ಕೆಂಪೇಗೌಡರು ಸರ್ವ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದವರು… ಕೆ. ಹೆಚ್. ಮುನಿಯಪ್ಪ
ದೊಡ್ಡಬಳ್ಳಾಪುರ:ನಾಡಪ್ರಭು ಕೆಂಪೇಗೌಡರು ಅವರ ಆಡಳಿತದಲ್ಲಿ ದೇವಾಲಯಗಳು ಕೆರೆ ಕುಂಟೆಗಳು ರಸ್ತೆ ಹಾಗು ಸಮುದಾಯಗಳ ಅಭಿವೃದ್ದಿಗೆ ಜಾತಿ ಭೇದ ಹಾಗು ಸರ್ವರು ಒಂದೆ ಎಂದು ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದರು ಎಂದು ಆಹಾರ ಮತ್ತು ನಾಗರೀಕ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು.
ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು. ಕುದುರೆ ರಥದಲ್ಲಿ ಇಟ್ಟು ಭಗತ್ ಸಿಂಗ್ ಕ್ರೀಡಾಂಗಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ನಗರದ ಒಕ್ಕಲಿಗರ ಸಮುದಾಯದಲ್ಲಿ ಭವನದಲ್ಲಿ ಆಯೋಜನೆ ಮಾಡಲಾದ ನಾಡಪ್ರಭು ಕೆಂಪೇಗೌಡರ 515 ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾಡಪ್ರಭು ಕೆಂಪೇಗೌಡರು ದೂರದೃಷ್ಠಿ ಸಮರ್ಥ ಹಾಗು ಜನಪರ ಅಡಳಿತ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಹಾಗು ರಾಜ್ಯ ರಾಜದಾನಿ ಬೆಂಗಳೂರು ನಿರ್ಮಾಣ ಮಾಡುವಲ್ಲಿ ಕೆಂಪೇ ಗೌಡರ ಪಾತ್ರ ಪ್ರಮುಖವಾಗಿದೆ ಇಂದು ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಎಲ್ಲಾ ರಂಗದಲ್ಲಿಯು ಬಲಿಷ್ಠವಾಗಿದೆ ಕೆಂಪಗೆ ಗೌಡರು ವೃತ್ತಿಗೆ ಅನುಗುಣವಾಗಿ ಪೇಟೆಗಳನ್ನು ನಿರ್ಮಾಣ ಹಾಗು ಕೃಷಿಕರಿಗೆ ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ನಿರ್ಮಾಣ ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ .
ಹಾಗು ದೇವನಹಳ್ಳಿ ತಾಲ್ಲೂಕಿನ ಅವುತಿ ಗ್ರಾಮದ ಬಳಿ ಹತ್ತು ಎಕರೆ ಕೆಂಪೇಗೌಡ ಸ್ಮಾರಕ ನಿರ್ಮಾಣ ಮಾಡು ಜಮೀನು ಸರ್ಕಾರ ಮುಂಜೂರು ಮಾಡಲಾಗಿದು ಹಾಗು ಮುಂದಿನ ಬಜೆಟ್ ನಲ್ಲಿ ಹತ್ತು ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ತಿಳಿಸಿದ್ದಾರೆ ಎಂದರು
ನಂತರ ನಾಡಪ್ರಭು ಕೆಂಪೇಗೌಡರ ಸಂಘದ ಅಧ್ಯಕ್ಷ ಟಿ. ವಿ ಲಕ್ಷ್ಮೀನಾರಾಯಣ್ ಮಾತನಾಡಿ ಕೆಂಪೇಗೌಡರು ತಂದೆಯಂತೆ ಕೃಷಿ ಮತ್ತು ಗೃಹ ಬಳಗಕೆಗೆ ಸಂಬಂದಧಿಸಿದಂತೆ ನೀರಿನ ಪೂರೈಕೆ ವಿಷಯದಲ್ಲಿ ಆಸಕ್ತಿ ಉಳ್ಳವರಾಗಿದ್ದರು ನಗರ ನಿರ್ಮಾಣಕ್ಕೆ ನಿಂತ ಮೇಲೆ ನೀರಿನ ಸಮರ್ಪಕ ಸರಬರಾಜು ಅಗತ್ಯವೆಂಬುದು ಅರಿವಾಗಿತ್ತು ಇದರಿಂದಾಗಿ ಕೆಂಪೇಗೌಡರು ಸುಭದ್ರವಾದ ರಾಜದಾನಿ ನಿರ್ಮಾಣ ಹಾಗು ನಾಡಿನ ತುಂಬೆಲ್ಲಾ ಕೆರೆ ಕುಂಟೆಗಳನ್ನೂ ನಿರ್ಮಾಣ ಮಾಡಿ ಬೆಂಗಳೂರಿಗೆ ಸುಮಾರು ಐದುನೂರು ವರ್ಷಗಳ ಹಿಂದೆಯೇ ಸುಬದ್ರವಾದ ನಗರ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ಅವರದಾಗಿತ್ತು ಎಂದರು.
ಕೆಂಪೇಗೌಡರ ಆಳ್ವಿಕೆಯಲ್ಲಿ ಎಲ್ಲಾ ದರ್ಮ ಎಲ್ಲಿ ಜಾತಿಯವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು ಹಾಗು ಸಾಮಾಜಿಕ ಪರಿಕಲ್ಪನೆ ಹೊಂದಿದ್ದರು ಎಲ್ಲಾ ರಂಗದಲ್ಲಿ ಪ್ರತಿಯೊಬ್ಬರಿಗೂ ಸರಿಸಮಾನವಾದ ಬದುಕು ಜೀವನಾದರ್ಶದ ಸ್ಪೂರ್ತಿಯಾಗಿ ಇದ್ದರು ಅವರ ತತ್ವ ಸಿದ್ದಾಂತ ನಮ್ಮಗಳ ಜೀವನದಲ್ಲಿ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ. ಶ್ರಿ ಶ್ರೀ ಕುಮಾರ ಚಂದ್ರಶೇಖರ ಸ್ವಾಮಿಜಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕೆಂಗೇರಿ ದೊಡ್ಡಬಳ್ಳಾಪುರ ಶಾಸಕ ದಿರೇಜ್ ಮುನಿರಾಜ ಮಾಜಿ ಎಂ ಎಲ್ ಎ ವೆಂಕಟರಮಣಯ್ಯ ಮಾಜಿ ಎಂ ಎಲ್ ಎ ಗೆಂಟಗಾನಹಳ್ಳಿ ಕೃಷ್ಣಪ್ಪ ಬಿಜೆಪಿ ಹಿರಿಯ ಮುಖಂಡ ಕೆ ಎಂ ಹನುಮಂತರಾಯಪ್ಪ ಜೆಡಿಎಸ್ ಮುಖಂಡ. ಹಾಡೋನಹಳ್ಳಿ ಅಪ್ಪಯ್ಯಣ್ಣ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ ಡಿ ಸತ್ಯನಾರಾಯಣ ಗೌಡ ಮಾಜಿ ರೇಷ್ಮ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷ ಬಿ ಸಿ ನಾರಾಯಣ ಸ್ವಾಮಿ ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್ ಎಂ ಹರೀಶ್ ಗೌಡ ಒಕ್ಕಲಿಗ ಸಂಘ ಪದಾಧಿಕಾರಿಗಳು ಜನಾಂಗದ ಮುಖಂಡರು ಇದ್ದರು.