ನಿವೇದಿತಾ ಇಂಗ್ಲಿಷ್ ಸ್ಕೂಲ್ CBSE ನಲ್ಲಿ ವಿಶ್ವ ಪರಿಸರ ದಿನಾಚರಣೆ
ದೊಡ್ಡಬಳ್ಳಾಪುರ : ವಿಶ್ವ ಪರಿಸರ ದಿನದ ಅಂಗವಾಗಿ ನಗರದ ನಿವೇದಿತಾ ಇಂಗ್ಲಿಷ್ ಸ್ಕೂಲ್ CBSE ನಲ್ಲಿ ಪರಿಸರ ದಿನವನ್ನ ಆಚರಣೆ ಮಾಡಲಾಗಿತು, ಶಾಲೆಯ ಅವರಣದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಿಡಗಳನ್ನ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದರು.
ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ವರ್ಥೆ, ಪರಿಸರ ಕುರಿತ ಪುಟ್ಟ ಮಕ್ಕಳಿಂದ ವೇಷಭೂಷಣ ಸ್ವರ್ಥೆಯನ್ನ ಅಯೋಜನೆ ಮಾಡಲಾಗಿತು, ಪುಠಾಣಿ ಮಕ್ಕಳು ಭೂಮಿ, ಗಿಡ-ಮರ, ಗಾಳಿ-ನೀರು ಸೇರಿದಂತೆ ಪರಿಸರಕ್ಕೆ ಸಂಬಂಧಪಟ್ಟ ವೇಷಗಳನ್ನ ಧರಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ವಲಯ ಆರಣ್ಯಾಧಿಕಾರಿ ಡಾ.ರಮೇಶ್ ಮಾತನಾಡಿ, ವಿಶ್ವದಲ್ಲಿ ಜೀವಿ ಇರುವ ಏಕೈಕ ಗ್ರಹ ಭೂಮಿ ಮಾತ್ರ, ಮನುಷ್ಯ ಭೂಮಿಯಲ್ಲಿ ಮಾತ್ರ ಜೀವಿಸಲು ಮಾತ್ರ ಸಾಧ್ಯ, ಇಂತಹ ಭೂಮಿಯನ್ನ ಉಳಿಸುವ ಜವಬ್ದಾರಿ ನಮ್ಮ ಮೇಲಿದೆ, ಭೂಮಿಯ ಮೇಲೆ ಆರೋಗ್ಯವಂತರಾಗಿ ಇರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರ ಬೇಕು, ಇವತ್ತಿನ ಕೈಗಾರಿಕರಣ ಮತ್ತು ನಾಗರಿಕರಣದಿಂದ ನೀರು,ಗಾಳಿ ಕಲುಷಿತವಾಗುತ್ತಿದೆ, ಕಲುಷಿತ ನೀರು ಮತ್ತು ಗಾಳಿ ಸೇವನೆಯಿಂದ ನಮ್ಮ ಆರೋಗ್ಯ ಕೆಡುತ್ತಿದೆ. ಇದೇ ರೀತಿ ಭೂಮಿ ಮೇಲಿನ ಪರಿಸರ ಮಾಲಿನ್ಯ ಮುಂದುವರೆದಾರೆ ನಮ್ಮ ಮುಂದಿನ ಪೀಳಿಗೆ ಭೂಮಿಯಿಂದ ನಶಿಸಿ ಹೋಗುವುದು, ಆದರಿಂದ ನಮ್ಮ ಭೂಮಿಯ ರಕ್ಷಣೆ ಮಾಡಬೇಕಾಗಿದೆ ಜವಬ್ಧಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೇದಿತಾ ಏಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಜಿ. ರಾಜಣ್ಣ, ನಿವೇದಿತಾ ಇಂಗ್ಲೀಶ್ ಸ್ಕೂಲ್ CBSE ಪ್ರಾಂಶುಪಾಲರಾದ ಪುರುಷೋತ್ತಮ್ .ಆರ್, ರೋಹಿಣಿ ಪುರುಷೋತ್ತಮ್, ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು