ನೀಟ್ ಪರೀಕ್ಷೆ ಅಕ್ರಮ… ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ
ದೊಡ್ಡಬಳ್ಳಾಪುರ:ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಕೇಂದ್ರ ಶಿಕ್ಷಣ ಮಂತ್ರಿ ಮಹೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸಿಪಿಐಎಂ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಿಪಿಐಎಂ ಮುಖಂಡ ಪಿ.ಎ ವೆಂಕಟೇಶ್ ಮಾತನಾಡಿ,ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದೆ. ಭಾರಿ ಅಕ್ರಮ ನಡೆದಿರುವ ಸಾಧ್ಯತೆಯಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣಗಳಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಸರ್ಕಾರ ನೀಟ್ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂಬುದು ದೇಶಾದ್ಯಂತವಿರುವ ವಿದ್ಯಾರ್ಥಿಗಳು ಕೂಗಾಗಿದೆ. ನೀಟ್ ಫಲಿತಾಂಶದ ವಿವಾದವಾಗಲು ಅನೇಕ ಅಂಶಗಳು ಕಾರಣವಾಗಿದೆ ಎಂದು ದೂರಿದರು.
ಪ್ರತೀ ವರ್ಷ ೩ ರಿಂದ ೪ ವಿದ್ಯಾರ್ಥಿಗಳು ಟಾಪರ್ ಬರುತ್ತಿದ್ದರು, ಆದರೆ ಈ ಭಾರಿ ಸರಿ ಸುಮಾರು ೬೦ ಕ್ಕಿಂತ ಹೆಚ್ಚು ಜನ ಉತ್ತರ ಭಾರತದವರೇ ಟಾಪರ್ ಗಳಾಗಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ನಮಗೆ ಇರುವ ಮಾಹಿತಿ ಪ್ರಕಾರ ವೃತ್ತಿಪರ ಡಾಕ್ಟರ್ ಗಳೇ ಈ ಪರೀಕ್ಷೆಯನ್ನು ಬರೆದಿದ್ದು, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಬಿಡುಗಡೆ ಗೊಂಡಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದು, ಕೆಲವೊಂದು ರಾಜ್ಯಗಳಲ್ಲಿ ಪರೀಕ್ಷೆ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿಪ್ರಶ್ನೆ ಪತ್ರಿಕೆ ಸರಬರಾಜಾಗಿದ್ದು, ಅದಕ್ಕಾಗಿ ೬೦ ರಿಂದ ೭೦ ಮಾರ್ಕ್ಸ್ ನೀಡಿರುವುದಾಗಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ, ಇದೆಲ್ಲಾ ಉತ್ತರ ಭಾರತ ವಿದ್ಯಾರ್ಥಿಗಳ ಪಾಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಾರೀ ಅನ್ಯಾಯವಾಗಿದ್ದು ಕೂಡಲೇ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನ ಸರಿಪಡಿಸುವದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಸಿಪಿಐಎಂ ದೊಡ್ಡಬಳ್ಳಾಪುರ ತಾಲ್ಲೂಕ್ ಸಮಿತಿ ಕಾರ್ಯದರ್ಶಿ ಎಸ್ ರುದ್ರಾರಾಧ್ಯ,ತಾಲೂಕ್ ಸಮಿತಿ ಸದಸ್ಯರಾದ
ರೇಣುಕಾರಾಧ್ಯ. ಕೆ ರಘುಕುಮಾರ್.ಎಂ ಚೌಡಯ್ಯ. ಮಹಿಳಾ ಮುಖಂಡರಾದ ಸವಿತಾ .ಕಾರ್ಮಿಕ ಮುಖಂಡರಾದ ಅನಿಲ್ ಗುಪ್ತ.ಎಮ್ ಮಂಜುನಾಥ್.ಸಾಧಿಕ್ ಪಾಷಾ. ಏಜಾಜ್ ಪಾಷಾ.
ವಿದ್ಯಾರ್ಥಿ ಮುಖಂಡರಾದ ನಟರಾಜ್ ಗೌಡಪ್ಪ. ಹಾಗೂ ಸಿ ಪಿ ಐ ಎಂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.