ನಾಳೆ ದೇವನಹಳ್ಳಿಯಲ್ಲಿ ಪತ್ರಿಕಾ ದಿನಾಚರಣೆ

ದೇವನಹಳ್ಳಿ:ದೇವನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಿನಾಂಕ 10/7/2024 ರಂದು ದೇವನಹಳ್ಳಿ ತಾಲ್ಲೂಕು ವಿಜಯಪುರದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಕೆಚ್ ಮುನಿಯಪ್ಪ ನರವೇರಿಸಲಿದ್ದು,ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ದಿವ್ಯ ಸಾನಿದ್ಯವಹಿಸಲಿದ್ದು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷರಾದ ಶಿವಾನಂದ ತಗಡೂರ ಘನ ಉಪಸ್ಥಿತಿಯಲ್ಲಿ,ದೇವನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಸುನಿಲ್ ರವರು ಕಾರ್ಯಕ್ರಮದ ಅದ್ಯಕತೆ ವಹಿಸಲಿದ್ದಾರೆ.

ಬಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅದ್ಯಕ್ಷರಾದ ಶ್ರೀ.ಬಿ.ವಿಮಲ್ಲಿಕಾರ್ಜುನಯ್ಯರವರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಜಿ.ಸಿ ಲೋಕೇಶ್,ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಕುಸುಮಾ ಪರ್ವತರಾಜು,ಜಿಲ್ಲಾದ್ಯಕ್ಷ ಜಿ.ಶ್ರೀನಿವಾಸ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾದಿಕಾರದ ಅದ್ಯಕ್ಷರಾದ ವಿ.ಶಾಂತಕುಮಾರ್,ವಿಜಯಪುರ ಪುರಸಭೆ ಮಾಜಿ ಅದ್ಯಕ್ಷರಾದ ಎಂ ಸತೀಶ್ ಕುಮಾರ್,ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅದ್ಯಕ್ಷ ಲೋಕೇಶ್,ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲೇಪುರ ಎಂ ಪಿ ಗಿರೀಶ್ ರವರು ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ.ಎನ್ ಶಿವಶಂಕರ್.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾದಿಕಾರಿ ಡಾ.ಕೆ ಆರ್ ಅನುರಾಧ,ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾದಿಕಾರಿಗಳಾದ ಶ್ರೀ ನಿವಾಸ್ ದೇವನಹಳ್ಳಿ ತಹಸಿಲ್ದಾರ್ ಶಿವರಾಜ್ ರವರು ದೇವನಹಳ್ಳಿ ವಿಧಾನಸಭಾ ಮಾಜಿ ಶಾಸಕರುಗಳಾದ,ಮುನಿ ನರಸಿಂಹಯ್ಯ,ನಿಸರ್ಗ ನಾರಾಯಣ ಸ್ವಾಮಿ,ಪಿಳ್ಳ ಮುನಿಶಾಮಪ್ಪ,ಜಿ ಚಂದ್ರಣ್ಣ,ದೇವನಹಳ್ಳಿ ತಾ.ಪಂ ಕಾರ್ಯ ನಿರ್ವಹಣ ಅಧಿಕಾರಿಗಳಾದ ಶ್ರೀನಾಥ್ ಗೌಡ.ತಾ.ಪಂ ಸಹಾಯಕ ನಿರ್ದೇಶಕರಾದ ಅಮರ ನಾರಾಯಣ ಸ್ವಾಮಿ,ದೇವನಹಳ್ಳಿ ಪುರಸಭೆ ಮುಖ್ಯ ಅಧಿಕಾರಿಗಳಾದ ದೊಡ್ಡ ಮಲವಯ್ಯ,ವಿಜಯಪುರ ಪುರಸಭೆ ಮುಖ್ಯ ಅಧಿಕಾರಿಗಳಾದ ಜಿ.ಆರ್ ಸಂತೋಷ್ ರವರು ಸೇರಿದಂತೆ ತಾಲ್ಲೋಕಿನ ಹಲವಾರು ಗಣ್ಯರು ವಿಶೇಷ ಆಹ್ವಾನಿತರಾಗಿ ಬಾಗವಹಿಸಲಿದ್ದಾರೆ ಎಂದು ದೇವನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೋಕು ಪ್ರಧಾನ ಕಾರ್ಯದರ್ಶಿ ಮುನಿನಾರಾಯಣ ಜಿ ಎಂ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