ಕೆ ಐ ಎ ಡಿ ಬಿ ವಿರುದ್ದ 165 ದಿನಗಳ ರೈತರ ನಿರಂತರ ಹೋರಾಟ ಸೂಕ್ತ ದರ–ನಿಗದಿಗೆ ಪಟ್ಟು

ದೊಡ್ಡಬಳ್ಳಾಪುರ : ರೈತರ ಹೋರಾಟ 165 ದಿನಕ್ಕೆ ಕಾಲಿಟ್ಟಿದೆ. ಆದರೂ ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಯಾವುದೇ ಪರಿಹಾರದ ಘೋಷಣೆ ಮಾಡಿಲ್ಲ. ಸರ್ಕಾರದ ಎಸ್ ಆರ್ ಬೆಲೆ ಆಧಾರದ ಮೇಲೆ ಭೂ ದರ 1:4 ನಿಗದಿ ಮಾಡಿ ರೈತರನ್ನು ಉಳಿಸಿ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಧಿಕಾರಿಗಳಿಗೆ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಪ್ರತಿ ದಿನ ಕೂಡ ಪ್ರಮುಖವಾದದ್ದು ಆದರೆ ರೈತರು ತಮ್ಮ ಜೀವನಕ್ಕಾಗಿ ಕಳೆದ 165 ದಿನಗಳಿಂದ ಸತತವಾಗಿ ಹೋರಾಟ ನೆಡೆಸುತ್ತಿದ್ದರು ಯಾವುದೇ ರೀತಿಯ ಪರಿಹಾರ ನೀಡದ ಅಧಿಕಾರಿಗಳು ನಮ್ಮಲ್ಲಿ ಇರುವುದು ವಿಪರ್ಯಾಸ . ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುತ್ತಿಲ್ಲ ಅದು ಒಂದು ರೀತಿಯ ದಾನ ಮಾಡಿದಂತೆ ಅದನ್ನು ಅಧಿಕಾರಿಗಳು ಅರಿತು ರೈತರ ಪರ ನಿಲ್ಲಬೇಕಿದೆ. ರೈತರ ಸಹಾಯಕ್ಕೆ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಸದಾ ಬೆಂಬಲವಾಗಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಕೆಐಎಡಿಬಿ ಭೂ ಪರಿಹಾರ ಧನ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ . ನಮ್ಮ ರೈತರ ನಿಯೋಗ ಅವರನ್ನು ಸಂಪರ್ಕಿಸಿದ ದಿನವೇ ಕೆಐಎಡಿಬಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿ ಹೇಳಿ ರೈತರಿಗೆ ಉತ್ತಮ ಬೆಲೆ ನೀಡುವಂತೆ ತಿಳಿಸಿದ್ದಾರೆ ಎಂದರು.

ಈ ಕುರಿತು ನೂತನ ಕೇಂದ್ರ ಸಚಿವರಾದ ಕೆ ಸುಧಾಕರ್ ಗಮನಕ್ಕೂ ತರಲಾಗಿದೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ರೈತರ ಹೋರಾಟವನ್ನು ಬೆಂಬಲಿಸಿ, ಕೆ ಐ ಎ ಡಿ ಬಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದರು.

ನಮ್ಮ ಹೋರಾಟದಿಂದ ರೈತರ ಪ್ರತಿ ಎಕ್ಕರೆ ಭೂಮಿಗೆ ಕೆಐಎಡಿಬಿ ಅಧಿಕಾರಿಗಳು 20 ಲಕ್ಷ ಅಧಿಕ ಮೊತ್ತ ಘೋಷಣೆ ಮಾಡಿರುವುದು ನಮ್ಮ ಯಶಸ್ಸಿಗೆ ಪೂರಕವಾಗಿದೆ ರೈತರು ಧೃತಿಗಡದೆ, ತಾಳ್ಮೆಯಿಂದ ಹೋರಾಟ ಮುಂದುವರೆಸಿದಲ್ಲಿ ಸರ್ಕಾರದ ಮಾನದಂಡಗಳ ಪ್ರಕಾರ 1:4 ದರ ನಿಗದಿ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಅಫೇರಲ್ ಪಾರ್ಕ್ ಕುರಿತು ಹರೀಶ್ ಗೌಡರ ಆಕ್ರೋಶ..

