೆ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸಲಾಯಿತು.

ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಆರ್ ಚಕ್ರವರ್ತಿ ಮಾತನಾಡಿ ಶಾಲಾ ಆವರಣದಲ್ಲಿ ಮಳೆ ನೀರು ಹಿಂಗಿಸುವುದು, ಬೂದು ನೀರು ಶುದ್ದೀಕರಣ, ಮರುಬಳಕೆ ಮತ್ತು ಶಾಲಾ ಆವರಣದಲ್ಲಿ ಹೆಚ್ಚು ಗಿಡಮರಗಳನ್ನು ಬೆಳಸುವುದರ ಮೂಲಕ ಪರಿಸರ ಸ್ನೇಹಿ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.

ವಲಯ ಅರಣ್ಯ ಅಧಿಕಾರಿಗಳಾದ ರಾಜಶೇಖರ್ ಮಾತನಾಡಿ ಇಲಾಖೆಯ ವತಿಯಿಂದ ತಾಲೂಕಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲರೂ ಪ್ರತಿದಿನವನ್ನೂ ಪರಿಸರ ದಿನದಂತೆ ಪರಿಸರವನ್ನು ಕಾಪಾಡಬೇಕು ಎಂದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಚಂದ್ರಕುಮಾರ್, ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ, ಡಾ. ಶಾಂತನು ಗುಪ್ತ, ಕಾರ್ತಿಕ್, ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಬಾಗವಹಿಸಿದ್ದರು.