ದೊಡ್ಡಬಳ್ಳಾಪುರ –ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜಗಳ : ಕಛೇರಿ ಒಳಗಿನ ಗಾಜು ಪುಡಿ
ದೊಡ್ಡಬಳ್ಳಾಪುರ : ನೋಂದಣಿಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆ ನಡೆದ ಘಟನೆ ದೊಡ್ಡಬಳ್ಳಾಪುರ ಉಪ ನೋಂದಣಿ ಕಚೇರಿಯ ಒಳಗೆ ನಡೆದಿದೆ.
ದೊಡ್ಡಬಳ್ಳಾಪುರ ಉಪ ನೋಂದಣಿ ಕಚೇರಿಯ ಕೌಂಟರ್ ಬಳಿ ಘಟನೆ ನಡೆದಿದ್ದು, ಕೌಂಟರ್ ಬಳಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಂಡಿದ್ದಾರೆ.
ನೋಂದಣಿಗೆ ಸಂಬಂಧಿಸಿದಂತೆ ಶ್ರೀಕಾಂತ್ ಮತ್ತು ಜಯಣ್ಣ ಎಂಬುವವರು ಗಲಾಟೆ ಮಾಡಿಕೊಂಡಿದ್ದು, ಜಯಣ್ಣ ಎಂಬುವವರ ತಲೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆ ಕಳಿಸಲಾಗಿದೆ.
ಈ ವೇಳೆ ಉಪ ನೋಂದಣಾಧಿಕಾರಿಗಳ ಕಚೇರಿ ಒಳಗಿನ ಕೌಂಟರ್ ಗಾಜುಗಳು ಪುಡಿ ಪುಡಿಯಾಗಿವೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.