ಈ ಹಿಂದೆ ತಾಲೂಕಿನ ಬಾಷೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆಐಎಡಿಬಿ ವಶಕ್ಕೆ ಪಡೆದಿರುವ ಭೂಮಿಯಿಂದ ಏನಾಗಿದೆ ಎಂಬುದು ಎಲ್ಲರೂ ತಿಳಿದಿದೆ. ಕಾರ್ಖಾನೆಗಳಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸದಾ ಕಿರಿಕಿರಿ ತೊಂದರೆ ಉಂಟಾಗುವುದು ಬಿಟ್ಟರೆ.. ಮತ್ತೇನು ಪ್ರಯೋಜನವಾಗುತ್ತಿಲ್ಲ. ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯ ಅಂತರ್ಜಲ ಸೇರಿ ಜಲ ಸಂಪನ್ಮೂಲ ಸಂಪೂರ್ಣ ಹಾಳಾಗಿದ್ದು ನಾವು ಕಾಣಬಹುದಾಗಿದೆ. ಒಮ್ಮೆ ಕಾರ್ಖಾನೆಗಳಿಗಾಗಿ ಭೂಮಿ ಪಡೆದುಕೊಂಡರೆ ಮತ್ತೆ ಆ ಭೂಮಿಯಲ್ಲಿ ವ್ಯವಸಾಯ ಎಂಬುದು ಕನಸಿನ ಮಾತಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ರೈತ ಮುಖಂಡರಾದ ಆನಂದ್ ಮಾತನಾಡಿ ಸರ್ಕಾರದ ಮನದಂಡಗಳನ್ನು ಉಲ್ಲಂಘಸಿ ಭೂ ದರ ನಿಗದಿ ಮಾಡಿರುವ ಹಿನ್ನಲೆ ರೈತರು ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಸತತ 165 ದಿನಗಳಿಗೆ ನಮ್ಮ ಹೋರಾಟ ಕಾಲಿಟ್ಟಿದ್ದು ಈ ಕುರಿತು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹಾರಿಸುವಂತೆ ಮನವಿ ಮಾಡಿದ್ದೇವೆ ಎಂದರು.

ಜೂನ್ 11 ರಂದು ಅಧಿಕಾರಿಗಳಾದ ಸೇಲ್ವಾ ಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು ಸಭೆಯಲ್ಲಿ ಪ್ರತಿ ಎಕ್ಕರೆ ಗೆ 20 ಲಕ್ಷ ಹೆಚ್ಚುವರಿ ನೀಡುತ್ತೇವೆ ಎಂದು ಅಧಿಕೃತವಾಗಿ ರೈತರಿಗೆ ಘೋಷಣೆ ಮಾಡಿದ್ದಾರೆ. ಅಧಿಕಾರಿಗಳ ಘೋಷಣೆ ಸ್ವಾಗತ ಆದರೆ ರೈತರಿಗೆ 1:4 ಅನುಪಾತದಲ್ಲಿ ಭೂ ಪರಿಹಾರ ಧನ ನೀಡಬೇಕು ರೈತರಿಗೆ ಆ ಹಣ ಪಡೆಯುವ ಹಕ್ಕಿದೆ ಎಂದು ಸಭೆ ನೆರೆದಿದ್ದ ರೈತರು ಸಭೆಯನ್ನು ಬಹಿಷ್ಕರಿಸಿ ಹೊರ ಬಂದಿದ್ದೇವೆ.

ಭೂ ಪರಿಹಾರ ಧನದ ವಿಚಾರವಾಗಿ ಸ್ಥಳೀಯ ಕೆಲ ರೈತರಿಂದ ದಿಕ್ಕು ತಪ್ಪಿಸುವ ಪ್ರಯತ್ನ ನೆಡೆಯುತ್ತಿದ್ದು ರೈತರು ಒಮ್ಮತದಿಂದ ಹೋರಾಟ ಮುಂದುವರೆಸುವಂತೆ ಮನವಿ ಮಾಡಿದರು.

ಒಂದುದೇಶದ ಪ್ರಗತಿಗೆ ಕೈಗಾರಿಕೆ ಎಷ್ಟು ಮುಖ್ಯವೋ ಕೃಷಿಯು ಅಷ್ಟೇಮುಖ್ಯವಾದದ್ದು.ಕೈಗಾರಿಕೆಯಿಂದ ಮಾಲಿನ್ಯ ಮಾತ್ರ ಸಾಧ್ಯ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಒಮ್ಮೆ ಭೂಮಿ ಕೊಟ್ಟರೆ ರೈತನ ಬದುಕು ಅಂತ್ಯವಾಗುತ್ತದೆ. ಸೂಕ್ತ ಪರಿಹಾರ ನೀಡದೆ ಹೊರತು ರೈತರು ಭೂಮಿ ನೀಡುವುದು ಸೂಕ್ತವಲ್ಲ ಹಾಗಾಗಿ ಹೋರಾಟದಲ್ಲಿ ನಂಬಿಕೆ ಇರಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸ್ಥಳೀಯ ಮುಖಂಡ ತಾ.ನಾ. ಪ್ರಭುದೇವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ರಾ.ಬೈರೇಗೌಡ, ಚಂದ್ರಣ್ಣ, ಅಶ್ವತ್ಥನಾರಾಯಣ, ಪ್ರವೀಣ್ ಶಾಂತಿನಗರ, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.