ದೊಡ್ಡಬಳ್ಳಾಪುರದಲ್ಲಿ ಜೂನ್ 28ರಿಂದ ಮೂರುದಿನಗಳ ಕಾಲ ಶ್ರೀರಾಮೋತ್ಸವ ಹಾಗು ಶ್ರೀರಾಮ ಶೋಬಾಯಾತ್ರೆ

ದೊಡ್ಡಬಳ್ಳಾಪುರ:ದಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹಿಂದು ಬಾಂಧವರ ಸಂಘಟನೆ,ಹಿಂದೂಗಳ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್,ಭಜರಂಗದಳ ವತಿಯಿಂದ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀ ರಾಮ ಶೋಬಾಯಾತ್ರೆ ಜೂನ್ 28ರಿಂದ ಮೂರು ದಿನಗಳ ಕಾಲ ನೆಡೆಯಲಿದ್ದು ಇದರ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜರಂಗದಳ ಕೋಲಾರ ವಿಭಾಗೀಯ ಸಂಯೋಜಕ ನರೇಶ್ ರೆಡ್ಡಿ ತಿಳಿಸಿದ್ದಾರೆ.

ನಗರದ ಭಜರಂಗದಳದ ಕಾರ್ಯಾಲಯದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 9 ವರ್ಷಗಳಿಂದ ಶ್ರೀ ರಾಮೋತ್ಸವ ಹಾಗು ಶ್ರೀ ರಾಮ ಶೋಭಾಯಾತ್ರೆಯನ್ನು ನಡೆಸಲಾಗಿದ್ದು,ಈ ಬಾರಿ ಚುನಾವಣೆ ಗಳ ಹಿನ್ನೆಲೆಯಲ್ಲಿ ಕಾರ್ಯಕ್ರಮ ತಡವಾಗಿದೆ.ಈ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಯಾವುದೇ ವ್ಯಕ್ತಿಯನ್ನು ವೈಭವೀಕರಿಸದೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಲಕ್ಷ ಮಂದಿ ಬಾಗವಹಿಸುವ ನಿರೀಕ್ಷೆ ಇದೆ.

ಜೂನ್ 28ರ ಸಂಜೆ 4 ಘಂಟೆಗೆ ನಗರದ ಮುತ್ಯಾಲಮ್ಮ ದೇವಾಲಯದ ಬಳಿಯಿಂದ ಬೈಕ್,ಕಾರ್ ಸೇರಿದಂತೆ ವಿವಿಧ ವಾಹನಗಳ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಸಂಜೆ 7 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ,ಜೂನ್ 29ರಂದು ಬೆಳಿಗ್ಗೆ 7 ಘಂಟೆಗೆ ಗೋ ಪೂಜೆ,ಮಹಾ ಸುದರ್ಶನ ಹೋಮ,ಶ್ರೀರಾಮ ತಾರಕ ಹೋಮ ಗ್ರಾಮದೇವತೆ ಹೋಮ,ಮದ್ಯಾಹ್ನ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರ ನಾಮ ಮತ್ತು ಹನುಮಾನ್ ಚಾಲೀಸ್ ಸಾಮೂಹಿಕ ಪಟನ ನಡೆಯಲಿದೆ.ಸಂಜೆ 4 ಘಂಟೆಗೆ ಕಲ್ಯಾಣೋತ್ಸವ ನಡೆಯಲಿದ್ದು ಇದರಲ್ಲಿ ದಂಪತಿಗಳು ಬಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ನಂತರ ಗೋ ಆರತಿ ನಡೆಯಲಿದೆ.

ಜೂನ್ 30ರಂದು ಮಧ್ಯಾಹ್ನ 12:30 ಕ್ಕೆ ಭಗತ್ ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ,ಇದರಲ್ಲಿ ಬಾರತಾಂಬೆ,ಶ್ರೀರಾಮ,ಹನಮ,ಶಿವ ಪ್ರತಿಮೆಗಳೊಂದಿಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭುವನೇಶ್ವರಿ ದೇವಿಯ ಮೆರವಣಿಗೆ ವಿವಿದ ಕಲಾ ತಂಡದೊಂದಿಗೆ ನಡೆಯಲಿದ್ದು ನಂತರ ಕಾರ್ಕಳದ ಶ್ರೀಕಾಂತ್ ಶೆಟ್ಟಿ ಅವರಿಂದ ದಿಕ್ಸೂಜಿ ಬಾಷಣ ನಡೆಯಲಿದೆ ಸಂಜೆ ರಾಮಾಯಣ ಕಥೆಯ ಲೇಸರ್ ಶೋ,ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಕಾರ್ಯಕ್ರಮಗಳಿದ್ದು ಹಿಂದೂ ಸಮಾಜದ ಶಕ್ತಿ ಪ್ರದರ್ಶನದ ಈ ಕಾರ್ಯಕ್ರಮದಲ್ಲಿ ಎಲ್ಲರು ಬಾಗವಹಿಸಬೇಕೆಂದು ನರೇಶ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರವಿಕುಮಾರ್,ಉಪಾಧ್ಯಕ್ಷ ಎಂ ಎಸ್ ಸದಾಶಿವಯ್ಯ ಭಜರಂಗದಳ ಪ್ರಮುಖ ಬಾಸ್ಕರ್ ಭಗತ್ ವಿಶ್ವ ಹಿಂದೂಪರಿಷತ್ ನಗರ ಘಟಕದ ಅದ್ಯಕ್ಷ ಮಧುಸೂದನ್, ಕಾರ್ಯದರ್ಶಿ ಮಂಜುಳ,ತಾಲ್ಲೂಕು ಸಂಯೋಜಕ ವಿರಾಜ್ ಹಾಜರಿದ್ದರು.